Advertisement

ಸುಯೆಜ್‌ ಕಾಲುವೆಯಲ್ಲಿ ಸಿಲುಕಿದ ಬೃಹತ್‌ ಸರಕು ನೌಕೆ; ಸಂಚಾರ ಸ್ತಬ್ಧ

07:19 PM Mar 24, 2021 | Team Udayavani |

ದುಬೈ: ಆಫ್ರಿಕಾ ಭೂಖಂಡವನ್ನು ಸಿನಾಯಿ ಪರ್ಯಾಯದ್ವೀಪದಿಂದ ಪ್ರತ್ಯೇಕಿಸುವಂಥ ಕಿರಿದಾದ ಮಾನವ ನಿರ್ಮಿತ ಕಾಲುವೆಯೊಂದರಲ್ಲಿ ಬೃಹತ್‌ ಸರಕು ಸಾಗಣೆ ನೌಕೆಯೊಂದು ಸಿಲುಕಿಕೊಂಡಿದ್ದು, ಈಜಿಪ್ಟ್ ಸುಯೆಜ್‌ ಕಾಲುವೆಯಲ್ಲಿ ಹಡಗುಗಳ ಸಂಚಾರವನ್ನೇ ಸ್ತಬ್ಧಗೊಳಿಸಿದೆ. ಈಗಾಗಲೇ ಕೊರೊನಾ ಸೋಂಕಿನಿಂದಾಗಿ ಅಲ್ಲೋಲಕಲ್ಲೋಲವಾಗಿರುವ ಜಾಗತಿಕ ಶಿಪ್ಪಿಂಗ್‌ ವ್ಯವಸ್ಥೆಗೆ ಈ ಘಟನೆಯು ಮತ್ತಷ್ಟು ಆಘಾತ ತಂದೊಡ್ಡಿದೆ.

Advertisement

ಪನಾಮಾದಿಂದ ಆಗಮಿಸಿದ ಎಂವಿ ಎವರ್‌ ಗಿವನ್‌ ಎಂಬ ಬೃಹತ್‌ ಸರಕು ನೌಕೆಯು ಏಷ್ಯಾ ಮತ್ತು ಯುರೋಪ್‌ ನಡುವೆ ವ್ಯಾಪಾರದ ಸರಕುಗಳನ್ನು ಒಯ್ಯುತ್ತಿತ್ತು. ಏಕಾಏಕಿ ನೌಕೆಯು ಕಾಲುವೆಯ ಒಂದು ಬದಿಗೆ ಸರಿದು, ದುರಸ್ತಿಗೀಡಾಗಿದೆ. ಈ ಘಟನೆಗೆ ನಿಖರ ಕಾರಣವೇನೆಂದು ತಿಳಿದುಬಂದಿಲ್ಲ.

ಆದರೆ, ನೌಕೆಯು ಕೆಂಪು ಸಮುದ್ರದಿಂದ ಸುಯೆಜ್‌ ಕಾಲುವೆ ಪ್ರವೇಶಿಸುತ್ತಿದ್ದಂತೆ ಜೋರಾಗಿ ಬೀಸಿದ ಬಿರುಗಾಳಿಯೇ ಘಟನೆಗೆ ಕಾರಣ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ :ಗುಯಾನಾದಿಂದ ಭಾರತಕ್ಕೆ ತೈಲ ಹೊತ್ತ ನೌಕೆಯ ಪಯಣ! ಹೊಸ ತೈಲ ಉತ್ಪಾದಕ ದೇಶದಿಂದ ತೈಲ ಖರೀದಿ

Advertisement

Udayavani is now on Telegram. Click here to join our channel and stay updated with the latest news.

Next