ಕುಳಗೇರಿ ಕ್ರಾಸ್ (ಬಾಗಲಕೋಟೆ) : ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಭಾರೀ ಪ್ರಮಾಣದ ಅವ್ಯವಹಾರ ನಡೆದಿದೆ ಎಂದು ರೈತರು ಸಂಘದ ಸದಸ್ಯರು ಆರೋಪಿಸಿದರು.
ಪಿಕೆಪಿಎಸ್ ಕಟ್ಟಡದಲ್ಲಿ ಹಮ್ಮಿಕೊಂಡಿದ್ದ ಜನರಲ್ ಮಿಟಿಂಗ್ ನಲ್ಲಿ ವಾರ್ಷಿಕ ಆದಾಯ ಮತ್ತು ಖರ್ಚು-ಜಮಾ ಓದುತ್ತಿದ್ದ ಸಂದರ್ಭದಲ್ಲಿ ಸದಸ್ಯರು ತಮ್ಮ ಆಕ್ರೋಶ ಹೊರಹಾಕಿದರು.
ಸದಸ್ಯರ ಗಮನಕ್ಕೂ ತರದೆ, ಯಾವುದೆ ದಾಖಲೆ ಪಡೆಯದೆ, ಠರಾವು ಮಾಡದೆ, ಸಾಲದ ಅರ್ಜಿಯನ್ನು ಪಡೇಯದೆ ಸಂಘದಲ್ಲಿ ಜಮಾ ಆಗಿದ್ದ ಸುಮಾರು 22.78 ಲಕ್ಷ ರೂ ತಮ್ಮ ತಮ್ಮ ಹೆಸರಿಗೆ ಪಡೆದುಕೊಂಡಿದ್ದಾರೆ.
ರೈತರು ಮಾತ್ರ ಸಾಲ ಪಡೆಯುವ ಹಕ್ಕಿರುವ ಈ ಸಂಘದಲ್ಲಿ ಗುಮಾಸ್ತರಿಂದ ಹಿಡಿದು ಶಾಖಾಧಿಕಾರಿ ವರೆಗೂ ಸಾಲ ಪಡೆದು ಅಕ್ರಮ ಎಸಗಿದ್ದಾರೆ ಎಂದು ಆರೋಪ ಮಾಡಿದ ರೈತರು ತನಿಖೆಗೆ ಆಗ್ರಹಿಸಿದ್ದಾರೆ.
ಶಾಖಾಧಿಕಾರಿ, ಸಿಬ್ಬಂದಿ ಹೆಸರಲ್ಲೂ ಸಾಲ: ಅಷ್ಟೇ ಏಕೆ ಸಂಘದ ಸುಪ್ರೋಜರ್ ಸೇರಿದಂತೆ ಗ್ರಾಮದ ಬಿಡಿಸಿಸಿ ಬ್ಯಾಂಕ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಾಖಾಧಿಕಾರಿಯು ಸಹ ನೀಜವಾದ ರೈತರನ್ನ ಬದಿಗೊತ್ತಿ ತಮ್ಮ ಹೆಸರಲ್ಲಿ ಭೀನ್ ಶೇತ್ಕಿ ಸಾಲ ಪಡೆದುಕೊಂಡಿದ್ದಾರೆ.
ರೈತರ ಹೆಸರಿಗೆ ಮಾತ್ರ ಕೊಡಬೇಕಿದ್ದ ಸಾಲವನ್ನು ಒಂದೇ ಕುಟುಂಬದಲ್ಲಿ ಇಬ್ಬಿಬ್ಬರು ಸಾಲ ಪಡೆದುಕೊಂಡಿದ್ದಾರೆ ಎಂದು ದಾಖಲೆ ಸಮೇತ ಸಭೇಗೆ ಹಾಜರಿದ್ದ ಕೆಲ ಸದಸ್ಯರು ಆರೋಪಿಸಿದರು.
ಸುಮಾರು ವರ್ಷಗಳಿಂದ ಸಾಲಕ್ಕಾಗಿ ಈ ಸಂಘಕ್ಕೆ ಅಲೇಯುತ್ತಿದ್ದೆವೆ. ಬೇಕಾದ ಎಲ್ಲ ದಾಖಲೆಗಳನ್ನ ಕೈಯಲ್ಲಿ ಹಿಡಿದುಕೊಂಡು ಸಾಲ ಕೇಳಿದರೂ ಸಾಲ ಕೊಟ್ಟಿಲ್ಲ ಯಾವ ದಾಖಲೆ ಇಲ್ಲದೆ ಇವರು ಹೇಗೆ ಸಾಲ ಪಡೆದರು ಎಂದು ಪ್ರಶ್ನಿಸಿದರು.
ಈ ಪಿಕೆಪಿಎಸ್ ನಲ್ಲಿ ದೊರೆಯುವ ರೈತರ ಯೋಜನೆಗಳು ನೀಜವಾದ ಯಾವ ಒಬ್ಬ ರೈತನಿಗೂ ಸಿಕ್ಕಿಲ್ಲ. ಎಲ್ಲ ಯೋಜನೆಗಳು ಸಿಬ್ಬಂದಿಗೆ ಮಾತ್ರ ಮಿಸಲಿಟ್ಟಂತಾಗಿದೆ. ಕಾರಣ ಸೂಕ್ತ ತನಿಖೆ ನಡೆಸಿ ರೈತರಿಗಾಗುವ ಅನ್ಯಾಯ ತಡೆಯಬೇಕು ಎಂದರು.
ಸುಮಾರು ವರ್ಷಗಳಿಂದ ಸತ್ತವರ ಹೆಸರಲ್ಲಿ ಸಂಘದವರೇ ಸಾಲ ಪಡೆದುಕೊಂಡು ನುಂಗಿ ಹಾಕಿದ್ದಾರೆ. ವಿಷಯ ಗೊತ್ತಿದ್ದರೂ ಸಂಘದ ಅಧಿಕಾರಿ ವರ್ಗ ಮುಚ್ಚಿ ಹಾಕುವ ಯತ್ನ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ ರೈತರು ಸಂಬಂದಿಸಿದ ಅಧಿಕಾರಿಗಳು ಈ ಬಗ್ಗೆ ಸೂಕ್ತ ತನಿಖೆ ನಡೆಸದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.
ಒಟ್ಟಿನಲ್ಲಿ ಅಸಮಾಧಾನದ ನಡುವೆ ಪಿಕೆಪಿಎಸ್ ಜನರಲ್ ಮಿಟಿಂಗ್ ಚೌ…ಚೌ…ಬಾತ್ ತಿನ್ನುವ ಮೂಲಕ ಮುಕ್ತಾಯವಾಯಿತು. ರೊಚ್ಚಿಗೆದ್ದ ರೈತರೆಲ್ಲ ನಾವು ಶಿರಾ ಉಪ್ಪಿಟ್ಟು ತಿನ್ನೋಕೆ ಬಂದಿಲ್ಲ. ಈ ವಿಷಯ ಇಷ್ಟಕ್ಕೆ ಬಿಡುವುದು ಇಲ್ಲ ಸೂಕ್ತ ತನಿಖೆ ಮಾಡಿಸಿ ನಿಮ್ಮ ಅಕ್ರಮ ಹೊರಗೆ ತಂದು ತಪ್ಪಿಗೆ ಶಿಕ್ಷೆ ಕೊಡಿಸದೆ ಬಿಡುವುದಿಲ್ಲ ಎಂದು ಸಭೆ ಮುಗಿಯುವವರೆಗೂ ರೋಷದ ಮಾತುಗಳನ್ನಾಡಿದರು.