ಹುಬ್ಬಳ್ಳಿ: ನಗರದ ವ್ಯಾಪಾರಿಗೆ ಖದೀಮರು ಗ್ಲೋಬುಲೆ ಇನ್ವೆಸ್ಟರ್ ಸ್ಟಾಕ್ ಟ್ರೇಡರ್ಸ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿ ಅಧಿಕ ಲಾಭ ಗಳಿಸಬಹುದೆಂದು ನಂಬಿಸಿ, 3.32ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
Advertisement
ಕೇಶ್ವಾಪುರ ಭವಾನಿ ನಗರದ ವ್ಯಾಪಾರಿ ವಿಫುಲ ಮೋಸಗೊಂಡವರು. ಇವರ ಟೆಲಿಗ್ರಾಂಗೆ ಆನ್‌ಲೈನ್ ಟ್ರೇಡಿಂಗ್ ಬಗ್ಗೆ ಸಂದೇಶ ಬಂದಿದೆ. ಅದರಲ್ಲಿ ಅಪರಿಚಿತರು ಪರಿಚಯಿಸಿಕೊಂಡು ಹಣ ಹೂಡಿಕೆ ಮಾಡಿ ಸ್ಟಾಕ್ ಖರೀದಿಸಿ ಹೆಚ್ಚಿನ ಲಾಭ ಗಳಿಸಬಹುದೆಂದು ನಂಬಿಸಿದ್ದಾರೆ. ಮೊದಲು 10 ಸಾವಿರ ರೂ. ಹೂಡಿಕೆ ಮಾಡಿದಾಗ ಶೇ.5 ಲಾಭಾಂಶ ನೀಡಿದ್ದಾರೆ. ಹೆಚ್ಚಿಗೆ ಹೂಡಿಕೆ ಮಾಡಿ ಅಧಿಕ ಲಾಭ ಗಳಿಸಬಹುದೆಂದು ಹೇಳಿ ಲಿಂಕ್ ಕಳುಹಿಸಿ, ಆ್ಯಪ್ ಡೌನ್‌ಲೋಡ್ ಮಾಡಿಸಿ ಹಂತ ಹಂತವಾಗಿ ತಮ್ಮ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಡೇìಶ್ವರಕ್ಕೆ ತೆರಳಲೆಂದು ರವಿವಾರ ಬೆಳಗಿನ ಜಾವ ನಗರಕ್ಕೆ ಆಗಮಿಸಿ ವಿಶ್ರಾಂತಿ ಪಡೆದು, ವಾಶ್ ರೂಮ್‌ಗೆಂದು 18ಗ್ರಾಂ ಚಿನ್ನಾಭರಣ, ಮೊಬೈಲ್ ಫೋನ್, 3ಸಾವಿರ ರೂ., ವಿವಿಧ ದಾಖಲಾತಿಗಳಿದ್ದ ಕಾಲೇಜ್ ಬ್ಯಾಗ್ ಅನ್ನು ಸೋಪಾ ಚೇರ್ ಮೇಲಿಟ್ಟು ಬರುಷ್ಟರಲ್ಲಿ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕ್ರಿಕೆಟ್ ಬೆಟ್ಟಿಂಗ್-ಓರ್ವನ ಬಂಧನ: ಇಲ್ಲಿನ ವಿದ್ಯಾನಗರ ಕಿಮ್ಸ್‌ನ ಹಿಂಬದಿ ಗೇಟ್ ಬಳಿ ರವಿವಾರ ಸಂಜೆ ಕ್ರಿಕೆಟ್ ಬೆಟ್ಟಿಂಗ್ ಓರ್ವನನ್ನು ಪೊಲೀಸರು ಬಂಧಿಸಿ, ಆತನಿಂದ 1,500ರೂ. ವಶಪಡಿಸಿಕೊಂಡಿದ್ದು, ನಾಲ್ವರು ಪರಾರಿಯಾಗಿದ್ದಾರೆ. ದೆಹಲಿಯ ಅರುಣ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟಾಟಾ ಡಬ್ಲ್ಯು ಪಿಎಲ್-2024 ಟಿ-20 ಕ್ರಿಕೆಟ್ ಪಂದ್ಯಾವಳಿ ಅಂಗವಾಗಿ ರವಿವಾರ ರಾಯಲ್ ಚಾಲೆಂಜರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವಿನ ಪಂದ್ಯದ ವೇಳೆ ಇಲ್ಲಿನ ಕಿಮ್ಸ್ ಬಳಿ 4-5 ಜನರ ತಂಡ ಬೆಟ್ಟಿಂಗ್ ಆಡುತ್ತಿದ್ದಾಗ ಓರ್ವ ಸಿಕ್ಕಿ ಬಿದ್ದಿದ್ದು, ನಾಲ್ವರು ಪರಾರಿಯಾಗಿದ್ದಾರೆಂದು ಮೂಲಗಳು ತಿಳಿಸಿವೆ. ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Related Articles
Advertisement