Advertisement
ಇದು. ಪ್ರತಿ ತಿಂಗಳು ಬಳಸಿದ ನೀರಿಗೆ ಜಲಮಂಡಳಿಗೆ ಶುಲ್ಕ ಕಟ್ಟುತ್ತಿರುವ ಹುಬ್ಬಳ್ಳಿ-ಧಾರವಾಡ ಜನ ಸಾಮಾನ್ಯರ ಸದ್ಯದ ಪ್ರಶ್ನೆಯಾಗಿದೆ. ಕಳೆದ ಎರಡು ತಿಂಗಳಿಂದ ಮಹಾನಗರ ವಾಪ್ತಿಯಲ್ಲಿ ನೀರು ಬಳಕೆಗೆ ಬಿಲ್ ಬಂದಿಲ್ಲ. ಜಲಮಂಡಳಿ ವ್ಯಾಪ್ತಿಯಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ನೌಕರರು ಹಾಗೂ ಮಹಾನಗರ ಪಾಲಿಕೆ ನಡುವಿನ ತಿಕ್ಕಾಟದಿಂದ ಮೀಟರ್ ರೀಡಿಂಗ್ ಸ್ಥಗಿತಗೊಂಡಿದೆ. ಈ ನೌಕರರ ಕೆಲ ಬೇಡಿಕೆಗಳಿಗೆ ಮಹಾನಗರ ಪಾಲಿಕೆ ಮೌನ ತಾಳಿದ್ದು, ನೌಕರರು ಕೂಡ ಒಂದು ರೀತಿಯಲ್ಲಿ ಅಸಹಕಾರ ಚಳವಳಿಗೆ ಮುಂದಾಗಿದ್ದಾರೆ.
Related Articles
Advertisement
ಆದಾಯಕ್ಕೆ ಕತ್ತರಿ, ವೇತನವಿಲ್ಲ: ಮೇ-ಜೂನ್ ತಿಂಗಳ ಮೀಟರ್ ರೀಡಿಂಗ್ ಆಗದೆ ಆದಾಯ ಸಂಪೂರ್ಣ ಸ್ಥಗಿತಗೊಂಡಿದೆ. ನೀರು ಪೂರೈಕೆಯೊಂದನ್ನು ಬಿಟ್ಟರೆ ಉಳಿದೆಲ್ಲ ಕಾರ್ಯಗಳು ಬಹುತೇಕ ಸ್ಥಗಿತಗೊಂಡಿವೆ. ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಸುಮಾರು 600ಕ್ಕೂ ಹೆಚ್ಚು ಸಿಬ್ಬಂದಿಗೆ 2 ತಿಂಗಳಿಂದ ವೇತನವಾಗಿಲ್ಲ. ಇನ್ನೂ ಮಹಾನಗರ ವ್ಯಾಪ್ತಿಯಲ್ಲಿ ಸುಮಾರು 500 ಕಡೆಗಳಲ್ಲಿ ಪೈಪ್‌ಲೈನ್‌ನಲ್ಲಿ ಸೋರಿಕೆಯಿದ್ದು, ದುರಸ್ತಿ ಮಾಡಿಸುವ ಕೆಲಸ ಆಗುತ್ತಿಲ್ಲ. ನಿತ್ಯವೂ ಕೆಲಸಕ್ಕೆ ಬರುತ್ತಿದ್ದೇವೆ. ಆದರೆ ಈ ಕೆಲಸ ಮಾಡಿ ಎನ್ನುವ ಅಧಿಕಾರಿಗಳಿಲ್ಲ ಎನ್ನುವುದು ನೌಕರರ ವಾದವಾಗಿದೆ.
ಎಷು ತಿಂಗಳಾಗುತ್ತೋ ಗೊತ್ತಿಲ್ಲ?
ಏಪ್ರಿಲ್ ತಿಂಗಳ ಮುಷ್ಕರ ನಂತರ ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದರು. ಎಲ್ ಆ್ಯಂಡ್ ಟಿ ಕಂಪನಿ ಹಾಜರಾತಿ ಪಡೆದಿತ್ತು. ವೇತನ ಪಡೆಯಲು ಪ್ರತಿಯೊಬ್ಬರು ಕಂಪನಿಗೆ ವರದಿ ಮಾಡಿಕೊಳ್ಳಬೇಕು ಎಂದು ಕಳೆದ 15 ದಿನಗಳಿಂದ ಹಾಜರಿ ತೆಗೆದುಕೊಳ್ಳುವುದನ್ನು ನಿಲ್ಲಿಸಿದೆ. ಗುತ್ತಿಗೆ ನೌಕರರು ಹಾಗೂ ಮಹಾನಗರ ಪಾಲಿಕೆ, ಎಲ್ ಆ್ಯಂಡ್ ಟಿ ಕಂಪನಿಯ ತಿಕ್ಕಾಟ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಹೀಗಾಗಿ ಸದ್ಯಕ್ಕೆ ಮೀಟರ್ ರೀಡಿಂಗ್ ಕಾರ್ಯ ಅಸಾಧ್ಯ ಎನ್ನಲಾಗುತ್ತಿದ್ದು, ಇವರ ತಪ್ಪಿನಿಂದಾಗಿ ಬಾಕಿ ಶುಲ್ಕಕ್ಕೆ ಬಡ್ಡಿ ಅಥವಾ ದಂಡ ಜನರ ಮೇಲೆ ಬೀಳಲಿದೆ ಎನ್ನುವ ಆಕ್ರೋಶ ಸಾರ್ವಜನಿಕರದ್ದಾಗಿದೆ.
ಯಾವ ಸಿದ್ಧತೆ ಮಾಡಿಕೊಳ್ಳದೆ ನೀರು ವ್ಯವಸ್ಥೆಯನ್ನು ಕಂಪನಿಗೆ ವಹಿಸಿರುವುದು ಈ ಎಲ್ಲಾ ಗೊಂದಲಗಳಿಗೆ ಕಾರಣವಾಗಿದೆ. ಬಹುತೇಕ ಸಿಬ್ಬಂದಿ ಖಾಲಿ ಕುಳಿತು ಮನೆಗೆ ಹೋಗುತ್ತಿದ್ದಾರೆ. ಯಾರನ್ನು ಯಾವ ಕೆಲಸಕ್ಕೆ ನಿಯೋಜಿಸಬೇಕು ಎನ್ನುವ ಪೂರ್ವ ತಯಾರಿ, ಯೋಜನೆ ಕಂಪನಿ ಮಾಡಿಕೊಂಡಿಲ್ಲ. ದಿನ ಕಳೆದಂತೆ ಹಲವು ನ್ಯೂನತೆಗಳು ಬಯಲಿಗೆ ಬರಲಿವೆ. -ವಿಕಾಸ ಸೊಪ್ಪಿನ, ಆಮ್ ಆದ್ಮಿ ಮುಖಂಡ
ನೌಕರರ ಹಸ್ತಾಂತರ ವಿಚಾರದಲ್ಲಿ ನಿಯಮಗಳನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದಾರೆ. ತಾತ್ಕಾಲಿಕ ನೌಕರರ ಎಂದು ಪರಿಗಣಿಸಲು 2019ರಲ್ಲಿ ಹಿಂದೆ ಇಂಡಸ್ಟ್ರಿಯಲ್ ಟ್ರಿಬ್ಯುನಲ್ ನೀಡಿದ ಆದೇಶವನ್ನು ಜಲಮಂಡಳಿ ಅನುಷ್ಠಾನ ಮಾಡಲಿಲ್ಲ. ತಾತ್ಕಾಲಿಕ ಸಿಬ್ಬಂದಿ ಎಂದು ಪರಿಗಣಿಸಬೇಕು ಇಲ್ಲವೆ ಜಲಮಂಡಳಿಯಿಂದ ಕಂಪನಿಗೆ ನೌಕರರನ್ನು ಹಸ್ತಾಂತರಿಸಬೇಕು. ಇವರ ವೈಫಲ್ಯದಿಂದಾಗಿ ಕೆಲಸ ತೆಗೆದುಕೊಳ್ಳದ ಪರಿಣಾಮ ಹೊರ ಗುತ್ತಿಗೆ ನೌಕರರಿಗೆ ವೇತನ ಇಲ್ಲದಂತಾಗಿದೆ. -ವಿ.ಎನ್.ಹಳಕಟ್ಟಿ, ಅಧ್ಯಕ್ಷರು, ಹು-ಧಾ ಮಹಾನಗರ ಪಾಲಿಕೆ ನೀರು ಸರಬರಾಜು ನೌಕರರ ಸಂಘ
ಹೊಸ ಮನೆ ನಿರ್ಮಾಣದ ಸಂದರ್ಭದಲ್ಲಿ ನಲ್ಲಿ ಸಂಪರ್ಕ ಪಡೆಯಲಾಗಿತ್ತು. ಇದೀಗ ಒಂದು ವರ್ಷ ಕಳೆದರೂ ನೀರಿ ಬಿಲ್ ಬರುತ್ತಿಲ್ಲ. ಕಚೇರಿಗೆ ಹೋಗಿ ಇಲ್ಲಿಗೆ ಬರುತ್ತಿದ್ದ ಜಲಮಂಡಳಿ ನೌಕರರನ್ನು ಕೇಳಿದರೆ ಮುಂದಿನ ತಿಂಗಳು ಬರುತ್ತೆ ಎಂದು ಇಲ್ಲಿಯವರೆಗೆ ದೂಡಿಕೊಂಡು ಬಂದಿದ್ದಾರೆ. ಇದೀಗ ಕೇಳಿದರೆ ಎಲ್ ಆ್ಯಂಡ್ ಟಿಗೆ ವರ್ಗಾಯಿಸಿರುವುದರಿಂದ ಯಾರು ಯಾವ ಕೆಲಸ ಮಾಡಬೇಕು ಎಂಬುದು ಗೊತ್ತಿಲ್ಲ. ನಿಮ್ಮ ಬಿಲ್ ಬರುವುದು ಇನ್ನೂ ತಡವಾಗಲಿದೆ ಎನ್ನುತ್ತಿದ್ದಾರೆ. –ದೇವೇಂದ್ರಪ್ಪ ಕಾಮದೇನು, ಸನ್ಮಾನ ಕಾಲೋನಿ ನಿವಾಸಿ
-ಹೇಮರಡ್ಡಿ ಸೈದಾಪುರ