ಹುಬ್ಬಳ್ಳಿ: 2018ರಲ್ಲಿ ನಡೆದ ಮಿಸ್ ಭಾರತ ಅರ್ಥ್ ಸ್ಪರ್ಧೆಯಲ್ಲಿ ಎರಡನೇ ರನ್ನರಪ್ ಮೂಲಕ ದೇಶಕ್ಕೆ ಪರಿಚಿತರಾಗಿದ್ದ ಹುಬ್ಬಳ್ಳಿಯ ಮೊರಾರ್ಜಿ ನಗರ ನಿವಾಸಿ ಪ್ರಿಯಾಂಕಾ ಕೋಳ್ವೆಕರ ಆ.15ರಂದು ಬೆಳಗಾವಿ, ಚಿಕ್ಕೋಡಿ, ಗೋಕಾಕ ಸೇರಿದಂತೆ ಇನ್ನಿತರ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪ್ರಾಣಿಗಳಿಗೆ ಆಹಾರ- ಔಷಧ ಇನ್ನಿತರ ಸಾಮಗ್ರಿ ವಿತರಿಸಲಿದ್ದಾರೆ.
Advertisement
ನೆರೆ ಪ್ರದೇಶಗಳಲ್ಲಿ ತೊಂದರೆಗೊಳಗಾದ ಆಕಳು, ಎಮ್ಮೆ, ನಾಯಿ, ಬೆಕ್ಕು ಸೇರಿದಂತೆ ಇನ್ನಿತರೆ ಪ್ರಾಣಿಗಳಿಗೆ ಆಹಾರ ಸಾಮಗ್ರಿ ಹಾಗೂ ಗಾಯಗೊಂಡ ಪ್ರಾಣಿಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಲು ಅಗತ್ಯ ವೈದ್ಯಕೀಯ ಸಾಮಗ್ರಿ ನೀಡಲು ಸಜ್ಜು ಮಾಡಿಕೊಂಡಿದ್ದಾರೆ. ಸ್ವತಃ ಅಂಗಡಿ, ಮಾಲ್, ರೇಶನ್, ಬೇಕರಿಗಳಿಗೆ ಭೇಟಿ ಕೊಟ್ಟು ಪರಿಹಾರ ಸಾಮಗ್ರಿ ಸಂಗ್ರಹಿಸಿದ್ದಾರೆ. ಬಿಸ್ಕಿಟ್, ಬ್ರೇಡ್, ಬೆಲ್r, ಪಂಜರ, ಫೇಡಿಗ್ರೇ ಪ್ರಾಥಮಿಕ ಚಿಕಿತ್ಸೆಗೆ ಬೇಕಿರುವ ವೈದ್ಯಕೀಯ ಸಾಮಗ್ರಿಗಳನ್ನು ಖರೀದಿಸಿದ್ದಾರೆ. ಜತೆಗೆ ನಿರಾಶ್ರಿತರಿಗೆ ಟಾವೆಲ್, ಹೊದಿಕೆ, ಅಕ್ಕಿ, ಬಿಸ್ಕಿಟ್ ಇನ್ನಿತರೆ ಸಾಮಗ್ರಿ ಸಂಗ್ರಹಿಸಿ ಇಟ್ಟಿದ್ದಾರೆ. ವೈಯಕ್ತಿಕವಾಗಿ 50 ಸಾವಿರ ರೂ. ವಿನಿಯೋಗಿಸಿರುವ ಇವರಿಗೆ ದಾನಿಗಳು ಸುಮಾರು 25-30 ಸಾವಿರ ರೂ. ಮೌಲ್ಯದಷ್ಟು ಆಹಾರ ಸಾಮಗ್ರಿ ನೀಡಿದ್ದಾರೆ.
• ಪ್ರಿಯಾಂಕ ಕೋಳ್ವೆಕರ