ರಾಮನಗರ : ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಹಾಲಿ ಸಂಸದ, ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರ ಆಸ್ತಿ 5 ವರ್ಷಗಳಲ್ಲಿ ಬರೋಬ್ಬರಿ ಏರಿಕೆಯಾಗಿದೆ. 2014 ರ ಚುನಾವಣೆ ವೇಳೆ 85 ಕೋಟಿ ರೂಪಾಯಿಯ ಆಸ್ತಿ ಘೋಷಿಸಿದ್ದ ಅವರು ಈ ಬಾರಿ 338 ಕೋಟಿ ರೂಪಾಯಿ ಆಸ್ತಿ ಘೋಷಿಸಿದ್ದಾರೆ.
ಸುರೇಶ್ ಅವರು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ. 33 ಕೋಟಿ ರೂಪಾಯಿ ಚರಾಸ್ತಿ , 305 ಕೋಟಿ ರೂಪಾಯಿ ಸ್ಥಿ
ರಾಸ್ತಿ ಸೇರಿ ಒಟ್ಟು 33.65 ಕೋಟಿ ಆಸ್ತಿ ಇರುವುದಾಗಿ ಘೋಷಿಸಿಕೊಂಡಿದ್ದಾರೆ.
ಬರೋಬ್ಬರಿ 51.93 ಕೋಟಿ ರೂಪಾಯಿ ಸಾಲವನ್ನು ಸಂಸದ ಸುರೇಶ್ ಅವರು ಮಾಡಿಕೊಂಡಿದ್ದಾರೆ.1 ಕೆ.ಜಿ 260 ಗ್ರಾಂ ಚಿನ್ನ , 4 ಕೆ.ಜಿ ಬೆಳ್ಳಿ ಸಂಸದರ ಬಳಿ ಇದೆ.
ಸುರೇಶ್ ಅವರು ಕರ್ನಾಟಕದ ಅತ್ಯಂತ ಶ್ರೀಮಂತ ಅಭ್ಯರ್ಥಿ ಎನಿಸಿಕೊಂಡಿದ್ದಾರೆ. ಸುರೇಶ್ ಎದುರು ಬಿಜೆಪಿಯ ಅಶ್ವತ್ಥ ನಾರಾಯಣ ಅವರು ಕಣದಲ್ಲಿದ್ದಾರೆ.