Advertisement

Hubli: ಬೈಕಲ್ಲಿ ಹೋಗುತ್ತಿದ್ದಾಗ ತಲೆಗೆ ರಾಡ್‌ ಬಿದ್ದು ಗಾಯಗೊಂಡಿದ್ದ ಎಎಸ್‌ಐ ಸಾವು

08:56 AM Sep 15, 2024 | Team Udayavani |

ಹುಬ್ಬಳ್ಳಿ: ನಗರದ ಹಳೆಯ ಕೋರ್ಟ್ ವೃತ್ತದಲ್ಲಿ ನಡೆಯುತ್ತಿರುವ ಫ್ಲೈ ಓವರ್ ಕಾಮಗಾರಿ ವೇಳೆ ಕರ್ತವ್ಯಕ್ಕೆ ತೆರಳುತ್ತಿದ್ದಾಗ ತಲೆಯ ಮೇಲೆ ಕಬ್ಬಿಣದ ರಾಡ್‌ ಬಿದ್ದು ತೀವ್ರ ಗಾಯಗೊಂಡಿದ್ದ ಉಪನಗರ ಠಾಣೆ ಎಎಸ್‌ಐ ನಾಬಿರಾಜ ಜಯಪಾಲ ದಯಣ್ಣವರ (59) ಚಿಕಿತ್ಸೆ ಫಲಿಸದೆ ರವಿವಾರ (ಸೆ.15) ಬೆಳಗಿನ ಜಾವ ಮೃತಪಟ್ಟಿದ್ದಾರೆ.

Advertisement

ಧಾರವಾಡ ಸತ್ತೂರಿನ ರಾರಾಜಿನಗರ ನಿವಾಸಿಯಾದ ಎಎಸ್‌ಐ ನಾಬಿರಾಜ ಅವರು ಮಂಗಳವಾರ (ಸೆ.10) ಬೈಕ್ ನಲ್ಲಿ ಕರ್ತವ್ಯಕ್ಕೆ ತೆರಳುತ್ತಿದ್ದಾಗ ಅವರ ತಲೆಯ ಮೇಲೆ ಕಬ್ಬಿಣದ ರಾಡ್ ಬಿದ್ದು ಗಂಭೀರ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಗೆ‌ ತಲುಪಿದ್ದರು.

ಮೊದಲು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕೆಎಂಸಿಆರ್‌ಐಗೆ ದಾಖಲಿಸಲಾಗಿತ್ತು. ಅಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ರವಿವಾರ ಬೆಳಗಿನ ಜಾವ 4:00 ಗಂಟೆಗೆ ಕೊನೆಯುಸಿರೆಳೆದಿದ್ದಾರೆ.

ಈ ಅವಘಡಕ್ಕೆ ಸಂಬಂಧಿಸಿ ಗುತ್ತಿಗೆದಾರ ಕಂಪನಿಯ ಎಂಡಿ ಸೇರಿದಂತೆ 19ಕ್ಕೂ ಹೆಚ್ಚು ಜನರ ವಿರುದ್ಧ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next