Advertisement
ರಾಜ್ಯ ಸರಕಾರದ ನಿಯೋಗದ ಭಾಗವಾಗಿ ತಾವು ಕೈಗೊಂಡಿದ್ದ ನಾಲ್ಕು ದಿನಗಳ ತಮ್ಮ ದುಬೈ ಪ್ರವಾಸವನ್ನು ಮುಗಿಸಿಕೊಂಡು ಬಂದ ಹಿನ್ನೆಲೆಯಲ್ಲಿ ಅವರು, ಬುಧವಾರ ಇಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
Related Articles
Advertisement
ಅಲ್ಲಿನ ಇಸ್ಲಾಮಿಕ್ ಇನ್ವೆಸ್ಟ್ಮೆಂಟ್ ಗ್ರೂಪ್ ಸಮೂಹವು ಮುಂದಿನ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಹಂತಹಂತವಾಗಿ 3,500 ಕೋಟಿ ರೂ. ಹೂಡಿಕೆ ಮಾಡಲಿದೆ. ಇದರ ಜತೆಗೆ ಈ ಸಮೂಹವು ಬೆಂಗಳೂರಿನಲ್ಲಿ ತನ್ನ ಕಚೇರಿಯನ್ನು ಸದ್ಯದಲ್ಲೇ ಆರಂಭಿಸಲಿದೆ. ಈ ಸಂಬಂಧದ ಒಡಂಬಡಿಕೆಗೆ ದುಬೈನಲ್ಲೇ ಅಂಕಿತ ಹಾಕಲಾಗಿದೆ ಎಂದು ಅಶ್ವತ್ಥನಾರಾಯಣ ತಿಳಿಸಿದರು.
ಹೆಸರಾಂತ ಮೈತ್ರಾ ಆಸ್ಪತ್ರೆಗಳ ಸಮೂಹವು ಬೆಂಗಳೂರಿನಲ್ಲಿ ರೋಬೋಟಿಕ್ ತಂತ್ರಜ್ಞಾನವುಳ್ಳ ಹೈಟೆಕ್ ಆಸ್ಪತ್ರೆಯನ್ನು ಸ್ಥಾಪಿಸಲು ಮುಂದೆ ಬಂದಿದೆ. ಇದರಿಂದಾಗಿ ಅಮೆರಿಕ ಸೇರಿದಂತೆ ಹಲವು ವಿದೇಶಗಳ ಜನರು ಕೂಡ ಅತ್ಯುತ್ತಮ ಚಿಕಿತ್ಸೆಗಾಗಿ ನಮ್ಮ ರಾಜಧಾನಿಗೆ ಬರುವಂತಾಗುತ್ತದೆ. ಇದರ ಜತೆಗೆ ಆಸ್ಟರ್ ಸಮೂಹವು ರಾಜ್ಯದ 2 ಮತ್ತು 3ನೇ ಸ್ತರದ ನಗರಗಳಲ್ಲಿ ಅತ್ಯುತ್ತಮ ಆಸ್ಪತ್ರೆಗಳನ್ನು ಸ್ಥಾಪಿಸಲು ಒಲವು ತೋರಿದೆ ಎಂದು ಅವರು ಹೇಳಿದರು.
ಯುಎಇ ಉದ್ಯಮಿಗಳು ಭಾರತದಲ್ಲಿ ಸದ್ಯದಲ್ಲೇ 125 ಲಕ್ಷ ಕೋಟಿ ರೂಪಾಯಿ ಬಂಡವಾಳವನ್ನು ಹೂಡಲಿದ್ದಾರೆ. ಇದರಲ್ಲಿ ಕರ್ನಾಟಕಕ್ಕೆ ಸಿಂಹಪಾಲು ಹರಿದು ಬರಲಿದೆ. ಈ ಹೂಡಿಕೆದಾರರಲ್ಲಿ ಉದ್ಯಮಿಗಳ ಜೊತೆಗೆ ವೆಂಚರ್ ಕ್ಯಾಪಿಟಲಿಸ್ಟ್ಸ್ ಕೂಡ ಹೆಚ್ಚಿನ ಪ್ರಮಾಣದಲ್ಲಿ ಇದ್ದಾರೆ ಎಂದು ಅಶ್ವತ್ಥನಾರಾಯಣ ಮಾಹಿತಿ ನೀಡಿದರು.
ಇದಷ್ಟೆ ಅಲ್ಲದೆ, ಶಿಕ್ಷಣ ರಂಗದಲ್ಲಿ ರಾಜ್ಯವು ಮಾಡಿರುವ ಸಾಧನೆಗಳಿಂದ ಹಲವು ವಿದೇಶ ವಿ.ವಿ.ಗಳು ಪ್ರಭಾವಿತವಾಗಿವೆ. ಹೀಗಾಗಿ ಅವು ವಿಶೇಷವಾಗಿ ಬೆಂಗಳೂರಿನಲ್ಲಿ ತಮ್ಮ ಕ್ಯಾಂಪಸ್ ತೆರೆಯಲು ಮುಂದೆ ಬಂದಿವೆ. ಈ ಸಂಬಂಧ ಶೀಘ್ರದಲ್ಲೇ ಒಡಂಬಡಿಕೆಗಳನ್ನು ಅಂತಿಮಗೊಳಿಸಲಾಗುವುದು ಎಂದು ಅವರು ತಿಳಿಸಿದರು.