Advertisement

Hubli; ಗುಂಡೇಟು ತಿಂದ ಅರುಣ್ ವೇಶ್ಯಾವಾಟಿಕೆ ಹೆಸರಲ್ಲಿ ಸುಲಿಗೆ ಮಾಡುತ್ತಿದ್ದ: ಶಶಿಕುಮಾರ್

01:45 PM Aug 02, 2024 | Team Udayavani |

ಹುಬ್ಬಳ್ಳಿ: ಗುರುವಾರ ತಡರಾತ್ರಿ ಪೊಲೀಸರ ಗುಂಡೇಟು ತಿಂದ ಆರೋಪಿ ಅರುಣ ಊರುಫ್ ಸೋನು ನಾಯ್ಕ ವಿರುದ್ಧ 13 ಪ್ರಕರಣಗಳಿದ್ದವು. ಗ್ಯಾಂಗ್ ಕಟ್ಟಿಕೊಂಡು ಸುಲಿಗೆ ಮಾಡುತ್ತಿದ್ದ. ವೇಶ್ಯಾವಾಟಿಕೆ ಹೆಸರಲ್ಲಿ ದರೋಡೆ, ಸುಲಿಗೆ ಪ್ರಕರಣವೊಂದರಲ್ಲಿ ಬಂಧಿಸಲು ಹೋದಾಗ ಪೊಲೀಸರ ಮೇಲೆ ದಾಳಿ ಮಾಡಿದ ಹಿನ್ನೆಲೆಯಲ್ಲಿ ಆತನ ಮೇಲೆ ಫೈರಿಂಗ್ ಮಾಡಿ ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿದರು.

Advertisement

ಶುಕ್ರವಾರ (ಆ.2) ಕಿಮ್ಸ್ ಆಸ್ಪತ್ರೆಗೆ ಭೇಟಿ ಕೊಟ್ಟ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ಯಾಸೆಂಜರ್‌ ಗಳೇ ಇವನ ಟಾರ್ಗೆಟ್ ಆಗಿದ್ದರು. ಅವರನ್ನು ಹೋಟೆಲ್‌ಗೆ ಕರೆದೊಯ್ಯುವ, ಮಹಿಳೆಯರನ್ನು ಸಪ್ಲಾಯ್ ಮಾಡುವ ಹಾಗೂ ನಂತರ ಕರೆದೊಯ್ದವರನ್ನು ಸುಲಿಗೆ ಮಾಡುತಿದ್ದರು. ಮೊನ್ನೆಯಷ್ಟೇ ಗೋಲ್ಡ್ ಸ್ಮಿತ್ ಆಗಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳದ ಪ್ರಣವ್ ಎಂಬುವರನ್ನು ಬಂಧಿತ ಅರುಣ ಮತ್ತು ಗ್ಯಾಂಗ್ ಆಟೋ ರಿಕ್ಷಾದಲ್ಲಿ ಹತ್ತಿಸಿಕೊಂಡು ಹೋಗಿ, ಬೆದರಿಸಿ ಚಿನ್ನಾಭರಣ, 10ಸಾವಿರ ನಗದು, ಮೊಬೈಲ್ ದೋಚಿದ್ದರು ಎಂದು ಮಾಹಿತಿ ನೀಡಿದರು.

ಬಂಧಿತ ಅರುಣ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ 13 ಪ್ರಕರಣ ದಾಖಲಾಗಿವೆ. ಆಟೋರಿಕ್ಷಾ, ಬೈಕ್ ಕಳ್ಳತನ ಎರಡು ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆಯಾಗಿತ್ತು. ಹೆಚ್ಚುವರಿ ತನಿಖೆಗೆಂದು ಎಂ.ಟಿ.ಎಸ್. ಕಾಲೋನಿಗೆ ಕರೆದೊಯ್ದಾಗ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾನೆ. ಉಪನಗರ ಠಾಣೆ ಇನ್ಸ್‌ಪೆಕ್ಟರ್ ಎಂ.ಎಸ್. ಹೂಗಾರ ಆರೋಪಿ ಬಲಗಾಲಿಗೆ ಗುಂಡು ಹೊಡೆದಿದ್ದಾರೆ.‌ ವ್ಯವಸ್ಥಿತವಾಗಿ ಸುಲಿಗೆ, ದರೋಡೆ ಕೃತ್ಯ ಮಾಡಲಾಗುತ್ತಿತ್ತು. ಹೋಟೆಲ್‌ನಲ್ಲಿ ವೇಶ್ಯಾವಾಟಿಕೆ ಕೃತ್ಯ ನಡೆಸುತ್ತಿದ್ದ ಮ್ಯಾನೇಜರ್‌ನನ್ನು ಬಂಧಿಸಲಾಗಿದೆ. ಈ ಗ್ಯಾಂಗ್‌ನಲ್ಲಿ ಮೂವರು ತಪ್ಪಿಸಿಕೊಂಡಿದ್ದಾರೆ. ಅವರ ಬಂಧನಕ್ಕೂ ಜಾಲ ಬೀಸಲಾಗಿದೆ ಎಂದು ಆಯುಕ್ತ ಎನ್. ಶಶಿಕುಮಾರ್ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next