Advertisement

ಪಾಲಿಕೆ ಪೌರಕಾರ್ಮಿಕ ನೇಣಿಗೆ ಶರಣು

12:22 PM Jul 04, 2019 | Team Udayavani |

ಹುಬ್ಬಳ್ಳಿ: ಮಹಾನಗರ ಪಾಲಿಕೆ ಗುತ್ತಿಗೆ ಕಾರ್ಮಿಕನೊಬ್ಬ ನೇಣು ಬಿಗಿದುಕೊಂಡು ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದು, ನೇರ ವೇತನಕ್ಕೆ ಪರಿಗಣಿಸದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸಂಬಂಧಿಕರು ದೂರಿದ್ದಾರೆ.

Advertisement

ತ್ಯಾಜ್ಯ ವಿಲೇವಾರಿ ಮಾಡುವ ಟಿಪ್ಪರ್‌ನಲ್ಲಿ ಪೌರ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಕಲ್ಲಪ್ಪ ಅಣ್ಣಿಗೇರಿ (34) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಲ್ಲಿನ ಬೂಸ್‌ಪೇಟೆಯಲ್ಲಿರುವ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಬೆಳಗಿನ ಜಾವ ಕೆಲಸಕ್ಕೆ ಕರೆಯಲು ಹೋದ ಸಂದರ್ಭದಲ್ಲಿ ಆತ್ಮಹತ್ಯೆ ಶರಣಾಗಿರುವು ಗೊತ್ತಾಗಿದೆ. ಕೂಡಲೇ ಅಟೋ ಟಿಪ್ಪರ್‌ನಿಲ್ಲಿ ಕಿಮ್ಸ್‌ಗೆ ದಾಖಲು ಮಾಡಿದ್ದಾರೆ. ಅದಾಗಲೇ ಮೃತಪಟ್ಟಿರುವುದನ್ನು ವೈದ್ಯರು ಖಚಿತಪಡಿಸಿದ್ದಾರೆ. ಸುಮಾರು 15 ವರ್ಷಗಳಿಂದ ಪೌರ ಕಾರ್ಮಿಕನಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆತ್ಮಹತ್ಯೆ ಮಾಡಿಕೊಂಡ ಕಲ್ಲಪ್ಪ ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರರಿದ್ದಾರೆ.

ಅಧಿಕಾರಿಗಳೇ ಹೊಣೆ: ಪೌರ ಕಾರ್ಮಿಕನ ಸಾವಿಗೆ ಪಾಲಿಕೆ ಅಧಿಕಾರಿಗಳು ಹೊಣೆಯಾಗಿದ್ದಾರೆ. ನೇರ ವೇತನಕ್ಕೆ ಕಲ್ಲಪ್ಪ ಅರ್ಹರಿದ್ದು, ಅವರನ್ನು ಪರಿಗಣಿಸದ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾಕಷ್ಟು ಅರ್ಹ ಪೌರ ಕಾರ್ಮಿಕರಿಗೆ ಪಾಲಿಕೆ ಅಧಿಕಾರಿಗಳು ವಂಚನೆ ಮಾಡಿದ್ದಾರೆ. ನ್ಯಾಯುತವಾಗಿ ನಗರದ ಸ್ವಚ್ಛತಾ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರನ್ನು ನೇರ ವೇತನಕ್ಕೆ ಪರಿಗಣಿಸದಿರುವುದು ಪ್ರಮುಖ ಕಾರಣವಾಗಿದೆ ಎಂದು ಪೌರ ಕಾರ್ಮಿಕರ ಮುಖಂಡರು ಆರೋಪಿಸಿದರು.

ಇಲ್ಲಿನ ಕಿಮ್ಸ್‌ ಆಸ್ಪತ್ರೆ ಶವಗಾರದ ಮುಂಭಾಗದಲ್ಲಿ ಜಮಾಯಿಸಿದ ಪೌರಕಾರ್ಮಿಕರು ಪಾಲಿಕೆ ಘನತ್ಯಾಜ್ಯ ವಿಲೇವಾರಿ ವಿಭಾಗದ ಅಧಿಕಾರಿಗಳ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು. ಪಾಲಿಕೆ ಕಚೇರಿ ಮುಂಭಾಗದ ಶವ ಇಟ್ಟು ಪ್ರತಿಭಟನೆಗೆ ಪೌರ ಕಾರ್ಮಿಕರು ಮುಂದಾಗಿದ್ದರು. ಇದಕ್ಕೆ ಅಧಿಕಾರಿಗಳು ಹಾಗೂ ಮುಖಂಡರು ಆಸ್ಪದ ನೀಡಲಿಲ್ಲ. ಇದರಿಂದ ಕೆಲ ಪೌರ ಕಾರ್ಮಿಕ ಮುಖಂಡರು ಮಹಾನಗರ ಪಾಲಿಕೆ ಆಯುಕ್ತರನ್ನು ಭೇಟಿಯಾಗಿ ನೇರ ವೇತನ ಹಾಗೂ ಕಾಯಂಗೊಳಿಸಲು ತಯಾರಿಸುವ ಪಟ್ಟಿ ತಾರತಮ್ಯದಿಂದ ಕೂಡಿದ್ದು, ನ್ಯಾಯುತವಾಗಿ ದುಡಿದವರಿಗೆ ಸೌಲಭ್ಯ ಕಲ್ಪಿಸಬೇಕು. ಮೃತ ಪೌರ ಕಾರ್ಮಿಕನ ಕುಟುಂಬಕ್ಕೆ ಪಾಲಿಕೆಯಿಂದ ಪರಿಹಾರ ನೀಡುವಂತೆ ಮನವಿ ಮಾಡಿದರು. ಆತ್ಮಹತ್ಯೆಗೆ ಕಾರಣರಾದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next