ಲಂಡನ್: ಮಂಗಳನ ಅಂಗಳದಲ್ಲಿ ಜೀವಜಲವಿದೆಯೇ ಎಂಬ ಬಗ್ಗೆ ಸಂಶೋಧನೆಗಳು ಮುಂದುವರಿದಿರುವಂತೆಯೇ, ಐರೋಪ್ಯ ಬಾಹ್ಯಾಕಾಶ ಸಂಸ್ಥೆ ಮತ್ತು ರಷ್ಯಾ ಬಾಹ್ಯಾಕಾಶ ಸಂಸ್ಥೆಯ ದಿ ಎಕ್ಸೋ ಮಾರ್ಸ್ ಟ್ರೇಸ್ ಗ್ಯಾಸ್ ಆರ್ಬಿಟರ್ ಮಂಗಳ ಗ್ರಹದ ಆಳಕಣಿವೆಯೊಂದರಲ್ಲಿ ಸಾಕಷ್ಟು ಪ್ರಮಾಣದ ನೀರಿರುವುದನ್ನು ಪತ್ತೆಹಚ್ಚಿದೆ.
ಗ್ರಹದ ಮಣ್ಣಿನಲ್ಲಿರುವ ಜಲಜನಕದ ಬಗ್ಗೆ ಅಧ್ಯಯನ ನಡೆಸುತ್ತಿರುವ ಆರ್ಬಿಟರ್‌ನ “ಫ್ರೆಂಡ್’ ಎಂಬ ಸಾಧನವೇ ಮಂಗಳನ ಮೇಲ್ಮೈ ಯ ತಳಭಾಗದಲ್ಲಿ ಜಿನುಗುತ್ತಿದ್ದ ನೀರನ್ನು ಪತ್ತೆಹಚ್ಚಿದೆ. ನೀರು ತುಂಬಿರುವಂಥ ಪ್ರದೇಶವು ನೆದರ್ಲೆಂಡ್‌ನಷ್ಟು ಗಾತ್ರವನ್ನು ಹೊಂದಿದೆ.
ಮಂಗಳ ಗ್ರಹದ ಧ್ರುವೀಯ ಪ್ರದೇಶದಲ್ಲಿ ನೀರು ಕಂಡುಬಂದರೂ ಮೇಲ್ಮೈ ಪ್ರದೇಶದಲ್ಲಿ ಅದು ಗೋಚರಿಸಿಲ್ಲ ಎಂದು ಐರೋಪ್ಯ ಏಜೆನ್ಸಿ ತಿಳಿಸಿದೆ.
ಈ ಹಿಂದೆಯೂ ಮಂಗಳನ ಮೇಲ್ಮೈಯಲ್ಲಿ ಮಂಜುಗಡ್ಡೆಯ ರೂಪದಲ್ಲಿ, ಖನಿಜ ಅಥವಾ ಮಣ್ಣಿನಲ್ಲಿ ಸೇರಿರುವ ರೂಪದಲ್ಲಿ ನೀರು ಪತ್ತೆಯಾಗಿತ್ತು.
ಇದನ್ನೂ ಓದಿ:ಸಾಫ್ಟ್ ವೇರ್ ಕ್ಷೇತ್ರದ ದಿಗ್ಗಜ ಕಂಪನಿ ವೀಮ್ ಸಾಫ್ಟ್ ವೇರ್ ಗೆ ಭಾರತೀಯ ಸಿಇಒ
ಆದರೆ ಈಗ ಗ್ರಹದ ಆಳದ ಧೂಳಿನ ಪದರದ ಕೆಳಭಾಗದಲ್ಲಿ “ನೀರಿನ ಓಯಸಿಸ್’ಗಳನ್ನು ಪತ್ತೆಹಚ್ಚಲಾಗಿದೆ ಎಂದೂ ಸಂಸ್ಥೆ ಹೇಳಿದೆ.