Advertisement

ಹುಬ್ಬಳ್ಳಿ: ತಾಪಮಾನ ಹೆಚ್ಚಳ ತಡೆಗೆ ಗಿಡ ನೆಡುವುದೇ ಪರಿಹಾರ

06:09 PM Jun 13, 2024 | Team Udayavani |

ಉದಯವಾಣಿ ಸಮಾಚಾರ
ಹುಬ್ಬಳ್ಳಿ: ಅಭಿವೃದ್ಧಿ ಹೆಸರಲ್ಲಿ ಗಿಡ-ಮರ ನಾಶಪಡಿಸುತ್ತಿರುವುದರಿಂದ ತಾಪಮಾನ ಹೆಚ್ಚಾಗುತ್ತಿದೆ. ಇದನ್ನು ತಡೆಗಟ್ಟಬೇಕೆಂದರೆ ಸಾಲುಮರದ ತಿಮ್ಮಕ್ಕನಂತೆ ಗಿಡ ನೆಡುವ ಕಾರ್ಯ ನಮ್ಮಿಂದಾಗಬೇಕು ಎಂದು ಶ್ರೀ ಬಸವೇಶ್ವರ ರೂರಲ್‌ ಎಜ್ಯುಕೇಶನ್‌ ಟ್ರಸ್ಟ್‌ ನ ಅಧ್ಯಕ್ಷ ಶರಣಪ್ಪ ಕೊಟಗಿ ಹೇಳಿದರು.

Advertisement

ವಿಜಯನಗರ ಪಿಯು ಕಾಲೇಜಿನಲ್ಲಿ ಜಿಲ್ಲಾ ಅಭಿಯಾನ ಪರಿಸರ ಸಮಿತಿ, ವಿದ್ಯಾನಗರದ ಕೆಎಸ್‌ಎಸ್‌ ಪಿಯು ಕಾಲೇಜ್‌ ಮತ್ತು ಶ್ರೇಯಾ ಸೇವಾ ಫೌಂಡೇಶನ್‌ ವತಿಯಿಂದ ಹಮ್ಮಿಕೊಂಡಿದ್ದ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಾಗತಿಕ ತಾಪಮಾನದಿಂದ ಪ್ರಕೃತಿಯು ನಮ್ಮ ಮೇಲೆ ಮುನಿಸಿಕೊಳ್ಳುತ್ತಿದೆ. ನಾವು ಪರಿಸರ ಕಾಯ್ದುಕೊಳ್ಳಬೇಕು ಮತ್ತು ಗಿಡ-ಮರಗಳನ್ನು ಹೆಚ್ಚೆಚ್ಚು ಬೆಳೆಸಿ ಅವುಗಳ ಪಾಲನೆ ಮಾಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕೆಎಸ್‌ಎಸ್‌ ಉಪಾಧ್ಯಕ್ಷ ಡಾ| ಶಾಂತಣ್ಣ ಕಡಿವಾಲ ಮಾತನಾಡಿ, ಗಿಡ-ಮರಗಳಿಲ್ಲದಿದ್ದರೆ ಭೂಮಿಯ ಫಲವತ್ತತೆ ಹಾಳಾಗುತ್ತದೆ. ಮುಂದಿನ ಯುವ ಪೀಳಿಗೆ ಆಕ್ಸಿಜನ್‌ ಬ್ಯಾಗ್‌ಗಳನ್ನು ಹಾಕಿಕೊಂಡು ಬದುಕುವ ಪರಿಸ್ಥಿತಿ ಬರುತ್ತದೆ ಎಂದು ಎಚ್ಚರಿಸಿದರು.

ಸಮಾಜ ಸೇವಕರಾದ ಸಂತೋಷ ಶೆಟ್ಟಿ, ಡಾ| ರಮೇಶ ಮಹಾದೇವಪ್ಪನವರ, ಸಂತೋಷ ವೆರ್ಣೆಕರ ಮಾತನಾಡಿದರು. ಪರಿಸರ
ಗೀತಗಾಯನ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಪಾಲ್ಗೊಂಡ ಮಹಿಳಾ ಸಂಘಗಳಿಗೆ ಬಹುಮಾನ ಮತ್ತು ಸಸಿ ವಿತರಿಸಲಾಯಿತು. ವಿ.ಜಿ. ಪಾಟೀಲ, ಸಂದೀಪ ಬೂದಿಹಾಳ, ತೀರ್ಪುಗಾರರಾದ ಲತಾ ಶಿಂಧೆ, ವೈ.ಎನ್‌. ಮಾಳಗಿ, ಗದಗಯ್ಯ ಹಿರೇಮಠ, ಬಸವರಾಜ ಸುಳ್ಳದ, ಜಯಶ್ರೀ ಗೌಳಿ ಇನ್ನಿತರರಿದ್ದರು. ಡಾ| ರಾಮು ಮೂಲಗಿ ಸ್ವಾಗತ ಗೀತೆ ಹೇಳಿದರು. ಆರ್‌.ಎಂ. ಗೋಗೇರಿ
ಸ್ವಾಗತಿಸಿದರು. ಬೀರೇಶ ತಿರಕಪ್ಪನವರ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next