ಹುಬ್ಬಳ್ಳಿ: ನಗರದಲ್ಲಿ ಜಿಲ್ಲಾಡಳಿತ ಹಾಗೂ ಎನ್‌ಜಿಒ ಸಹಯೋಗದಲ್ಲಿ ನಿರ್ಮಿಸಲಾದ ಸೊಂಕುಗಳೆತ ಸುರಂಗ ಮಾರ್ಗಗಳನ್ನು ಬಂದ್ ಮಾಡಲಾಗಿದೆ. ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಹಲವು ಕಡೆಗಳಲ್ಲಿ ಸೊಂಕುಗಳೆತ ಸುರಂಗ ನಿರ್ಮಿಸಲಾಗಿತ್ತಾದರೂ, ಮನುಷ್ಯರ ದೇಹದ ಮೇಲೆ ಔಷಧಿ ಸಿಂಪರಣೆ ದುಷ್ಪರಿಣಾಮ ಬೀರಲಿದೆ ಎಂಬ ಅನಿಸಿಕೆ ಹಿನ್ನೆಲೆಯಲ್ಲಿ ಅವುಗಳನ್ನು ಬಂದ್ ಮಾಡಲಾಗಿದೆ. ಚಿಟಗುಪ್ಪಿ ಆಸ್ಪತ್ರೆ, ಕಿಮ್ಸ್ ಆವರಣ, ಹು-ಧಾ ಎಪಿಎಂಸಿ ಆವರಣ, ಧಾರವಾಡ ಜಿಲ್ಲಾಸ್ಪತ್ರೆ ಆವರಣದಲ್ಲಿ ಸೊಂಕುಗಳೆತ ಸುರಂಗ ಆರಂಭಿಸಲಾಗಿತ್ತು.
ಅವುಗಳನ್ನು ಬಂದ್ ಮಾಡಲಾಗಿದೆ. ಪಾಲಿಕೆಯಿಂದ ಸೋಡಿಯಂ ಹೈಫೋಕ್ಲೋರೈಟ್ ನೀಡುವುದನ್ನು ಬಂದ್ ಮಾಡಲಾಗಿದೆ. ಇದರಿಂದ ನಗರದಲ್ಲಿರುವ ಎಲ್ಲ ಟೆನೆಟ್‌ಗಳು ಬಂದ್ ಇವೆ. ಗೌರಿಬಿದನೂರನಲ್ಲಿ ಸಾವಯವ ಔಷಧಿ ಪ್ರಯೋಗ ನಡೆದಿದ್ದು, ಅಲ್ಲಿನ ಪರಿಶೀಲನೆ ನೋಡಿಕೊಂಡು ನಂತರ ಇಲ್ಲಿನ ಟೆನೆಟ್ ಮುಂದುವರಿಸುವ ಕುರಿತು ಚಿಂತನೆ ನಡೆದಿದೆ.
ಎನ್‌ಜಿಒಗಳ ಸಹಯೋಗದಲ್ಲಿ ಟೆನೆಟ್ ನಿರ್ಮಿಸಲಾಗಿದ್ದು, ಅವು ದುಷ್ಪರಿಣಾಮ ಬೀರಲಿವೆ ಎನ್ನುವ ಸಲಹೆ ಬಂದಿರುವುದರಿಂದ ಸ್ಥಗಿತಗೊಳಿಸಲಾಗಿದೆ. ಮುಂದಿನ ಆದೇಶ ನೋಡಿಕೊಂಡು ಆರಂಭಿಸುವ ಕುರಿತು ಚಿಂತನೆ ಮಾಡಲಾಗುವುದು.
ಡಾ| ಸುರೇಶ ಇಟ್ನಾಳ,
ಹು-ಧಾ ಮಹಾನಗರ ಪಾಲಿಕೆ ಆಯುಕ್ತ