Advertisement

ಸೇವಾ ಸದನದಲ್ಲಿ ಮೊಳಗಿದ ಮಂಗಳ ವಾದ್ಯ

12:47 PM Aug 29, 2019 | Naveen |

ಹುಬ್ಬಳ್ಳಿ: ಕೇಶ್ವಾಪುರದ ಬನಶಂಕರಿ ಬಡಾವಣೆಯ ಸೇವಾ ಸದನದ ಮಾತೃಛಾಯಾ ಬಾಲ ಕಲ್ಯಾಣ ಕೇಂದ್ರದಲ್ಲಿದ್ದು ವಿದ್ಯಾರ್ಜನೆ ಮಾಡಿದ ಇಬ್ಬರು ಯುವತಿಯರು ಬುಧವಾರ ಗೃಹಸ್ಥಾಶ್ರಮಕ್ಕೆ ಕಾಲಿಟ್ಟರು. ಈ ಅಪರೂಪದ ಮದುವೆಗೆ ಗಣ್ಯರು ಸಾಕ್ಷಿಯಾದರು.

Advertisement

ಜಾಹ್ನವಿ ಹಾಗೂ ಸಂಜನಾ ಸಪ್ತಪದಿ ತುಳಿದ ಯುವತಿಯರು. ಜಾಹ್ನವಿ ಅಂಕೋಲಾ ತಾಲೂಕಿನ ಹೆಗ್ಗದ್ದೆಯ ಕಿರಣರಾಜ್‌ರನ್ನು, ಸಂಜನಾ ಇದೇ ತಾಲೂಕಿನ ಅಚವೆ ತಾರಿಗದ್ದೆಯ ರವೀಂದ್ರ ಭಟ್ರನ್ನು ವರಿಸಿದರು. ಇಬ್ಬರೂ ಯುವಕರು ಕೃಷಿ ಮಾಡಿಕೊಂಡಿದ್ದು, ಅಡಿಕೆ, ತೆಂಗು, ಮಾವಿನ ತೋಟವಿದ್ದು ಉತ್ತಮ ಆದಾಯ ಪಡೆಯುತ್ತಿದ್ದಾರೆ.

ಮಂಗಳವಾರದಿಂದಲೇ ಮದುವೆಯ ಸಿದ್ಧತಾ ಕಾರ್ಯಗಳು ನಡೆದಿದ್ದವು. ಚಪ್ಪರ ಪೂಜೆ, ಮೆಹಂದಿ ಕಾರ್ಯಕ್ರಮಗಳು ನಡೆದವು. ಸುತ್ತಲಿನ ಬಡಾವಣೆಯ ಮಹಿಳೆಯರು ಮದುವೆ ಸಿದ್ಧತೆಯಲ್ಲಿ ಪಾಲ್ಗೊಂಡರು. ಕೆಲ ತಿಂಗಳ ಹಿಂದೆ ಎರಡೂ ವರ ಕುಟುಂಬಗಳು ಮಾತೃಛಾಯಾ ಬಾಲ ಕಲ್ಯಾಣ ಕೇಂದ್ರಕ್ಕೆ ಭೇಟಿ ನೀಡಿದ್ದರು. ಕೇಂದ್ರದ ವತಿಯಿಂದ ಎರಡೂ ಕುಟುಂಬದವರ ಮನೆಗೆ ತೆರಳಿ ಸ್ಥಿತಿ-ಗತಿ ತಿಳಿದು ಮದುವೆಗೆ ಸಮ್ಮತಿಸಲಾಗಿತ್ತು. ಜಾಹ್ನವಿ ಎಸ್‌ಎಸ್‌ಎಲ್ಸಿವರೆಗೆ ಶಿಕ್ಷಣ ಪಡೆದಿದ್ದು, ಕಳೆದ 4 ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿದ್ದರು. ಸಂಜನಾ ಹೋಮ್‌ ನರ್ಸಿಂಗ್‌ ಕೋರ್ಸ್‌ ಅಧ್ಯಯನ ಮಾಡಿದ್ದಾರೆ. ಬುಧವಾರ ಮಧ್ಯಾಹ್ನ 12:45ಕ್ಕೆ ಗುರು ಹಿರಿಯರ ಸಮ್ಮುಖದಲ್ಲಿ ಗಣ್ಯರು ನವದಂಪತಿಗಳಿಗೆ ಅಕ್ಷತೆ ಹಾಕಿ ಆಶೀರ್ವದಿಸಿದರು. ನಂದಕುಮಾರ- ಭಾರತಿ ನಂದಕುಮಾರ (ಜಾಹ್ನವಿ) ಮತ್ತು ಶಾಂತಣ್ಣ ಕಡಿವಾಲ-ಗೀತಾಂಜಲಿ ಕಡಿವಾಲ (ಸಂಜನಾ) ಕನ್ಯಾದಾನ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next