Advertisement

ಉ.ಪ್ರ: ಮಾಜಿ ಸೈನಿಕನ ಮನೆಯಲ್ಲಿ ಅಪಾರ ಪ್ರಮಾಣದ ಸ್ಫೋಟಕ ಪತ್ತೆ

12:29 PM Feb 27, 2017 | Team Udayavani |

ಬಂದಾ, ಉತ್ತರ ಪ್ರದೇಶ : ಬಂದಾ ಜಿಲ್ಲೆಯ ಪತ್ರಾಹಾ ಎಂಬ ಗ್ರಾಮದಲ್ಲಿನ ಮಾಜಿ ಸೈನಿಕನೋರ್ವ ಮನೆಯ ಮೇಲೆ ನಡೆಸಲಾದ ದಾಳಿಯಲ್ಲಿ ಅಪಾರ ಪ್ರಮಾಣದ ಸ್ಫೋಟಕಗಳು ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಖಚಿತ ಮಾಹಿತಿಯನ್ನು ಆಧರಿಸಿ ಪೊಲೀಸರು ಹರಿ ಶಂಕರ್‌ ಕುಶವಾಹಾ ಎಂಬ ಮಾಜಿ ಸೈನಿಕನ ಮನೆಗೆ ದಾಳಿ ನಡೆಸಿದಾಗ ಅಲ್ಲಿ  ನಾಲ್ಕು ಚೀಲಗಳಲ್ಲಿ ತುಂಬಿಸಿಡಲಾಗಿದ್ದ  200 ಕಿಲೋ ಅಮೋನಿಯಂ ನೈಟ್ರೇಟ್‌ ಪತ್ತೆಯಾಯಿತು. ಪೊಲೀಸರು ತನ್ನ ಮನೆಯತ್ತ ಬರುವುದನ್ನು ಕಾಣುತ್ತಲೇ ಕುಶವಾಹಾ ಅಲ್ಲಿಂದ ಪರಾರಿಯಾದರು ಎಂದು ಎಎಸ್‌ಪಿ ಮಾಯಾರಾಮ್‌ ವರ್ಮಾ ಹೇಳಿದ್ದಾರೆ.

ಕ್ವಾರಿಗಳಲ್ಲಿ, ಶಿಲೆ ಕಲ್ಲುಗಳನ್ನು ನ್ಪೋಟಿಸುವುದಕ್ಕೆ ಸಾಮಾನ್ಯವಾಗಿ ಅಮೋನಿಯಂ ನೈಟ್ರೇಟ್‌ ಬಳಸಲಾಗುತ್ತದೆ. ಕುಶವಾಹಾ ಅವರಿಗೆ ಅಮೋನಿಯಂ ನೈಟ್ರೇಟ್‌ ಶೇಖರಿಸಿಡುವ ಯಾವುದೇ ಲೈಸನ್ಸ್‌ ಅಥವಾ ಗುತ್ತಿಗೆ ಇರಲಿಲ್ಲ ಎಂದು ವರ್ಮಾ ತಿಳಿಸಿದ್ದಾರೆ.

ತಲೆ ಮರೆಸಿಕೊಂಡಿರುವ ಆರೋಪಿ ಕುಶವಾಹಾ ಅವರಿಗಾಗಿ  ಪೊಲೀಸರೀಗ ವ್ಯಾಪಕ ಶೋಧದಲ್ಲಿ ತೊಡಗಿದ್ದು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next