Advertisement

Hubli; ದರ್ಶನ್ ಅವರನ್ನು ರಾಯಭಾರಿಯಾಗಿ ನೇಮಿಸಿದ್ದು ಸರ್ಕಾರದ ತಪ್ಪು: ಪ್ರಹ್ಲಾದ ಜೋಶಿ

05:43 PM Jun 15, 2024 | Team Udayavani |

ಹುಬ್ಬಳ್ಳಿ: ಸರ್ಕಾರ ರಾಯಭಾರಿಗಳನ್ನಾಗಿ ನೇಮಿಸುವ ಮೊದಲು ಅವರ ಪೂರ್ವಾಪರಗಳನ್ನು ಸರಿಯಾಗಿ ವಿಚಾರ ಮಾಡಬೇಕು. ಹಿಂದಿನ ಸರ್ಕಾರ ದರ್ಶನ ಅವರನ್ನು ರಾಯಭಾರಿ ಮಾಡಿದ್ದು ತಪ್ಪು. ದರ್ಶನ್ ಈ ಹಿಂದೆಯೂ ಹಲ್ಲೆ ಮತ್ತಿತರ ಪ್ರಕರಣಗಳನ್ನು ಎದುರಿಸಿದವರು. ಇಷ್ಟೆಲ್ಲಾ ಆದಮೇಲೂ ಅವರನ್ನು ರಾಯಭಾರಿ ಮಾಡಿದ್ದು ತಪ್ಪು ಎಂದು ಕೇಂದ್ರ ಆಹಾರ ಮತ್ತು ನಾಗರಿಕ ವ್ಯಾಜ್ಯಗಳ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.

Advertisement

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭಿಮಾನಿಗಳು ಅತಿರೇಕದಿಂದ ವರ್ತಿಸುವುದನ್ನು ಚಿತ್ರರಂಗದ ನಾಯಕರು ನಿಯಂತ್ರಿಸಬೇಕು. ಚಿತ್ರನಟರನ್ನು, ಕ್ರೀಡಾಲೋಕದವರನ್ನು ಬಳಸಿಕೊಂಡು ಜಾಗೃತಿ ಮೂಡಿಸುವುದು ಒಳ್ಳೆಯದು. ಆದರೆ ಮಾಡುವ ಮೊದಲು ಅವರ ಬಗ್ಗೆ ಪೂರ್ಣ ಮಾಹಿತಿ, ಹಿನ್ನೆಲೆ ಗಮನಿಸಿ ಮಾಡಬೇಕು. ಎಲ್ಲವೂ ಗೊತ್ತಿದ್ದರೂ ದರ್ಶನ ಅವರನ್ನು ರಾಯಭಾರಿಯನ್ನಾಗಿ ಮಾಡಿದವರು ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಹಿಂದೂ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಯುತ್ತಿವೆ. ರಾಜ್ಯದಲ್ಲಿ ಮುಸ್ಲಿಂ ಮತಾಂಧರುಗಳಿಗೆ ಯಾವುದೇ ಭಯವಿಲ್ಲ. ರಾಜ್ಯ ಸ್ಲೀಪರ್ ಸೆಲ್ ಗಳಿಗೆ ಸುರಕ್ಷಿತ ಸ್ವರ್ಗವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇರುವುದರಿಂದ  ಮತಾಂಧರು ಸರ್ಕಾರದ ರಕ್ಷಣೆ ಸಿಗುತ್ತೆ ಅನ್ನುವ ಭ್ರಮೆಯಲ್ಲಿದ್ದಾರೆ. ಆದರೆ ಈ ಮನಸ್ಥಿತಿಯಲ್ಲಿ ಇರುವುದು ಸರಿಯಲ್ಲ. ರಾಜ್ಯ ಸರಕಾರ ಕೂಡ ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ ಎಂದರು

Advertisement

Udayavani is now on Telegram. Click here to join our channel and stay updated with the latest news.

Next