Advertisement
ಅಕಾಲಿಕ ಮಳೆಯಿಂದ ಭಾಗಶಃ ಹಾಳಾಗಿದ್ದರೂ ಸಹ ತೊಗರಿ ಕಟಾವು ಮಾಡಲು ಕೃಷಿ ಕಾರ್ಮಿಕರ ಕೊರತೆಯಿಂದಾಗಿ ರೈತರು ಯಂತ್ರದ ಮೊರೆ ಹೋಗಿದ್ದು ತೊಗರಿ ಕಟಾವು ಯಂತ್ರಕ್ಕೆ ಭಾರಿ ಡಿಮ್ಯಾಂಡ್ ಬಂದಿದೆ.
Related Articles
Advertisement
ಕಳೆದ ಒಂದು ವಾರದಿಂದ ಅರೆ ಬರೆ ಬಿಸಿಲು ಕಾಣಿಸಿಕೊಂಡಿದ್ದರಿಂದ ತೊಗರಿ ಕಟಾವಿಗೆ ಕೂಲಿಕಾರರ ಕೊರತೆ ಕಾಡಿದೆ. ರೈತರು ಅನಿವಾರ್ಯವಾಗಿ ತೊಗರಿ ಕಟಾವು ಯಂತ್ರಗಳ ನಿರೀಕ್ಷೆಯಲ್ಲಿದ್ದಾರೆ.
ಹೊರ ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ರಾಜ್ಯಗಳ ರಾಶಿ ಯಂತ್ರಗಳು ನೀರಾವರಿ ಪ್ರದೇಶದಲ್ಲಿ ಬಿಡುವಿಲ್ಲದೆ ಕಾರ್ಯನಿರ್ವಹಿಸುತ್ತಿವೆ. ಸದ್ಯ ಮುಗಿಯುತ್ತಿದ್ದಂತೆ ತೊಗರಿ ರಾಶಿ ಯತ್ತ ಮುಖ ಮಾಡಿವೆ. ಎಕರೆಗೆ 1200ರೂ.ದಿಂದ 1300ರೂ ವರೆಗೆ ಕಟಾವು ಮಾಡಲಾಗುತ್ತಿದೆ ಎಂದು ತೊಗರಿ ಬೆಳೆದ ಬಸನಗೌಡ ಎನ್ ಪಾಟೀಲ, ಸುರೇಶ ಮಂಗಳೂರು ತಿಳಿಸಿದರು.
ತೊಗರಿ ಹೊಟ್ಟಿಗೆ ಡಿಮ್ಯಾಂಡ್:
ಈ ಯಂತ್ರಗಳ ಮೂಲಕ ಕಟಾವು ಮಾಡಿದರೆ ತೊಗರಿ ಹೊಟ್ಟು ನೆಲಕ್ಕೆ ಚಲ್ಲಾಡುತ್ತದೆ. ಇದರಿಂದ ಜಾನುವಾರುಗಳಿಗೆ ಹಲವು ವರ್ಷಗಳವರೆಗೆ ಸಂಗ್ರಹಿಸಿಡುವುದು ಅಸಾದ್ಯವೆನಿಸಿದೆ. ಬದಲಾದ ಪರಿಸ್ಥಿತಿಯಲ್ಲಿ ಮತ್ತೆ ಅಕಾಲಿಕ ಮಳೆಯ ಬಗ್ಗೆ ಹವಮಾನದ ಮುನ್ಸೂಚನೆ ನೀಡಿದ್ದು ಅಷ್ಟರೊಳಗೆ ಕಟಾವು ಮುಗಿಸುವ ದಾವಂತದಲ್ಲಿರುವ ರೈತರು ಅನಿವಾರ್ಯ ಪರಿಸ್ಥಿತಿಯಲ್ಲಿ ತೊಗರೆ ಹೊಟ್ಟಿನ ಬಗ್ಗೆ ಗಮನ ಕಡಿಮೆಯಾಗುತ್ತಿದೆ.
–ವರದಿ: ಮಂಜುನಾಥ ಮಹಾಲಿಂಗಪುರ ಕುಷ್ಟಗಿ