Advertisement

Pacific Ocean; ಸಮುದ್ರದಾಳದಲ್ಲಿ ಬೃಹತ್‌ ಪರ್ವತ ಪತ್ತೆ!

01:39 AM Aug 30, 2024 | Team Udayavani |

ಸಾಕ್ರಾಮೆಂಟೊ: ಪೆಸಿಫಿಕ್‌ ಸಮುದ್ರ ದಾಳದಲ್ಲಿ 3109 ಮೀ.ಗಳಷ್ಟು ಎತ್ತರದ ಬೃಹತ್‌ ಸಮುದ್ರ ಪರ್ವತವೊಂದನ್ನು ಕ್ಯಾಲಿಫೋರ್ನಿಯಾದ ಶ್ಮಿತ್‌ ಓಷನ್‌ ಇನ್‌ಸ್ಟಿಟ್ಯೂಟ್‌ನ ಸಾಗರ ರಚನ ತಜ್ಞರು ಪತ್ತೆ ಮಾಡಿದ್ದಾರೆ.

Advertisement

“ರಿಸರ್ಚ್‌ ವೆಸಲ್‌’ ಹಡಗುಗಳಲ್ಲಿನ ಸೋನಾರ್‌ ತಂತ್ರಜ್ಞಾನದ ಮೂಲಕ ಸಮುದ್ರ ತಳದ ಭೂರಚನೆಯನ್ನು ಚಿತ್ರೀಕರಿಸುವ ಸಂದರ್ಭದಲ್ಲಿ ಈ ಪರ್ವತ ಪತ್ತೆಯಾಗಿದೆ ಎಂದು ಸಾಗರ ರಚನ ತಜ್ಞ ಸಂಸ್ಥೆಯ ಜ್ಯೋತಿಕಾ ವೀರ ಮಣಿ ತಿಳಿಸಿದ್ದಾರೆ. ಸದ್ಯ ಪತ್ತೆಯಾಗಿರುವ ಪರ್ವತವು ಸಾಗರದ ಅಸಂಖ್ಯ ಜೀವ ವೈವಿಧ್ಯಕ್ಕೆ ಆಶ್ರಯತಾಣವಾಗಿದ್ದು, ಸ್ಪಂಜು ಜೀವಿಗಳ ಗುಂಪು, ಪ್ರಾಚೀನ ಹವಳಗಳು, ಗೋಸ್ಟ್ಲಿ ವೈಟ್‌ ಕ್ಯಾಸ್ಪರ್‌ ಆಕ್ಟೋಪಸ್‌, ಫ್ಲೈಯಿಂಗ್‌ ಸ್ಪಾಗೆಟಿ ಮಾನ್ಸ್ಟ್ ರ್ಸ್‌, ಇದೇ ಮೊದಲು ಪತ್ತೆ ಯಾದ ಸ್ಕ್ವಿಡ್‌ನ‌ ಪ್ರಜಾತಿ ಸೇರಿ ಹಲವು ಅಪರೂಪದ ಜೀವಿಗಳು ಪತ್ತೆಯಾಗಿವೆ. ಪರ್ವತದಲ್ಲಿ ಲಭ್ಯವಿರುವ ಜೀವ ವೈವಿಧ್ಯತೆಯ ಸಂಶೋಧನೆಗೆ ಸಮುದ್ರ ದಾಳದ ರೊಬೋಟನ್ನು ಬಳಸಿದ್ದರು. ಜಗತ್ತಿನ 71 ಭಾಗ ಸಮುದ್ರ ಆವರಿಸಿ ದ್ದರೂ, ಇದುವರೆಗೂ ಸಮುದ್ರದ 26 ಪ್ರತಿಶತ ಭಾಗದ ಭೂರಚನೆ ಅಧ್ಯಯನ ನಡೆಸಲಾಗಿದೆ ಎಂದು ಜ್ಯೋತಿಕಾ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next