Advertisement

ಗಾರ್ಮಿನ್‌ ಸ್ಮಾರ್ಟ್‌ ವಾಚ್‌ ಗಳಿಗೆ ಓಣಂ ಅಂಗವಾಗಿ ಭರ್ಜರಿ ರಿಯಾಯಿತಿ!

09:49 PM Aug 24, 2022 | Team Udayavani |

ಬೆಂಗಳೂರು: ಸ್ಮಾರ್ಟ್‌ ವಾಚ್‌ ಬ್ರಾಂಡ್‌ನಲ್ಲಿ ತನ್ನದೇ ವಿಶಿಷ್ಟ ಸ್ಥಾನ ಗಳಿಸಿರುವ ಸ್ವಿಸ್‌ ಮೂಲದ ಗಾರ್ಮಿನ್‌ ಕಂಪೆನಿ, ಓಣಂ ಅಂಗವಾಗಿ ತನ್ನ ಆಯ್ದ ಜಿಪಿಎಸ್‌ ಆಧಾರಿತ ವಾಚುಗಳ ಬೆಲೆಯಲ್ಲಿ 9 ಸಾವಿರ ರೂ.ಗಳವರೆಗೂ ರಿಯಾಯಿತಿ ಪ್ರಕಟಿಸಿದೆ.

Advertisement

ಫೋರ್‌ ರನ್ನರ್‌ 245, ಫೋರ್‌ ರನ್ನರ್‌ 745 ಹಾಗೂ ಫೋರ್‌ ರನ್ನರ್‌ 45 ಮಾಡೆಲ್‌ಗಳ ಮೇಲೆ ಈ ರಿಯಾಯಿತಿ ಇರುತ್ತದೆ. ಫೋರ್‌ ರನ್ನರ್‌ ಸರಣಿಯ ವಾಚ್‌ಗಳು ಫಿಟ್‌ನೆಸ್‌ ಪ್ರಾಧಾನ್ಯತೆ ಹೊಂದಿರುವ ಕ್ರೀಡಾಪಟುಗಳಿಗಾಗಿ ವಿನ್ಯಾಸಗೊಂಡಿವೆ. ಈ ವಾಚ್‌ಗಳಿಗೆ ಓಣಂ ಆಚರಣೆಯ ಶುಭ ಸಂದರ್ಭದಲ್ಲಿ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ಈ ರಿಯಾಯಿತಿ ದರದ ಮಾರಾಟ ಆಗಸ್ಟ್‌ 31ರವರೆಗೂ ಅನ್ವಯವಾಗುತ್ತದೆ.

ಗಾರ್ಮಿನ್‌ ಫೋರ್‌ ರನ್ನರ್‌ 45-ಲಾವಾ ರೆಡ್‌: ಸಾಮಾನ್ಯ ಬೆಲೆ 20,990 ರೂ. ಓಣಂ ಕೊಡುಗೆಯ ಬೆಲೆ12,990 ರೂ.

ಗಾರ್ಮಿನ್‌ ಫೋರ್‌ರನ್ನರ್‌ 45 ಬ್ಲ್ಯಾಕ್‌, ಸಾಮಾನ್ಯ ದರ 20,999 ರೂ. ಓಣಂ ಕೊಡುಗೆ ಬೆಲೆ 13,990 ರೂ.

ಗಾರ್ಮಿನ್‌ ಫೋರ್‌ ರನ್ನರ್‌ 745-ಬ್ಲ್ಯಾಕ್‌ ಹಾಗೂ ಮ್ಯಾಗ್ಮಾ ರೆಡ್‌- ಸಾಮಾನ್ಯ ದರ 51,990 ರೂ. ಓಣಂ ಕೊಡುಗೆ ದರ, 42,990 ರೂ.,

Advertisement

ಗಾರ್ಮಿನ್‌ ಫೋರ್‌ ರನ್ನರ್‌ 245 ಮ್ಯೂಸಿಕ್‌, ಬ್ಲ್ಯಾಕ್‌- ಸಾಮಾನ್ಯ ದರ 36,490 ರೂ. ಓಣಂ ಕೊಡುಗೆ ದರ 30,990 ರೂ.

ಗಾರ್ಮಿನ್‌ ಫೋರ್‌ ರನ್ನರ್‌ 245 ಮ್ಯೂಸಿಕ್‌, ಲಾವಾ ರೆಡ್‌ 36,490 ರೂ., ಓಣಂ ಕೊಡುಗೆ ದರ 29,990 ರೂ.

Advertisement

Udayavani is now on Telegram. Click here to join our channel and stay updated with the latest news.

Next