Advertisement

Hubli; ಹಿಂದೂ ಭಾವನೆಗಳಿಗೆ ಅಪಮಾನ ಮಾಡುವುದೇ ಕಾಂಗ್ರೆಸ್ ಸಂಸ್ಕೃತಿ: ಪ್ರಹ್ಲಾದ ಜೋಶಿ

10:38 AM Feb 04, 2024 | Team Udayavani |

ಹುಬ್ಬಳ್ಳಿ: ದೇಶ ತುಂಡು‌ ಮಾಡುವ ಮಾತು, ಹಿಂದೂ ಭಾವನೆಗಳಿಗೆ ಅಪಮಾನ ಮಾಡುವುದೇ ಕಾಂಗ್ರೆಸ್ ಸಂಸ್ಕೃತಿ ಎನ್ನುವಂತಾಗಿದ್ದು, ಬಾಹ್ಯಶಕ್ತಿಗಳಿಗೆ ‌ ಕಾರ್ಯಕ್ಕೆ ಕಾಂಗ್ರೆಸ್ ಮುಂದಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಾಗ್ದಾಳಿ ನಡೆಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ. ತುಷ್ಟೀಕರಣ ನೀತಿ ಮೊದಲಿನಿಂದಲು‌ ಮಾಡಿಕೊಂಡು ಬಂದಿದೆ. ಇದೀಗ ಸತೀಶ ಜಾರಕಿಹೊಳಿ ಸೇರಿದಂತೆ ಹಲವು ಸಚಿವರು ಮುಂದುವರೆಸಿದ್ದಾರೆ.

ಮೂರು ಬಾರಿ ಸಂಸದರಾದ ಡಿ.ಕೆ.ಸುರೇಶ್ ದೇಶ ತುಂಡರಿಸುವ ಮಾತು ಬಗ್ಗೆ ಹಕ್ಕುಚ್ಯುತಿ ಬಗ್ಗೆ ಪರಿಶೀಲಿಸಲಾಗುತ್ತಿದೆ. ಈ ಪ್ರಕರಣವನ್ನು ಎಥಿಕ್ಸ್ ಕಮಿಟಿಗೆ    ವಹಿಸಲು‌ ಲೋಕಸಭಾ ಸ್ಪೀಕರ್ ಗೆ ಮನವಿ‌ ಮಾಡಿದ್ದೇನೆ ಎಂದರು.

ಕೇಂದ್ರದಿಂದ ರಾಜ್ಯಕ್ಕೆ ಅನುದಾನ ನೀಡಿಕೆಯಲ್ಲಿ ಅನ್ಯಾಯವಾಗಿದೆ ಎಂದು ವಿನಾಕಾರಣ ಆರೋಪ ಮಾಡುತ್ತಿರುವ ಕಾಂಗ್ರೆಸ್ನವರು ಈ ಹಿಂದೆ ಯುಪಿಎ ಸರ್ಕಾರದ ಅವಧಿಯಲ್ಲಿ ರಾಜ್ಯಕ್ಕೆ ಎಷ್ಟು ಹಣ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರದ ಅವಧಿಯಲ್ಲಿ ಎಷ್ಟು ಅನುದಾನ ಬಂದಿದೆ ಎಂಬ ಅಂಕಿ ಅಂಶಗಳನ್ನಾದರೂ ಪರಿಶೀಲನೆ ಮಾಡಿಕೊಂಡು ಮಾತನಾಡಲಿ ಎಂದು ನುಡಿದರು.

ಕಾಂಗ್ರೆಸ್ ಸರ್ಕಾರವನ್ನು ಅಭದ್ರ ಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು ಕಾಂಗ್ರೆಸ್ ಸರ್ಕಾರ ಆಭದ್ರ ಗೊಳಿಸುವುದಕ್ಕೆ ಕಾಂಗ್ರೆಸ್ ನವರೆ ಇದ್ದಾರೆ ನಾವ್ಯಾಕೆ ಬೇಕು ಎಂದು ವ್ಯಂಗ್ಯವಾಡಿದರು.

Advertisement

ಕಾಂಗ್ರೆಸ್ ಸರ್ಕಾರದಲ್ಲಿ ಶೇಕಡ 50ರಷ್ಟು ಕಮಿಷನ್ ವ್ಯವಹಾರ ನಡೆಯುತ್ತಿದೆ, ಭ್ರಷ್ಟಾಚಾರ ಹೆಚ್ಚಿದೆ ಎಂದು ಅವರದ್ದೇ ಪಕ್ಷದ ಶಾಸಕರು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ನಡುವೆ ಜಗಳವಿದೆ. ಕಾಂಗ್ರೆಸ್ ಸರ್ಕಾರವನ್ನು ಅಭದ್ರಗೊಳಿಸುವುದಕ್ಕೆ ಇದಕ್ಕಿಂತ ಇನ್ನೇನು ಬೇಕು ಹೇಳಿ ಎಂದು ಪ್ರಶ್ನಿಸಿದರು.

ಬರ ಪರಿಹಾರದಲ್ಲಿ ಎಸ್ ಡಿಆರ್ ಎಫ್ ಅಡಿಯಲ್ಲಿ ನೀಡಿದ ಅನುದಾನವನ್ನೇ ಬಳಕೆ ಮಾಡದೆ ಭ್ರಷ್ಟಾಚಾರದ ತೊಡಗಿದ ರಾಜ್ಯ ಕಾಂಗ್ರೆಸ್ ಸರ್ಕಾರ ವಿನಾಕಾರಣ ಕೇಂದ್ರದ ಮೇಲೆ ಆರೋಪ ಮಾಡುತ್ತಿದೆ ಎಂದು ನುಡಿದರು

ಪ್ರಧಾನಿ ನರೇಂದ್ರ ಮೋದಿ, ಪ್ರಹ್ಲಾದ ಜೋಶಿ ಹಾಗೂ ಬಿಜೆಪಿಯನ್ನು ನಿತ್ಯವೂ ತೆಗಳುವಂತೆ ಸಚಿವ ಸಂತೋಷ್ ಲಾಡ್ ಅವರಿಗೆ ಕಾಂಗ್ರೆಸ್ ಟಾಸ್ಕ್ ನೀಡಿದ್ದು,  ಇಲ್ಲವಾದರೆ ಸಚಿವ ಸ್ಥಾನ ಹೋಗಲಿದೆ ಎಂಬ ಸೂಚನೆ ಹಿನ್ನೆಲೆಯಲ್ಲಿ ನಿತ್ಯವೂ ಅವರು ನಮ್ಮ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ನೀಡಲಿ ಬಿಡಿ ಎಂದು ಸಚಿವ ಜೋಶಿ ನಕ್ಕು ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next