Advertisement

ಹುಬ್ಬಳ್ಳಿ-ವಾರಾಣಸಿ ರೈಲಿಗೆ ಉತ್ಕೃಷ್ಟ ರೇಕ್‌ ಅಳವಡಿಕೆ

11:23 AM May 25, 2019 | pallavi |

ಹುಬ್ಬಳ್ಳಿ: ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗ ವತಿಯಿಂದ ನವೀಕೃತ “ಉತ್ಕೃಷ್ಟ’ ರೇಕ್‌ ಅಳವಡಿಸಲಾದ ಹುಬ್ಬಳ್ಳಿ-ವಾರಾಣಸಿ (17323/17324) ಎಕ್ಸ್‌ಪ್ರೆಸ್‌ ರೈಲಿಗೆ ಹುಬ್ಬಳ್ಳಿ ನಿಲ್ದಾಣದಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು.

Advertisement

ಹಿರಿಯ ಟೆಕ್ನಿಶಿಯನ್‌ಗಳಾದ ಸುರೇಶ ಸದ್ಲಾಪುರ ಹಾಗೂ ಆರ್‌.ಟಿ. ಹಂಚಿನಾಳ ನವೀಕೃತ ರೈಲಿಗೆ ಚಾಲನೆ ನೀಡಿದರು. ಹುಬ್ಬಳ್ಳಿ ವಿಭಾಗೀಯ ಹಿರಿಯ ಮೆಕ್ಯಾನಿಕಲ್‌ ಎಂಜಿನಿಯರ್‌ ಅಹ್ಮದ್‌ ವಾಸಿ ಖಾನ್‌ ಮಾಧ್ಯಮದವರೊಂದಿಗೆ ಮಾತನಾಡಿ, ಹುಬ್ಬಳ್ಳಿ ಕಾರ್ಯಾಗಾರದಲ್ಲಿ 17 ಕೋಚ್‌ಗಳ ನೂತನ ರೇಕ್‌
ವಿನ್ಯಾಸಗೊಳಿಸಲಾಗಿದೆ. 60 ಲಕ್ಷ ರೂ. ವೆಚ್ಚದಲ್ಲಿ ರೇಕ್‌ ವಿನ್ಯಾಸಗೊಳಿಸಲಾಗಿದೆ. ರೈಲಿನ ಹೊರ ಮೇಲ್ಮೈಗೆ ಪಿಯು ಪೇಂಟ್‌ ಮಾಡಲಾಗಿದೆ. ಮೆಟ್ಯಾಲಿಕ್‌ ಅಲ್ಯುಮಿನಿಯಂ ಕಂಪೋಸಿಟ್‌ ಪೆನಲ್‌, ಸಾಫ್ಟ್‌ ವಾಲ್‌Ìಗಳಿದ್ದು, ವೆಂಟಿಲೇಶನ್‌ ಸೌಲಭ್ಯ ಸುಧಾರಣೆ ಮಾಡಲಾಗಿದೆ.

ಎಸಿ ಕೋಚ್‌ಗಳಿಗಾಗಿ ಜಾರಿಕೆಯಾಗದ ನೆಲಹಾಸು ಹೊಂದಿದ ಟಾಯ್ಲೆಟ್‌, ಸ್ಟೇನ್‌ಲೆಸ್‌ ಸ್ಟೀಲ್‌ ಡಸ್ಟ್‌ಬಿನ್‌, ಹ್ಯಾಂಡ್‌ ಸ್ಯಾನಿಟೈಜರ್‌ ಒದಗಿಸಲಾಗಿದೆ. ಎಲ್‌ಇಡಿ ಲೈಟಿಂಗ್‌ ಒದಗಿಸಲಾಗಿದೆ. ಅಂಧರಿಗಾಗಿ ಬ್ರೈಲ್‌ ಸೀಟ್‌ ನಂಬರಿಂಗ್‌ ಇದ್ದು, ಪ್ರವಾಸೋದ್ಯಮ ಪ್ರೋತ್ಸಾಹಿಸುವ ಪ್ರವಾಸಿ ಕ್ಷೇತ್ರಗಳ ಪೋಸ್ಟರ್‌ಗಳನ್ನು ಕೋಚ್‌ಗಳಲ್ಲಿ ಅಂಟಿಸಲಾಗಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಇನ್ನೂ 9 ದೀರ್ಘ‌ ಪ್ರಯಾಣದ ರೈಲುಗಳನ್ನು ಮೇಲ್ದರ್ಜೆಗೇರಿಸಲು ಉತ್ಕೃಷ್ಟ ರೇಕ್‌ ಅಳವಡಿಸುವ ಗುರಿಯಿದೆ. ಪ್ರಯಾಣಿಕರಿಗೆ ಹೆಚ್ಚು ಸೌಲಭ್ಯಗಳನ್ನು ಒದಗಿಸುವುದು ನಮ್ಮ ಉದ್ದೇಶ. ಎಂಜಿನ್‌ನಲ್ಲಿ ಯಾವುದೇ ಬದಲಾವಣೆಯಿಲ್ಲ. ಶುಕ್ರವಾರ ಸಂಜೆ ಹುಬ್ಬಳ್ಳಿಯಿಂದ ಹೊರಟ ರೈಲು ರವಿವಾರ ಬೆಳಗ್ಗೆ
ವಾರಣಾಸಿಗೆ ತಲುಪಲಿದೆ ಎಂದರು.

ಕೆಲ ರೈಲು ಸಂಚಾರ ಮಾರ್ಗ ಬದಲು
ಹುಬ್ಬಳ್ಳಿ: ಕೆಲ ತಾಂತ್ರಿಕ ಕಾರಣಗಳಿಂದಾಗಿ ಕೃಷ್ಣರಾಜಪುರಂ-ಭಾಗಲ್ಪುರ (06525) ಜನಸಾಧಾರಣ ಒನ್‌ ವೇ ಎಕ್ಸ್‌ಪ್ರೆಸ್‌ ರೈಲು ಮೇ 26ರಂದು ಮಾರ್ಗ ಬದಲಾವಣೆಯೊಂದಿಗೆ ಸಂಚರಿಸಲಿದೆ. ರೈಲು ಜೋಲಾರಪೆಟ್ಟೆ$ç, ರೇಣಿಗುಂಟ, ವಿಜಯವಾಡ, ಭುವನೇಶ್ವರ, ಹಿಲ್ಜಿ, ಅನಸೋಲ, ಜಮಲ್ಪುರ ಮಾರ್ಗದ ಬದಲು ಜೋಲಾರಪೆಟ್ಟೆ$ç, ರೇಣಿಗುಂಟ, ವಿಜಯವಾಡ, ಭುವನೇಶ್ವರ, ಹಿಲ್ಜಿ, ಅನಸೋಲ, ದುರ್ಗಾಪುರ, ಸೈಂಥಿಯ, ರಾಮಪುರ ಹಾಲ್ಟ್, ಗುಮನಿ, ಬರ್ಥವಾ, ಸಾಹಿಬಗಂಜ್‌ ಮಾರ್ಗವಾಗಿ ಚಲಿಸಲಿದೆ. ಮೇ 26ರಂದು ಮಧ್ಯಾಹ್ನ 2 ಗಂಟೆಗೆ ಕೃಷ್ಣರಾಜಪುರಂನಿಂದ ಕೃಷ್ಣರಾಜಪುರಂ-ಭಾಗಲ್ಪುರ ರೈಲು ಮೇ 28ರಂದು ಬೆಳಗ್ಗೆ 10:30ಕ್ಕೆ ಭಾಗಲ್ಪುರಕ್ಕೆ ಬಂದು ಸೇರಲಿದೆ.

ಭಾಗಶಃ ರದ್ದು: ಮೇ 26ರಂದು ತುಮಕೂರು-ಮಲ್ಲಸಂದ್ರ-ಗುಬ್ಬಿ ನಿಲ್ದಾಣಗಳ ಮಧ್ಯೆ ಟ್ರಾÂಕ್‌ ಡಬ್ಲಿಂಗ್‌ ನಿಮಿತ್ತ ನಾನ್‌ ಇಂಟರ್‌ಲಾಕಿಂಗ್‌ ಕಾಮಗಾರಿ ಕೈಗೆತ್ತಿಕೊಳ್ಳುವುದರಿಂದ ಬೆಂಗಳೂರು-ತುಮಕೂರು (56221/56222, 56225/56226) ಪ್ಯಾಸೆಂಜರ್‌ ರೈಲುಗಳ ಸಂಚಾರವನ್ನು ಭಾಗಶಃ ರದ್ದುಪಡಿಸಲಾಗಿದೆ. ಬೆಂಗಳೂರು -ತುಮಕೂರು ಪ್ಯಾಸೆಂಜರ್‌ ರೈಲುಗಳ ಸಂಚಾರವನ್ನು ಹಿರೇಹಳ್ಳಿ ಹಾಗೂ ತುಮಕೂರು ಮಧ್ಯೆ ಭಾಗಶಃ ರದ್ದುಗೊಳಿಸಲಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next