Advertisement

ಅವಳಿ ನಗರದಲ್ಲಿಬಂದ್‌ ನೀರಸ

01:08 PM Jan 09, 2020 | Naveen |

ಹುಬ್ಬಳ್ಳಿ: ಕೇಂದ್ರ ಸರಕಾರದ ಕಾರ್ಮಿಕ, ರೈತರ ಹಾಗೂ ಜನ ವಿರೋಧಿ ನೀತಿ ಖಂಡಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕರೆ ನೀಡಿದ್ದ ಮುಷ್ಕರ ಬೆಂಬಲಿಸಿ ವಿವಿಧ ಸಂಘಟನೆಗಳು ಬೃಹತ್‌
ಪ್ರತಿಭಟನೆ ನಡೆಸಿದವು.

Advertisement

ಬುಧವಾರ ಇಲ್ಲಿನ ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ನಡೆಯಿತು.

ಆರ್ಥಿಕ ಹಿಂಜರಿತ, ನಿರುದ್ಯೋಗ ಹೆಚ್ಚಳ, ಖಾಸಗೀಕರಣ, ಕೃಷಿ ಹಾಗೂ ಕೃಷಿಕರ ನಾಶ ಸೇರಿದಂತೆ ದೇಶದಲ್ಲಿ ಮಾನವ ಸಂಪನ್ಮೂಲ ಕಾರ್ಮಿಕ ಕ್ಷೇತ್ರವನ್ನು ಕಡೆಗಣಿಸಿ ದುಡಿಯುವ ವರ್ಗದ ಧ್ವನಿ ಹತ್ತಿಕ್ಕುವ ಕೆಲಸ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಕಾರ್ಮಿಕ ವಿರೋಧಿ ನೀತಿ, ಧರ್ಮಗಳ
ನಡುವಿನ ಸಂಘರ್ಷದ ಸಿಎಎ, ಎನ್‌ಆರ್‌ಸಿ ಕಾಯ್ದೆಗಳ ಜಾರಿಗೆ ಮುಂದಾಗಿದೆ ಎಂದು ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಡಿದರು.

ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಸಿಐಟಿಯುನ ಮಹೇಶ ಪತ್ತಾರ, ಕೇಂದ್ರ ಸರಕಾರ ಪೊಲೀಸರ ಮೂಲಕ ಕಾರ್ಮಿಕರ ಹೋರಾಟ ಹತ್ತಿಕ್ಕುವ ಕೆಲಸ ನಡೆಯುತ್ತಿದೆ. ಇಂತಹ ಕುತಂತ್ರ ಹಾಗೂ ಬೇಡಿಕೆಗಳಿಗೆ ಜಗ್ಗುವ ಪ್ರಶ್ನೆಯಿಲ್ಲ ಎಂದರು.

ಎಐಟಿಯುಸಿಯ ದೇವಾನಂದ ಜಗಾಪುರ ಮಾತನಾಡಿ, ಕಾರ್ಮಿಕರ
ಮುಷ್ಕರದ ದಿಕ್ಕು ತಪ್ಪಿಸುವ ಕೆಲಸ ರಾಜ್ಯ ಸರಕಾರದಿಂದ ನಡೆಯುತ್ತಿದೆ. 1926ರ ಟ್ರೇಡ್‌ ಯೂನಿಯನ್‌ ಕಾಯ್ದೆಗೆ ತಿದ್ದುಪಡಿ ತಂದು ಕೇಂದ್ರ ಕಾರ್ಮಿಕ ಸಂಘಟನೆಗಳ ವ್ಯಾಖ್ಯಾನ ಮತ್ತು ಮಾನ್ಯತೆ ಬದಲಿಸಲು ಕೇಂದ್ರ ಸರಕಾರ ಮುಂದಾಗಿದೆ ಎಂದು ಆರೋಪಿಸಿದರು.

Advertisement

ಎಐಯುಟಿಯುಸಿಯ ಗಂಗಾಧರ ಬಡಿಗೇರ ಮಾತನಾಡಿ, ಕೇಂದ್ರ ಸರಕಾರ ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಕಾರ್ಪೋರೇಟ್‌ ಕಂಪನಿಗಳ ತೆರಿಗೆ ವಿನಾಯಿತಿ ನೀಡಿ ಇದೊಂದು ಶ್ರೀಮಂತ ವರ್ಗದ ಸರಕಾರವಾಗಿದೆ ಎಂದರು.

ಬ್ಯಾಂಕ್‌ ನೌಕರರ ಸಂಘಟನೆಗಳ ಒಕ್ಕೂಟದ ಮುಖಂಡ ಸ್ಟೀಫನ್‌ ಜಯಚಂದ್ರ ಮಾತನಾಡಿ, ಕೇಂದ್ರ ಸರಕಾರದಿಂದ ಸಾರ್ವಜನಿಕರ ಉದ್ಯಮಗಳಿಂದ ಬಂಡವಾಳ ಹಿಂತೆಗತ ಹಾಗೂ ಖಾಸಗೀಕರಣ ನಡೆಯುತ್ತಿದೆ. ರಿಸವ್‌ ಬ್ಯಾಂಕ್‌ನ ಮೀಸಲು ನಿಧಿಯನ್ನು ಪಡೆದಿದ್ದಾರೆ. ಅವೈಜ್ಞಾನಿಕ ಕಾರಣಗಳಿಂದ ದೇಶದ ಆರ್ಥಿಕ ಪರಿಸ್ಥಿತಿ ಸಾಕಷ್ಟು ಕುಸಿದಿದೆ ಎಂದರು.

ವಿವಿಧ ಸಂಘಟನೆಗಳ ಮುಖಂಡರಾದ ಅಶೋಕ ಬಾರ್ಕಿ, ಬಿ.ಎಸ್‌. ಸೊಪ್ಪಿನ, ಬಾಬಾಜಾನ ಮುಧೋಳ, ಉದಯ ಗದಗಕರ, ಜಿ.ಎಂ. ವೈದ್ಯ, ಆರ್‌.ಡಿ. ಸೂಗೂರ, ರಾಜು ಮಮದಾಪುರ, ಹರೀಶ ದೊಡ್ಡಮನಿ, ಅಮೃತ ಇಜಾರಿ, ಶಿವಣ್ಣ ಹುಬ್ಬಳ್ಳಿ, ಆರ್‌.ಎಫ್‌.ಕವಳಿಕಾಯಿ, ಎ.ಎಸ್‌.ಪೀರಜಾದೆ, ಗುರುಸಿದ್ದಪ್ಪ ಅಂಬಿಗೇರ, ನೂರಜಾನ್‌ ಸಮುದ್ರಿ, ಲಲಿತಾ ಹಿರೇಮಠ, ವಿಜಯ ಗುಂಟ್ರಾಳ, ಗಂಗಾಧರಯ್ಯ ನಡುರಮಠ, ಪ್ರವೀಣ ಶಿವಶಪೇರ, ಹುಲಿಗೆಮ್ಮ ಚಲವಾದಿ, ಸುಜಾತ ಉಣಕಲ್ಲ, ಮಂಜುನಾಥ ದೊಡ್ಡಮನಿ, ಬಸೀರ ಮುಧೋಳ, ದ್ಯಾಮಣ್ಣ ಕವಲೂರ, ಅಜಿತ ರೊಟ್ಟಿ, ವೆಂಕಟೇಶ ಪ್ಯಾಟಿ, ರಾಜಶೇಖರ ಮೆಣಸಿನಕಾಯಿ, ಸಿದ್ದು
ತೇಜಿ, ಬಂಗಾರೇಶ ಹಿರೇಮಠ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next