ಇಸ್ಲಮಾಬಾದ್: ಪಾಕಿಸ್ಥಾನದಲ್ಲಿ ಶನಿವಾರ ರಾತ್ರಿ ವಿದ್ಯುತ್ ಸಮಸ್ಯೆಯಾಗಿದ್ದು, ದೇಶದ ಪ್ರಮುಖ ನಗರಗಳು ಕತ್ತಲಲ್ಲಿ ಮುಳುಗಬೇಕಾಯಿತು.
ಪಾಕಿಸ್ಥಾನದ ಪ್ರಮುಖ ನಗರಗಳಾದ ಕರಾಚಿ, ಇಸ್ಲಮಾಬಾದ್, ಲಾಹೋರ್, ರಾವಲ್ಪಿಂಡಿ, ಮುಲ್ತಾನ್ ನಲ್ಲಿ ವಿದ್ಯುತ್ ಸಮಸ್ಯೆ ಎದುರಾಯಿತು.
‘ಪ್ರಸರಣೆಯಲ್ಲಿನ ಆವರ್ತನ ಸಂಖ್ಯೆಯು ದಿಢೀರ್ 50ರಿಂದ ಸೊನ್ನೆಗೆ ಕುಸಿದಿದೆ. ಹೀಗಾಗಿ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಆವರ್ತನ ಕುಸಿತಕ್ಕೆ ಕಾರಣವೇನು ಎಂಬುದನ್ನು ನಾವು ಪತ್ತೆ ಮಾಡುತ್ತಿದ್ದೇವೆ,’ ಎಂದು ಇಂಧನ ಸಚಿವ ಒಮರ್ ಅಯೂಬ್ ಟ್ವೀಟ್ ಮಾಡಿ ಹೇಳಿದ್ದಾರೆ.
ಇಸ್ಲಾಮಾಬಾದ್‌ನ ಉಪ ಆಯುಕ್ತ ಹಮ್ಜಾ ಶಫ್ಕತ್ ಈ ಕುರಿತು ಟ್ವೀಟ್ ಮಾಡಿದ್ದು, ‘ರಾಷ್ಟ್ರೀಯ ವಿದ್ಯುತ್ ಪ್ರಸರಣಾ ಕಂಪನಿಯ (ಎನ್‌ಟಿಡಿಸಿ) ವಿದ್ಯುತ್ ಮಾರ್ಗಗಳು ಟ್ರಿಪ್ ಆಗಿವೆ. ಹೀಗಾಗಿ ಪೂರೈಕೆಯಲ್ಲಿ ಸಮಸ್ಯೆಯಾಗಿದೆ. ಪರಿಸ್ಥಿತಿ ಸಹಜ ಸ್ಥಿತಿಗೆ ಬರಲು ಸಮಯ ಹಿಡಿಯುತ್ತದೆ’ ಎಂದು ಹೇಳಿದ್ದರು.
ಇದನ್ನೂ ಓದಿ:ದಾರಿ ತಪ್ಪಿಸುತ್ತಿರುವ ಮೊಬೈಲ್ ಗೇಮ್: ಆನ್‌ಲೈನ್ ಆಟಕ್ಕೆ ಮನೆಯಿಂದಲೇ ಕಳವು!
ಸ್ಥಳೀಯ ಮಾಧ್ಯಮಗಳ ಪ್ರಕಾರ ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲೂ ವಿದ್ಯುತ್ ಸಮಸ್ಯೆ ಎದುರಾಗಿತ್ತು. ಮೊಬೈಲ್ ಮತ್ತು ಇಂಟರ್ನೆಟ್ ನೆಟ್ ವರ್ಕ್ ಸೇವೆಯಲ್ಲೂ ಸಮಸ್ಯೆ ಉಂಟಾಗಿತ್ತು. ಕರಾಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕೂಡಾ ವಿದ್ಯುತ್ ಕಡಿತ ಸಮಸ್ಯೆ ಎದುರಿಸಬೇಕಾಯಿತು.