Advertisement
ತಾಲೂಕಿನ ಹಾಸಗಲ್ ಗ್ರಾಮದ ಶರಣಪ್ಪ ತಳವಾರ, ವಿರುಪನಗೌಡ ಗೌಡ್ರ, ಶರಣಪ್ಪ ಓಜಿನಳ್ಳಿ ಎನ್ನುವ ವ್ಯಕ್ತಿಗಳು ಎರಡುವರೆ ತಿಂಗಳ ಹಿಂದೆ ಗ್ರಾಮದ ಚನ್ನಬಸಪ್ಪ ಅಳ್ಳಳ್ಳಿ ಅವರ 15 ವರ್ಷದ ಪುತ್ರ ಸಂದೀಪ (ಹೆಸರು ಬದಲಿಸಿದೆ) ನನ್ನು ಹುಬ್ಬಳ್ಳಿಯಲ್ಲಿ ಜೆಜೆಎಂ ಕೆಲಸಕ್ಕೆ ಕಳುಹಿಸಿಕೊಡು ಎಂದು ಕೇಳಿದ್ದಾರೆ. ಚೆನ್ನಬಸಪ್ಪ ಅವರು ನನ್ನ ಪುತ್ರನು ಇನ್ನೂ ಅಪ್ತಾಪ್ತನಿದ್ದು ಆತನನ್ನು ಕೆಲಸಕ್ಕೆ ಕಳಿಸುವುದಿಲ್ಲ ಎಂದಿದ್ದಾರೆ.
ವಿಭೂತಿ, ಕುಂಕುಮ ಹಚ್ಚಿ, ನಿಂಬೆ ಹಣ್ಣಿನ ಸರವನ್ನು ಕೊರಳಲ್ಲಿ ಹಾಕಿದ್ದಾರೆ. ಬಾಲಕನ ತಲೆಗೆ ಶರಣಪ್ಪ ಎನ್ನುವ ವ್ಯಕ್ತಿ ನಿಂಬೆಹಣ್ಣಿನ ರಸವನ್ನು ಹಿಂಡಿದ್ದಾನೆ. ಬಾಲಕ ಬೆತ್ತಲೆಯಾಗಿರುವಾಗ ಮರ್ಮಾಂಗವನ್ನು ಮುಟ್ಟಿದ್ದಾರೆ. ಇದೆಲ್ಲವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ನೀನು ಹೀಗೆ ಬೆತ್ತಲೆ ಸೇವೆ ಮಾಡುತ್ತಲೇ ಇರಬೇಕು ಹೇಳಿದ್ದಾರೆ. ಹಲವು ಬಾರಿ ಬೆತ್ತಲೆ ವಿಡಿಯೋ ಚಿತ್ರಿಕರಿಸಿದ್ದಾರೆ. ಇದನ್ನು ಯಾರಿಗಾದರೂ ಹೇಳಿದರೆ ನಿನ್ನ ಹಾಗೂ ನಿಮ್ಮಪ್ಪನನ್ನು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ. ಬಾಲಕನ ಬೆತ್ತಲೆ ವೀಡಿಯೋಗಳು ಗ್ರಾಮದ ವ್ಯಕ್ತಿಯೋರ್ವನ ಬಳಿ ಹರಿದಾಡಿವೆ. ತಂದೆ ಚನ್ನಬಸಪ್ಪ ಅಳ್ಳಳ್ಳಿಗೂ ಈ ವಿಷಯ ಗೊತ್ತಾಗಿ ಮಗನನ್ನು ಭಾನುವಾರವಷ್ಟೇ ಊರಿಗೆ ಕರೆಯಿಸಿ ಕೇಳಿದ್ದಾನೆ.
Related Articles
Advertisement
ಅಪ್ತಾಪ್ತ ಬಾಲಕನನ್ನು ಅತ್ಯಂತ ವಿಕೃತಿಯ ರೀತಿಯಲ್ಲಿ ಬೆತ್ತಲೆ ಪೂಜೆ ಮಾಡಿಸಿದ್ದು ನಿಜಕ್ಕೂ ನಾಗರಿಕೆ ಸಮಾಜವನ್ನು ತಲೆ ತಗ್ಗಿಸುವಂತೆ ಮಾಡಿದೆ. ಆ ಬಾಲಕನನ್ನು ವಾಮಾಚಾರಕ್ಕೆ ಬಳಕೆ ಮಾಡಲಾಗಿದೆಯೋ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಸೇರಿದಂತೆ ಕುಟುಂಬ ವರ್ಗ ಒತ್ತಾಯ ಮಾಡಿದೆ.
ಕೊಪ್ಪಳ ತಾಲೂಕಿನ ಹಾಸಗಲ್ ಗ್ರಾಮದ ಮೂವರು ಅಪ್ತಾಪ್ತನನ್ನು ಹುಬ್ಬಳ್ಳಿಗೆ ಜೆಜೆಎಂ ಕೆಲಸಕ್ಕೆ ಕರೆದುಕೊಂಡು ಹೋಗಿ ಬೆತ್ತಲೆ ಪೂಜೆ ಮಾಡಿರುವ ವಿಷಯದ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ವಿಷಯ ನಮ್ಮ ಗಮನಕ್ಕೆ ಬಂದಾಕ್ಷಣ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದೇವೆ. ಮೂವರ ಶೋಧ ಕಾರ್ಯ ನಡೆದಿದೆ. ಈ ಪ್ರಕರಣ ಹುಬ್ಬಳ್ಳಿ ಠಾಣಾ ವ್ಯಾಪ್ತಿಗೆ ಬರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಅಲ್ಲಿಗೆ ವರ್ಗಾಯಿಸಲಿದ್ದೇವೆ ಎಂದು ಕೊಪ್ಪಳ ಎಸ್ಪಿ ಅರುಣಾಂಗ್ಷು ಗಿರಿ ಹೇಳಿದ್ದಾರೆ.