Advertisement
ಆಟಿಕೆ ಕ್ಷೇತ್ರದಲ್ಲಿ “ವೋಕಲ್ ಫಾರ್ ಲೋಕಲ್”ಗೆ ಪ್ರಧಾನಿ ನರೇಂದ್ರ ಮೋದಿ ಅವರು ಆದ್ಯತೆ ನೀಡಿದ ಬಳಿಕ ಭಾರತದ ಆಟಿಕೆ ರಫ್ತು ಪ್ರಮಾಣ ಗಣನೀಯ ವಾಗಿ ಏರಿಕೆಯಾಗಿದೆ. ದೇಶಿಯವಾಗಿ ತಯಾರಿಸುವ ಕರ್ನಾಟಕದ ಚನ್ನಪಟ್ಟಣ ಗೊಂಬೆ ಸಹಿತ ವಿವಿಧ ಆಟಿಕೆಗಳಿಗೆ ಬೇಡಿಕೆ ಹೆಚ್ಚಳವಾಗಿದೆ. ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯು, ಆಟಿಕೆಗಳ ದೇಶೀಯ ಉತ್ಪಾದನೆಯನ್ನು ಉತ್ತೇಜಿಸಲು ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಭಾರತದಿಂದ ರಫ್ತು ಹೆಚ್ಚಿಸುವ ನಿಟ್ಟಿನಲ್ಲಿ ಜಾಗತಿಕ ಮಾರಾಟಗಾರರೊಂದಿಗೆ ಭಾರತೀಯ ತಯಾರಕರು ಒಪ್ಪಂದ ಮಾಡಿಕೊಳ್ಳಲು ಸಹಾಯ ಮಾಡುತ್ತಿದೆ.“40 ಕೋಟಿ ಡಾಲರ್ ಮೌಲ್ಯದ ಆಟಿಕೆ ಉತ್ಪನ್ನಗಳ ಖರೀದಿಗೆ ಅಮೆರಿಕ ಮೂಲದ ದೈತ್ಯ ಮಾರಾಟಗಾರ ಕಂಪೆನಿ ಸಂಪರ್ಕಿಸಿದೆ,” ಎಂದು ಟಾಯ್ಸ ಅಸೋಸಿಯೇಶನ್ ಆಫ್ ಇಂಡಿಯಾದ ಅಧ್ಯಕ್ಷ ಮನು ಗುಪ್ತ ತಿಳಿಸಿದ್ದಾರೆ.