Advertisement

ಹುಬ್ಬಳ್ಳಿ : ದಾಖಲೆ ಇಲ್ಲದೆ ಸಾಗಿಸಲಾಗುತ್ತಿದ್ದ 42 ಲಕ್ಷ ರೂ ಜಪ್ತಿ

09:55 AM May 08, 2019 | Team Udayavani |

ಹುಬ್ಬಳ್ಳಿ :ಚುನಾವಣಾಧಿಕಾರಿಗಳು ಅಗಡಿ ಚೆಕ್‌ಪೋಸ್ಟ್‌ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 42 ಲಕ್ಷ ರೂಪಾಯಿ ಹಣವನ್ನುಜಪ್ತಿ ಮಾಡಿದ್ದಾರೆ.

Advertisement

ಸೋಮವಾರ ತಡರಾತ್ರಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಬ್ಯಾಂಕ್‌ ಸಿಬಂದಿಗಳ ಬಳಿ ಇದ್ದ ಹಣವನ್ನು ಜಪ್ತಿ ಮಾಡಿದ್ದಾರೆ.

ಕುಂದಗೋಳ ಉಪಚುನಾವಣೆಯಲ್ಲಿ ಬಳಕೆ ಮಾಡಿಕೊಳ್ಳಲು ಒಯ್ಯಲಾಗುತ್ತಿತ್ತು ಎಂದು ಹೇಳಲಾಗಿದೆ.

ಸಿಬಂದಿಗಳು 12 ಲಕ್ಷ ರೂಪಾಯಿಗೆ ಏಕ್ಸಿಸ್‌ ಬ್ಯಾಂಕ್‌ನ ದಾಖಲಾತಿಗಳನ್ನು ತೋರಿಸಿದ್ದಾರೆ. ಉಳಿದ ಹಣಕ್ಕೆ ಇಂದು ದಾಖಲಾತಿಗಳನ್ನು ನೀಡುವುದಾಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next