Advertisement

Bengaluru: ನಗರದಲ್ಲಿ ಝೀರೋ ಬ್ಯಾಕ್ಟೀರಿಯ ಸಂಸ್ಕರಿಸಿದ ನೀರಿಗೆ ಭಾರಿ ಬೇಡಿಕೆ

10:40 AM May 04, 2024 | Team Udayavani |

ಬೆಂಗಳೂರು: ಸಂಸ್ಕರಿಸಿದ ನೀರು ಬಳಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬೆಂಗಳೂರು ಜಲಮಂಡಳಿ ಕೈಗೊಂಡಿರುವಂತಹ ಕ್ರಮಗಳಿಗೆ ಐಟಿ ಕಂಪನಿಗಳಿಂದ ಸಕಾರಾತ್ಮವಾದ ಪ್ರತಿಕ್ರಿಯೆ ದೊರೆಯುತ್ತಿದೆ.

Advertisement

ಐಐಎಸ್‌ಸಿ ವಿಜ್ಞಾನಿಗಳ ಸಹಯೋಗದಲ್ಲಿ ಅಳವಡಿಸಿ ಕೊಳ್ಳಲಾಗಿರುವ ದೇಶೀಯ ತಂತ್ರಜ್ಞಾನದ ಮೂಲಕ ಜಲಮಂಡಳಿ ಉತ್ಪಾದಿಸುತ್ತಿರುವ ಝೀರೋ ಬ್ಯಾಕ್ಟೀ ರಿಯ ಸಂಸ್ಕರಿಸಿದ ನೀರನ್ನು ವಿಪ್ರೋ ಕಂಪನಿಗೆ ಸರಬ ರಾಜು ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ವಿಪ್ರೋ ಎಸ್‌ಇಝಡ್‌ ಕೊಡತಿಯಲ್ಲಿ ಸಂಸ್ಕರಿಸಿದ ನೀರು ಪೂರೈಸುವ ಕಾರ್ಯದ ಮೇಲುಸ್ತುವಾರಿ ವಹಿಸಿದ್ದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷ ಡಾ.ರಾಮ್‌ ಪ್ರಸಾತ್‌ ಮನೋಹರ್‌ ಈ ಬಗ್ಗೆ ಮಾಹಿತಿ ನೀಡಿ, ಜಲಮಂಡಳಿಯಿಂದ ನಗರದಲ್ಲಿ 34ಕ್ಕೂ ಹೆಚ್ಚು ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು ಪ್ರಾರಂಭಿಸಲಾಗಿದೆ.

ಇವುಗಳ ಮೂಲಕ ಪ್ರತಿದಿನ 1,200 ಎಂ.ಎಲ್‌.ಡಿ ಯಷ್ಟು ಉತ್ತಮ ಗುಣಮಟ್ಟದ ಸಂಸ್ಕರಿಸಿದ ನೀರು ಲಭ್ಯವಾಗುತ್ತಿದೆ. ಇದರ ಬಳಕೆಯನ್ನು ಹೆಚ್ಚಿಸುವ ಮೂಲಕ ಕಾವೇರಿ ನೀರಿನ ಮೇಲಿನ ಒತ್ತಡವನ್ನು ಕಡಿಮೆ ಮಾಡುವುದು ನಮ್ಮ ಗುರಿಯಾಗಿದೆ. ಈ ನಿಟ್ಟಿನಲ್ಲಿ ಕಳೆದ 2 ತಿಂಗಳಲ್ಲಿ ಕೈಗೊಂಡ ಕಾರ್ಯಗಳಿಗೆ ಐಟಿ ಕಂಪನಿಗಳು ಹಾಗೂ ಸಗಟು ನೀರು ಬಳಕೆದಾರರು ಸಾಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸಂಸ್ಕರಿಸಿದ ನೀರಿನ ಬೇಡಿಕೆ 60 ಸಾವಿರ ಲೀಟರ್‌ ಗಳಿಂದ 6 ಎಂಎಲ್‌ ಡಿಗೆ ತಲುಪಿದೆ. ಇದನ್ನು ಇನ್ನಷ್ಟು ಹೆಚ್ಚಿಸುವ ಗುರಿ ಇದೆ ಎಂದರು.

ಪ್ರತಿದಿನ 3 ಲಕ್ಷ ಸಂಸ್ಕರಿಸಿದ ನೀರು: ವಿಪ್ರೋ ಕಂಪನಿ ಕೆಲವು ದಿನಗಳ ಹಿಂದೆ ಸಂಸ್ಕರಿಸಿದ ನೀರು ಪೂರೈಸುವಂತೆ ಜಲಮಂಡಳಿಗೆ ಅರ್ಜಿ ಸಲ್ಲಿಸಿತ್ತು. ಐಐಎಸ್‌ಸಿ ವಿಜ್ಞಾನಿಗಳ ಸಹಯೋಗ ಮತ್ತು ಮಾರ್ಗದರ್ಶನದಲ್ಲಿ ಅಳವಡಿಸಿಕೊಳ್ಳಲಾಗಿರುವ ನೂತನ ತಂತ್ರಜ್ಞಾನದ ಮೂಲಕ ಶುದ್ಧೀಕರಿಸಲಾಗುತ್ತಿರುವ ಝೀರೋ ಬ್ಯಾಕ್ಟೀರಿಯಲ್‌ ಉತ್ತಮ ಗುಣಮಟ್ಟದ ಸಂಸ್ಕರಿಸಿದ ನೀರನ್ನು ಪೂರೈಸಲು ಪ್ರಾರಂಭಿಸಲಾಗಿದೆ. ಈಗಾಗಲೇ ಇನ್ನಿತರ ಕಂಪನಿಗಳಾದ ಎಚ್‌.ಎ.ಎಲ…, ಬ್ರೂಕ್‌μàಲ್ಡ್‌ ಮತ್ತು ಅಡೋಬ್‌ ಸಿಸ್ಟಮ್ಸ್‌ ಸೇರಿದಂತೆ 40 ಐಟಿ ಕಂಪನಿಗಳು ಬೇಡಿಕೆಯಿಟ್ಟಿದ್ದು, ಜಲಮಂಡಳಿ ಅಧಿಕಾರಿಗಳು ಮಾತುಕತೆ ನಡೆಸುತ್ತಿದ್ದಾರೆ ಎಂದರು.

ಈ ವೇಳೆ ನಿರ್ವಹಣಾ ವಿಭಾಗದ ಮುಖ್ಯ ಅಭಿಯಂತರ ಕುಮಾರ್‌ ನಾಯ್ಕ್, ಕಾರ್ಯನಿರ್ವಾಹಕ ಎಂಜಿನಿಯರ್‌ ನಾಗರಾಜ್‌, ರಾಹುಲ್‌ ಪ್ರಿಯದರ್ಶಿ ಇತರರಿದ್ದರು.

Advertisement

ನಿತ್ಯ ಕೋಟಿ ಲೀಟರ್‌ ಸಂಸ್ಕರಿತ ನೀರು ಉತ್ಪಾದನೆ ಸಾಮರ್ಥ್ಯ : ಐಐಎಸ್‌ಸಿ ವಿಜ್ಞಾನಿಗಳ ಸಹಯೋಗ ಮತ್ತು ಮಾರ್ಗದರ್ಶನದಲ್ಲಿ ಬೆಂಗಳೂರು ಜಲಮಂಡಳಿಯ ಎಂಜಿನಿಯರ್‌ಗಳು ತ್ಯಾಜ್ಯ ನೀರು ಸಂಸ್ಕರಣೆಯಲ್ಲಿ ದೇಶಿಯ ತಂತ್ರಜ್ಞಾನ ರೂಪಿಸಿದ್ದಾರೆ. 2 ವಾರಗಳ ಹಿಂದೆ ಪ್ರಾರಂಭಿಸಲಾದ ಈ ಯೋಜನೆಯ ಮೂಲಕ ಇಂದು ಪ್ರತಿದಿನ ಸುಮಾರು 1 ಕೋಟಿ ಲೀಟರ್‌ ನಷ್ಟು ಝೀರೋ ಬ್ಯಾಕ್ಟೀರಿಯಲ್‌ ಸಂಸ್ಕರಿಸಿದ ನೀರು ಉತ್ಪಾದನೆಯ ಸಾಮರ್ಥ್ಯವನ್ನು ಜಲಮಂಡಳಿ ಅಳವಡಿಸಿಕೊಂಡಿದೆ. ಇದೀಗ ನಗರದ ಅಗರ, ಕೆ.ಸಿ. ವ್ಯಾಲಿ ಮತ್ತು ಬೆಳ್ಳಂದೂರು ಎಸ್‌.ಟಿ.ಪಿ ಗಳಲ್ಲಿ ಈ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದ್ದು, ಈ ನೀರಿಗೆ ಐಟಿ ಕಂಪನಿಗಳಿಂದ ಬೇಡಿಕೆ ಬಂದಿದೆ. ‌

ಪ್ರಮುಖ ಐ.ಟಿ ಕಂಪನಿಗಳು ಸ್ವತ್ಛತೆ ಹಾಗೂ ಏರ್‌ ಕಂಡಿಷನಿಂಗ್‌ ಸೇರಿದಂತೆ ಹಲವಾರು ಕಾರ್ಯಗಳಿಗೆ ಸಂಸ್ಕರಿಸಿದ ನೀರು ಬಳಕೆಗೆ ಮುಂದಾಗಿವೆ. ಸಂಸ್ಕರಿಸಿದ ನೀರಿನ ಬಳಕೆ ಹೆಚ್ಚು ಮಾಡುವುದರಿಂದ ಅಗತ್ಯವಿರುವ ಕಡೆಗಳಲ್ಲಿ ಕಾವೇರಿ ನೀರು ಪೂರೈಸಲು ಸಾಧ್ಯವಾಗಲಿದೆ. ಅಂತರ್ಜಲದ ಮೇಲಿನ ಒತ್ತಡವೂ ಕಡಿಮೆ ಆಗಲಿದೆ. ಬೆಂಗಳೂರು ಜಲಮಂಡಳಿ ಐ.ಟಿ ಕಂಪನಿಗಳ ಜತೆಗಿದ್ದು, ಅವಶ್ಯಕತೆ ಇರುವಷ್ಟು ನೀರು ಪೂರೈಸಲು ಸಿದ್ಧವಿದೆ. ಡಾ|ರಾಮ್‌ ಪ್ರಸಾತ್‌ ಮನೋಹರ್‌, ಜಲಮಂಡಳಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next