Advertisement

Hubli-ಹುಬ್ಬಳ್ಳಿ: ಗಣೇಶೋತ್ಸವ ಸಂಭ್ರಮಕ್ಕೆ ಬೆಲೆ ಏರಿಕೆ ಬಿಸಿ

06:49 PM Aug 08, 2023 | Team Udayavani |

ಹುಬ್ಬಳ್ಳಿ: ಗಣೇಶೋತ್ಸವ ಸಂಭ್ರಮಕ್ಕೆ ಬೆಲೆ ಏರಿಕೆ ಬಿಸಿ ತಟ್ಟಲಿದೆ. ಸಣ್ಣ ಗಣಪತಿ ಮೂರ್ತಿಗಳಿಗೆ 100-200 ಏರಿಕೆ ಕಂಡರೆ ದೊಡ್ಡ ದೊಡ್ಡ ಗಣೇಶ ಮೂರ್ತಿಗಳಿಗೆ 10ರಿಂದ 15 ಸಾವಿರ ರೂ.ಗಳವರೆಗೆ ಏರಿಕೆಯಾಗಿರುವುದು
ಕಂಡು ಬಂದಿದೆ.

Advertisement

ದೊಡ್ಡ ದೊಡ್ಡ ಗಣೇಶ ಮೂರ್ತಿ ತಯಾರಿಕೆಗೆ ಬೇಕಾಗುವ ಹುಲ್ಲು, ಕೊಳಲಿ, ಕಟ್ಟಿಗೆ, ಮಣ್ಣು, ಬಣ್ಣ ಸೇರಿದಂತೆ ಜತೆಗೆ ಕಲಾವಿದರ ವೇತನವೂ ಏರಿಕೆ ಕಂಡಿದೆ. ಇದರಿಂದ ಈ ಬಾರಿ ಗಣೇಶ ಮೂರ್ತಿಗಳ ಬೆಲೆಯಲ್ಲಿ ಕೊಂಚು ಏರಿಕೆ ಕಾಣಲಿದೆ. ಪಿಒಪಿ ಗಣೇಶ ಮೂರ್ತಿಗಳು ಬಂದ್‌ ಆದ ನಂತರ ಇದೀಗ ಮಣ್ಣಿನ ಗಣೇಶ ಮೂರ್ತಿಗಳೇ ಲಭ್ಯವಾಗುತ್ತಿವೆ. ಕೋವಿಡ್‌ ಸಮಯದಲ್ಲಿ ಸಣ್ಣ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಮುಂದಾಗಿದ್ದ ಗಣೇಶೋತ್ಸವ ಮಂಡಳಿಗಳು ಇದೀಗ ಕಳೆದ ವರ್ಷದಿಂದ ಮತ್ತೇ 21 ಅಡಿ ಗಣಪ, 18 ಅಡಿ, 15 ಅಡಿ, 10 ಅಡಿ, 8 ಅಡಿ, 6 ಅಡಿ, 4 ಅಡಿ ಗಣಪ ಪ್ರತಿಷ್ಠಾಪಿಸಲು ಸಿದ್ಧತೆಗಳು ನಡೆದಿವೆ. ಈಗಾಗಲೇ ದೊಡ್ಡ ದೊಡ್ಡ ಗಣೇಶ ಮೂರ್ತಿಗಳ ತಯಾರಿಕೆ ಜೋರಾಗಿ ನಡೆದಿದ್ದು, ಮಧ್ಯ ಮಧ್ಯ ಸುರಿಯುತ್ತಿರುವ ಮಳೆ ಅಡ್ಡಿಯಾಗಿದೆ.

ಸಿದ್ಧಗೊಳ್ಳುತ್ತಿದೆ ಹುಬ್ಬಳ್ಳಿ ಕಾ ರಾಜಾ: ಇಲ್ಲಿನ ಮರಾಠಾ ಗಲ್ಲಿಯಲ್ಲಿ ಪ್ರತಿಷ್ಠಾಪಿಸಲು 21 ಅಡಿ ಗಣೇಶ ಮೂರ್ತಿಯನ್ನು ಮರಾಠಾಗಲ್ಲಿಯಲ್ಲೇ ಅಪ್ಪು ಪಾಲ್‌ ಹಾಗೂ ಸಪನ್‌ ಪಾಲ್‌ ತಂಡ ಸಿದ್ಧಪಡಿಸುತ್ತಿದೆ.

ಮೂರ್ತಿ ತಯಾರಿಕೆಗಿಲ್ಲ ಸಮಯ: ಕಳೆದ ಹಲವು ವರ್ಷಗಳಿಂದ ನಗರದಲ್ಲಿ ಗಣೇಶೋತ್ಸವ ಆಚರಣೆಗೆ ಆಗಮಿಸುವ ಅಪ್ಪುಪಾಲ್‌ ಗಣೇಶೋತ್ಸವ ಹಾಗೂ ದಸರಾ ಆಚರಣೆ ಮುಗಿಸಿಕೊಂಡೇ ತಮ್ಮೂರಿಗೆ ಮರಳುತ್ತಾರೆ. ಈ ವರ್ಷ ಸುಮಾರು 90ಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನು ಸಿದ್ಧಪಡಿಸುತ್ತಿದ್ದಾರೆ.

ಬುಕ್ಕಿಂಗ್‌ ಬಂದ್‌: ದೊಡ್ಡ ಮೂರ್ತಿಗಳ ತಯಾರಿಕೆಗೆ ಸಮಯ ಹೆಚ್ಚು ಬೇಕಿರುವುದರಿಂದ ಕಡಿಮೆ ಎಂದರೂ 2 ತಿಂಗಳ ಮುಂಚೆಯೇ ಬುಕ್ಕಿಂಗ್‌ ಮಾಡಿರಬೇಕು. ಹೀಗಾಗಿ ಈಗಾಗಲೇ ಬುಕ್ಕಿಂಗ್‌ ಬಂದ್‌ ಮಾಡಲಾಗಿದೆ ಎನ್ನುತ್ತಾರೆ
ಕಲಾವಿದ ಸಪನ್‌ ಪಾಲ್‌ ಹೇಳುತ್ತಾರೆ.

Advertisement

ದರ ಏರಿಕೆಯಾಗಿರುವುದು ನಿಜ ಆದರೆ ಜನರೇ ತಿಳಿದು ಹೆಚ್ಚಿನ ದರ ನೀಡಬೇಕು. ಹಿಂದೆ ನಮಗೆ ಇಂತಹದೇ ಗಣೇಶ ಮೂರ್ತಿ ಬೇಕು, ಬೇಕಾದಷ್ಟು ದರವಾಗಲಿ ಎಂದು ಹೇಳಿ ಮೂರ್ತಿಗಳನ್ನು ಮಾಡಿಸುತ್ತಿದ್ದರು. ಆದರಿಂದು ಅಂತಹ ಸ್ಥಿತಿ ಇಲ್ಲ. ಇರುವ ಗಣೇಶ ಮೂರ್ತಿಗಳಲ್ಲಿ ಆಯ್ಕೆ ಮಾಡಿಕೊಳ್ಳುತ್ತಾರೆ.
ಗಣೇಶ ಪೂಣಾರಕರ, ಗಣೇಶ ಮೂರ್ತಿ ಕಲಾವಿದರ ಸಂಘದ ಅಧ್ಯಕ್ಷ.

ಸದ್ಯ ದೊಡ್ಡ ಗಣೇಶ ಮೂರ್ತಿಗಳ ತಯಾರಿಕೆಗೆ ಬುಕ್ಕಿಂಗ್‌ ಬಂದ್‌ ಮಾಡಿದ್ದು, ಸದ್ಯ ಆರ್ಡರ್‌ ಪಡೆದ ಗಣೇಶ ಮೂರ್ತಿಗಳನ್ನು
ಸಿದ್ಧಪಡಿಸಿ ಕೊಟ್ಟರೆ ಸಾಕಾಗುತ್ತದೆ. ದರದಲ್ಲಿ ಏರಿಕೆಯಾಗಿದ್ದು ಜನರು ಸ್ಪಂದಿಸಿದರೆ ಉತ್ತಮ.
ಅಪ್ಪು ಪಾಲ್‌, ಸಪನ್‌ ಪಾಲ್‌
ಗಣೇಶ ಮೂರ್ತಿ ಕಲಾವಿದ.

ಗಣೇಶೋತ್ಸವ ಸಮೀಪಿಸುತ್ತಿದ್ದು, ಮನೆಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳಿಗೆ ಕಲಾವಿದರು ಗಣೇಶ ಮೂರ್ತಿ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದ ಈ ವರ್ಷವೂ 100-200 ರೂ.ದರ ಏರಿಕೆ ಕಂಡು ಬರಲಿದೆ.
ಮಂಜುನಾಥ ಕಾಂಬ್ಳೆ, ಮೂರ್ತಿ ಕಲಾವಿದ

*ಬಸವರಾಜ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next