Advertisement
ಜನತಾ ಕರ್ಫ್ಯೂ ಸಂದರ್ಭದಲ್ಲಿ ಇಲ್ಲಿನ ಎಪಿಎಂಸಿಯಲ್ಲಿ ತರಕಾರಿ, ಹಣ್ಣು, ದಿನಸಿ, ಕಾಳುಕಡಿ ಹಾಗೂ ಕಿರಾಣಿ ವ್ಯಾಪಾರ ಸಗಟು ಜತೆ ಚಿಲ್ಲರೆಯಾಗಿ ಮಾರಾಟಮಾಡಲಾಗುತ್ತಿತ್ತು. ಆದರೆ ಕೊರೊನಾಅಲೆ ನಿಯಂತ್ರಿಸಲು ಸರಕಾರ 2ನೇಹಂತದ ಕರ್ಫ್ಯೂ ವೇಳೆ ಕಠಿಣ ಕ್ರಮಕೈಗೊಂಡಿದ್ದರಿಂದ ಹಾಗೂ ಕಟ್ಟುನಿಟ್ಟಾದಹೊಸ ಮಾರ್ಗಸೂಚಿ ಜಾರಿಗೊಳಿಸಿದ್ದರಿಂದಚಿಲ್ಲರೆ ವ್ಯಾಪಾರ ಸಂಪೂರ್ಣ ಸ್ಥಗಿತ ಗೊಳಿಸಲಾಗಿದೆ.
Related Articles
Advertisement
ರಾಶಿ ರಾಶಿಯಾಗಿ ಬಿದ್ದ ಕಾಯಿಪಲ್ಲೆ: ಅಗತ್ಯ ವಸ್ತುಗಳ ವ್ಯಾಪಾರ-ವಹಿವಾಟಿಗೆ ಬೆಳಗ್ಗೆ 10:00 ಗಂಟೆವರೆಗೆ ಸರಕಾರ ಅವಕಾಶ ಕಲ್ಪಿಸಿದೆ ಏನೋ? ಆದರೆ ಚಿಲ್ಲರೆ ವ್ಯಾಪಾರಕ್ಕೆ ಎಪಿಎಂಸಿಯಲ್ಲಿ ಅವಕಾಶ ಕೊಟ್ಟಿಲ್ಲದ್ದರಿಂದ ಹೊರಗಿನವರು ಖರೀದಿಸಲು ಅಷ್ಟಾಗಿ ಬರುತ್ತಿಲ್ಲ. ರೈತರು ತಾವು ಬೆಳೆದ ಬೆಳೆ ಹೊಲದಲ್ಲೂ ಬಿಡುವಂತಿಲ್ಲ. ಹೀಗಾಗಿ ಅನಿವಾರ್ಯವಾಗಿ ಎಪಿಎಂಸಿಗೆ ತಮ್ಮ ಉತ್ಪನ್ನ ತರುತ್ತಿದ್ದಾರೆ.ಆದರೂ ಇಲ್ಲೂ ಮಾರಾಟವಾಗದೆ ಹಾಳಾಗುತ್ತಿದೆ. ಕೈಗೆ ಬಂದ ದರಕ್ಕೆ ಕೊಟ್ಟರೂ ಖರೀದಿಸುವವರು ಇಲ್ಲದಂತಾಗಿದ್ದು, ಕೊನೆಗೆ ಮಾರುಕಟ್ಟೆಯಲ್ಲಿಯೇ ಬಿಟ್ಟು ಹೋಗುತ್ತಿದ್ದಾರೆ. ವಾಹನ ಬಾಡಿಗೆ ಮಾಡಿಕೊಂಡು ಬಂದದ್ದಕ್ಕೂ ಖರ್ಚು ಗಿಟ್ಟಿಸದೆ ನಷ್ಟ ಮಾಡಿಕೊಂಡು ಹೋಗುವಂತಾಗಿದೆ ಎನ್ನುತ್ತಿದ್ದಾರೆ ರೈತರು.
ಟೆಂಡರ್ ಪ್ರಕ್ರಿಯೆ ಬಂದ್:
ಕರ್ಫ್ಯೂ ಅವಧಿಯಲ್ಲಿ ಸರಕಾರದ ಮಾರ್ಗಸೂಚಿಯಂತೆ ಎಪಿಎಂಸಿ ಪ್ರಾಂಗಣದಲ್ಲಿ ಕುರಿ, ಜಾನುವಾರುಸಂತೆ, ಒಣಮೆಣಸಿನಕಾಯಿ ಹುಟ್ಟುವಳಿ ಟೆಂಡರ್ ಪ್ರಕ್ರಿಯೆ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಉಳ್ಳಾಗಡ್ಡೆ-ಆಲೂಗಡ್ಡೆ ಸೇರಿದಂತೆ ರೈತರ ಇನ್ನಿತರೆ ಉತ್ಪನ್ನಗಳ ಟೆಂಡರ್ ಪ್ರಕ್ರಿಯೆ ಬೆಳಗ್ಗೆ 9:00 ಗಂಟೆಯೊಳಗೆ ಮುಗಿಯುತ್ತಿದೆ.ತರಕಾರಿ ಚಿಲ್ಲರೆ ವ್ಯಾಪಾರ ಸಂಪೂರ್ಣಬಂದ್ ಮಾಡಲಾಗಿದೆ. ಕಾಳು-ಕಡಿ, ಉಳ್ಳಾಗಡ್ಡೆ-ಆಲೂಗಡ್ಡೆ ವ್ಯಾಪಾರಸ್ಥರು ಸಹ ಸರಕಾರ ನಿಗದಿಪಡಿಸಿದ ಅವಧಿಯೊಳಗೆ ತಮ್ಮೆಲ್ಲ ವ್ಯಾಪಾರ-ವಹಿವಾಟು ನಡೆಸಬೇಕೆಂದಿರುವುದರಿಂದ ಬೆಳಗ್ಗೆ 9:30ಗಂಟೆಯೊಳಗೆ ಮುಗಿಸುತ್ತಿದ್ದಾರೆ. ತರಕಾರಿ ವ್ಯಾಪಾರಿಗಳು ಚಿಲ್ಲರೆ ವ್ಯಾಪಾರ ಮಾಡಿದರೆಅಂತಹ ವ್ಯಾಪಾರಸ್ಥರನ್ನು ಎಪಿಎಂಸಿಯವರುಗುರುತಿಸಿ ದಂಡ ಹಾಕುತ್ತಿದ್ದಾರೆ. ಹೀಗಾಗಿಯಾವ ವ್ಯಾಪಾರಸ್ಥರು ಚಿಲ್ಲರೆ ವ್ಯಾಪಾರಕ್ಕೆ ಮುಂದಾಗುತ್ತಿಲ್ಲ.
ಲಾಕ್‌ಡೌನ್ ವೇಳೆ ಎಪಿಎಂಸಿ ಪ್ರಾಂಗಣದಲ್ಲಿ ಯಾರಿಗೂ ಪಾಸ್ ಕೊಟ್ಟಿಲ್ಲ. ವ್ಯಾಪಾರಸ್ಥರಿಗೆ ಅವರು ಹೊಂದಿದ್ದ ಅಂಗಡಿಯ ಲೈಸನ್ಸ್ ಮೇಲೆ ಅಟೆಸ್ಟೆಡ್ ಮಾಡಿ ಗುರುತಿನ ಚೀಟಿ ನೀಡಲಾಗಿದೆ. ಹಮಾಲರಿಗೆ ಹಮಾಲಿಕಾರ್ಮಿಕರ ಸಂಘದಿಂದ ಗುರುತಿನ ಚೀಟಿ ವಿತರಿಸಲಾಗಿದೆ.ತರಕಾರಿ ಚಿಲ್ಲರೆ ವ್ಯಾಪಾರಕ್ಕೆ ಅವಕಾಶ ಕೊಟ್ಟಿಲ್ಲ. ಅನಗತ್ಯವಾಗಿ ಆಗಮಿಸುವವರಿಗೆ ಪ್ರವೇಶ ನಿರ್ಬಂ ಧಿಸಲಾಗಿದೆ. ಕೊರೊನಾ ಅಲೆ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.– ಅರವಿಂದ ಪಿ. ಪಾಟೀಲ, ಸಹಾಯಕ ಕಾರ್ಯದರ್ಶಿ, ಎಪಿಎಂಸಿ
ವ್ಯಾಪಾರದ ಜತೆ ಕೊರೊನಾ ಬಗ್ಗೆ ಜಾಗೃತಿ ವಹಿಸಬೇಕಿದೆ. ಸರಕಾರದ ಮಾರ್ಗಸೂಚಿ ಪಾಲಿಸಬೇಕಿದೆ. ಜನತಾ ಕರ್ಫ್ಯೂ ಸಮಯದಲ್ಲಿ ಶೇ. 50 ವ್ಯಾಪಾರವಿತ್ತು. ಇದೀಗ ಶೇ. 25 ವ್ಯಾಪಾರ-ವಹಿವಾಟು ಆಗುತ್ತಿದೆ. ಸಂಜೆವರೆಗೂ ಲೋಡಿಂಗ್, ಅನ್‌ಲೋಡಿಂಗ್ ಮಾಡಬಹುದೆಂದು ಪೊಲೀಸ್ ಆಯುಕ್ತರು ಹೇಳಿದ್ದರು. ಬೆಳಗ್ಗೆ 10 ಗಂಟೆ ನಂತರ ಯಾರಿಗೂ ಓಡಾಡಲು ಬಿಡುತ್ತಿಲ್ಲ. ಹೀಗಾಗಿ ಹಮಾಲರು ಬೇರೆ ಪ್ರದೇಶಗಳಿಂದ ಎಪಿಎಂಸಿಗೆ ಬರಲು ಕಷ್ಟವಾಗುತ್ತಿದೆ. ವ್ಯಾಪಾರಸ್ಥರು 10 ಗಂಟೆಯೊಳಗೆ ಅಂಗಡಿಗಳನ್ನು ಬಂದ್ ಮಾಡುತ್ತಿದ್ದಾರೆ.– ಶಿವಾನಂದ ಸಣ್ಣಕ್ಕಿ, ಕಿರಾಣಿ ವರ್ತಕರ ಸಂಘದ ಅಧ್ಯಕ್ಷ, ಎಪಿಎಂಸಿ
- ಶಿವಶಂಕರ ಕಂಠಿ