Advertisement

Hubli: ದಿವಾಳಿಯಾದ ಸರ್ಕಾರ ಜನರಿಗೆ ಬೆಲೆ ಏರಿಕೆಯ ಬರೆ ಹಾಕಿದೆ: ಪ್ರಹ್ಲಾದ ಜೋಶಿ

02:40 PM Jun 16, 2024 | Team Udayavani |

ಹುಬ್ಬಳ್ಳಿ: ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ದಿವಾಳಿ ಎದ್ದಿದೆ. ಹೀಗಾಗಿ ಜನರ ಮೇಲೆ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯ ಬರೆ ಹಾಕಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕುಟುಕಿದರು.

Advertisement

ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಚುನಾವಣೆ ಮುನ್ನ ಬೆಲೆ ಏರಿಕೆ ಇಟ್ಟುಕೊಂಡು ರಾಜಕಾರಣ ಮಾಡಿದರು. ಇವತ್ತು ಪೆಟ್ರೋಲ್, ಡಿಸೇಲ್ ದರ 3 ರೂ. ಹೆಚ್ಚಾಗಿದ್ದು ನೋಡಿದರೆ ಕರ್ನಾಟಕದಲ್ಲಿ ಅತೀ ಹೆಚ್ಚು ಬೆಲೆ ಆಗುತ್ತದೆ. ಸಾರಿಗೆ ಮೇಲೂ ಇದರ ಪರಿಣಾಮವಾಗುತ್ತದೆ ಎಂದು ಹರಿಹಾಯ್ದರು.

ಟಕಾ ಟಕಾ ಅಂತಾ ಪ್ರಣಾಳಿಕೆ ಮಾಡಿದರು. ಇದಕ್ಕೆ ಯಾವುದೇ ಯೋಜನೆ ಇರಲಿಲ್ಲ. ಯೋಚನಾ ರಹಿತವಾಗಿ ಮಾಡಿರುವುದಕ್ಕೆ ಹೀಗಾಗಿದೆ. ಬೆಲೆ ಏರಿಕೆ ಮಾಡಿರುವುದು ಅತ್ಯಂತ ಖಂಡನೀಯ. 2000 ಕೊಟ್ಟು 4000 ಕಿತ್ತುಕೊಂಡು ಹೋಗುತ್ತದೆ. ಒಂದು ಕೈಲಿ ಕೊಟ್ಟು ಮತ್ತೊಂದು ಕೈಲಿ ಕಿತ್ತುಕೊಳ್ಳುವ ಕೆಲಸ ಆಗುತ್ತಿದೆ. ಇನ್ಮೇಲೆ ಬಸ್ ದರವೂ ಹೆಚ್ಚಾಗುತ್ತದೆ. ಜನರ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ. ಇದು ಜನ ವಿರೋಧಿ ನೀತಿ. ಕಾರಣ ಸರ್ಕಾರ ಬೆಲೆ ಏರಿಕೆ ತಕ್ಷಣ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ನಾವು ಬೆಲೆ ಏರಿಕೆ ವಿರೋಧ ಮಾಡುತ್ತೇವೆ. ರಾಜ್ಯವನ್ನು ದಿವಾಳಿಯತ್ತ ನಿಲ್ಲಿಸುವುದು ಖಚಿತ. ಬೆಲೆ ಏರಿಕೆ ಉಚಿತ, ಬಾಕಿ ಎಲ್ಲ ಖಚಿತ. ಅಪರಾಧ, ಹಿಂದೂ ವಿರೋಧಿ ನೀತಿ ಖಚಿತ ಎನ್ನುವಂತಾಗಿದೆ ಎಂದು ಸಚಿವ ಜೋಶಿ ಹರಿಹಾಯ್ದರು

Advertisement

Udayavani is now on Telegram. Click here to join our channel and stay updated with the latest news.

Next