ಸುಬ್ರಹ್ಮಣ್ಯ: ಪುಪ್ಷಗಿರಿ ತಪ್ಪಲು ಪ್ರದೇಶದ ಹಲವು ಕಡೆಗಳಲ್ಲಿ ಡಿ.13ರಂದು ರಾತ್ರಿ ಭೂಮಿ ಕಂಪಿಸಿದ ಮತ್ತು ಶಬ್ಧದ ಅನುಭವ ಆದ ಬಗ್ಗೆ ತಪ್ಪಲು ಪ್ರದೇಶದ ಜನವಸತಿ ಭಾಗಗಳ ನಾಗರಿಕರು ಅನುಭವ ಹಂಚಿಕೊಂಡಿದ್ದಾರೆ.
ದ.ಕ ಮತ್ತು ಕೊಡಗು ಗಡಿಭಾಗದ ಕೊಲ್ಲಮೊಗ್ರು, ಕಲ್ಮಕಾರು. ಹರಿಹರ, ಬಾಳುಗೋಡು, ಐನಕಿದು ದೇವಚಳ್ಲ ಗ್ರಾಮದ ಕರಂಗಲ್ಲು, ದೊಡ್ಡಕಜೆ ಭಾಗಗಳಲ್ಲಿ ಕೂಡ ಜನ ಭೂಮಿ ಕಂಪಿಸಿದ, ಶಬ್ಧದ ಅನುಭವ ಆಗಿರುವುದರ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.
ಪಾತ್ರೆ ಪಗಡೆ ಅಲುಗಾಡಿದೆ, ಭೂಮಿಯೊಳಗಿಂದ ಏನೊ ಶಬ್ಧವಾಗಿದೆ .ಹೀಗೆ ನಾನಾ ತರವಾರಿ ಅನುಭವಗಳ ಅಭಿಪ್ರಾಯಗಳನ್ನು ವ್ಯಕ್ತಪಡಿಸುತಿದ್ದು, ಎಲ್ಲೆಡೆ ಘಟನೆಯದ್ದೆ ಮಾತು ಕೇಳಿ ಬರುತ್ತಿದೆ. ಕಂಪನ ಮತ್ತು ಶಬ್ಧದ ನಿಗೂಡತೆ ಮುಂದುವರೆದಿದ್ದು, ಮತ್ತಷ್ಟೂ ನಿಗೂಡತೆಯ ವಿಚಾರಗಳು ಇಂದು ಹೊರಬೀಳುವ ಸಾಧ್ಯತೆಗಳಿವೆ.
ಡಿ.13ರ ರಾತ್ರಿ ಮೊದಲ ಭಾರಿಗೆ ಹರಿಹರ ಪಳ್ಳತ್ತಡ್ಕ ಗ್ರಾಮದಲ್ಲಿ ಭಾರಿ ಶಬ್ಧ ಕೇಳಿಸಿದ್ದು ಬೆಳಕಿಗೆ ಬಂದಿತ್ತು. ಅದೀಗ ಇತರ ಕಡೆಗಳಿಗೂ ವ್ಯಾಪಿಸಿದೆ. ಈ ಭಾಗದ ಜನರಲ್ಲಿ ಭೀತಿ ಜೊತೆಗೆ ಕುತೂಹಲ ಮನೆ ಮಾಡಿದೆ. ಇದೀಗ ಪುಪ್ಪಗಿರಿ ತಪ್ಪಲಿನ ಗ್ರಾಮಗಳಲ್ಲಿ ಈ ಘಟನೆ ನಡೆದಿದ್ದು, ಎರಡು ವರುಷಗಳ ಹಿಂದೆ ಭಾಗದಲ್ಲಿ ಭಾರಿ ಜಲಸ್ಪೋಟ ಉಂಟಾಗಿತ್ತು ಎನ್ನಲಾಗಿದೆ. ಇದೀಗ ಮತ್ತೆ ಭೂಕಂಪನ ಶಬ್ಧದ ಅನುಭವ ಗುಡ್ಡ ಪ್ರದೇಶದ ವಾಸಿಗಳಲ್ಲಿ ಭಯ ಹುಟ್ಟಿಸಿದೆ.
ಇದನ್ನೂ ಓದಿ: ಹರಿಹರ ಪಳ್ಳತ್ತಡ್ಕದಲ್ಲಿ ಭಾರಿ ಸದ್ದಿಗೆ ಬೆಚ್ಚಿ ಬಿದ್ದ ಜನತೆ, ಶಬ್ದದ ಮೂಲ ನಿಗೂಢ
ಹರಿಹರ ಗ್ರಾಮ