Advertisement

ಸಂಭ್ರಮದ ಹುಚ್ಚೇಶ್ವರ ರಥೋತ್ಸವ

02:01 PM Feb 20, 2021 | Team Udayavani |

ಗುಳೇದಗುಡ್ಡ: ಕೋಟೆಕಲ್‌ ಗ್ರಾಮದ ಶ್ರೀ ಹೊಳೆ ಹುಚ್ಚೇಶ್ವರ ಮಹಾ ಸಂಸ್ಥಾನ ಮಠದ ರಥೋತ್ಸವ ಅಪಾರ ಭಕ್ತ ಸಮೂಹದನಡುವೆ ಶುಕ್ರವಾರ ಸಂಭ್ರಮದಿಂದ ನೆರವೇರಿತು.

Advertisement

ಬೆಳಗ್ಗೆ ಕರ್ತೃ ಮರುಳಶಂಕರದೇವರ ಗದ್ದುಗೆ, ಹತ್ತನೇ ಹುಚ್ಚೇಂದ್ರರು, ಹನ್ನೆರಡನೇ ಹುಚ್ಚೇಶ್ವರ ಮಹಾಸ್ವಾಮಿಗಳಗದ್ದುಗೆಗೆ ಶಾಂತವೀರಯ್ಯ ಹುಚ್ಚೇಶ್ವರಮಠನೇತೃತ್ವದಲ್ಲಿ ಮಹಾರುದ್ರಾಭಿಷೇಕ,ಮಹಾಮಂಗಳಾರತಿ ಸೇರಿದಂತೆ ಧಾರ್ಮಿಕ ವಿಧಿ  ವಿಧಾನಗಳು ನೆರವೇರಿದವು.ರಥೋತ್ಸವದಲ್ಲಿ ಉಪ್ಪಿನಬೆಟಗೇರಿ ಶ್ರೀಮೂರುಸಾವಿರ ವಿರಕ್ತಮಠದ ಶ್ರೀ ಕುಮಾರವಿರೂಪಾಕ್ಷ ಸ್ವಾಮೀಜಿ, ಹೊಳೆಹುಚ್ಚೇಶ್ವರ ಸಂಸ್ಥಾನ ಮಠದ ಹೊಳೆಹುಚ್ಚೇಶ್ವರ ಶ್ರೀಗಳು, ಮುನವಳ್ಳಿ ಶ್ರೀ ಸೋಮಶೇಖರಮಠದ ಶ್ರೀ ಮುರುಘರಾಜೇಂದ್ರಸ್ವಾಮೀಜಿ, ಮುರುಘಾಮಠದ ಕಾಶಿನಾಥ ಮಹಾಸ್ವಾಮಿಗಳು, ಗಂಗಾವತಿ ಕಲ್ಮಠದ ಡಾ| ಕೊಟ್ಟೂರು ಸ್ವಾಮೀಜಿ, ಅಮೀನಗಡಶ್ರೀ ಪ್ರಭುಶಂಕರೇಶ್ವರ ಮಠದ ಶ್ರೀ ಶಂಕರರಾಜೇಂದ್ರ ಸ್ವಾಮೀಜಿ, ಗುಳೇದಗುಡ್ಡ ಮರಡಿಮಠದ ಶ್ರೀ ಅಭಿನವ ಕಾಡಸಿದ್ದೇಶ್ವರಸ್ವಾಮೀಜಿ, ಕಮತಗಿ ಹಿರೇಮಠದ ಶ್ರೀಶಿವಕುಮಾರ ಶಿವಾಚಾರ್ಯ ಸ್ವಾಮೀಜಿ,ಕೋಟೆಕಲ್‌-ಗುಳೇದಗುಡ್ಡ ಅಮರೇಶ್ವರ ಮಠದ ಶ್ರೀ ನೀಲಕಂಠ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಈ ಸಂದರ್ಭದಲ್ಲಿ ಭುಜಂಗರಾವ್‌ದೇಸಾಯಿ, ಶಶಿಧರ ದೇಸಾಯಿ,ರಾಜು ದೇಸಾಯಿ, ಸಂಜಯಬರಗುಂಡಿ, ಜಿಪಂ ಮಾಜಿ ಉಪಾಧ್ಯಕ್ಷ ಹನಮಂತ ಮಾವಿನಮರದ, ರಾಜುಶೆಟ್ಟರ, ಬೇಟಗೇರಿಗೌಡ್ರ, ತಿಪ್ಪಾಗೌಡ್ರ, ಮಂಟಾಗೌಡ್ರ, ವೈ.ಜಿ. ತಳವಾರ,ಮೈಲಾರಿ ಆಲೂರ, ಜಿ.ಎಸ್‌. ಕೋಟಿ,ಮುತ್ತು ಮೊರಬದ, ಸಂಗಣ್ಣ ಪಟ್ಟಣಶೆಟ್ಟಿ ಸೇರಿದಂತೆ ಅಪಾರ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next