Advertisement

ಹುಬ್ಬಳ್ಳಿ: ಗೋಡೆ ಕುಸಿದು ಮಹಿಳೆ ಸಾ*ವು, 3500 ಕೋಳಿ ಬಲಿ!

04:52 PM Oct 22, 2024 | Team Udayavani |

ಉದಯವಾಣಿ ಸಮಾಚಾರ
ಹುಬ್ಬಳ್ಳಿ: ಉತ್ತರ ಕರ್ನಾಟಕದ 15 ಜಿಲ್ಲೆ ಸೇರಿ ರಾಜ್ಯಾದ್ಯಂತ ಹಿಂಗಾರು ಮಳೆ ಅಬ್ಬರ ಮುಂದುವರಿದಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದರಿಂದ ಅನ್ನದಾತರು ಕಂಗಾಲಾಗಿದ್ದಾರೆ. ಗೋಡೆ ಕುಸಿದು
ವೃದ್ಧೆ ಮೃತಪಟ್ಟಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಂದು ವಾರ ಪ್ರವಾಸಕ್ಕೆ ನಿರ್ಬಂಧ ವಿಧಿಸಲಾಗಿದೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಬ್ಯಾಡರಹಳ್ಳಿ ಗ್ರಾಮದಲ್ಲಿ ಮನೆ ಕುಸಿದು ಮೀನಾಕ್ಷಮ್ಮ ಕೋಂ ಮಹಾಂತೇಶ್‌ (63) ಮೃತಪಟ್ಟಿದ್ದಾರೆ.

Advertisement

ಹೊಸದುರ್ಗ ತಾಲೂಕಿನ ನಾಕೀಕೆರೆ 12 ವರ್ಷದ ನಂತರ ತುಂಬಿ ಕೋಡಿ ಬಿದ್ದಿದೆ. ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನಲ್ಲಿ 10ಕ್ಕೂ ಹೆಚ್ಚು ಕೆರೆಗಳು ಕೋಡಿ ಬಿದ್ದಿವೆ. ಅಣಜಿ, ಮಂಡೂÉರು, ಹುಣ ಸೆಕಟ್ಟೆ ಗ್ರಾಮದ ಅಡಕೆ ತೋಟಗಳು ಸಂಪೂರ್ಣ ಜಲಾವೃತಗೊಂಡಿವೆ. ಕುರ್ಕಿ ಗ್ರಾಮದ ರೈಲ್ವೆ ಕೆಳಸೇತುವೆಯಲ್ಲಿ ಸಿಲುಕಿದ್ದ 30ಕ್ಕೂ ಹೆಚ್ಚು ಮಕ್ಕಳಿದ್ದ ಶಾಲಾ ವಾಹನ ರಕ್ಷಿಸಲಾಗಿದೆ.ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿರುವುದರಿಂದ ಒಂದು ವಾರ ಪ್ರವಾಸ ಸ್ಥಗಿತಗೊಳಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಟ್ರೆಕ್ಕಿಂಗ್‌ಗೆ ಅನುಮತಿ ನೀಡದಂತೆ ಅರಣ್ಯ ಇಲಾಖೆಗೆ ಆದೇಶಿಸಿದೆ. ಅಜ್ಜಂಪುರ ತಾಲೂಕಿನ ಶಿವನಿ ದೊಡ್ಡಕೆರೆ ಕೋಡಿ ಬಿದ್ದಿದ್ದೆ. ಆಲ್ದೂರು- ಮೂಡಿಗೆರೆ ರಸ್ತೆ ಕೆಲ ಕಾಲ ಸ್ಥಗಿತವಾಗಿತ್ತು. ಶಿವ ಮೊಗ್ಗ ಜಿಲ್ಲೆ ಹೊಳೆಹೊನ್ನೂರು ಸಮೀಪದ ಅರಹತೊಳಲು ಗ್ರಾಮದಲ್ಲಿ ಮಹೇಶ ಎಂಬುವರ ಕೋಳಿ ಫಾರಂಗೆ ನೀರು ನುಗ್ಗಿ 3500 ಕೋಳಿ ಮರಿಗಳು ಮೃತಪಟ್ಟಿವೆ.

ಹಾವೇರಿ ಜಿಲ್ಲೆಯ ಕಂಚಿನೆಗಳೂರು, ತಿಮ್ಮಾಪುರ ಜಲಾವೃತ ಗೊಂಡಿದ್ದು ನೂರಾರು ಕುಟುಂಬಗಳು ಅತಂತ್ರವಾಗಿದೆ. ಸವಣೂರು ತಾಲೂಕು ಬರದೂರಿನಲ್ಲಿ ದೇಗುಲಕ್ಕೆ ಜಲದಿಗ್ಬಂಧನವಾಗಿದ್ದರಿಂದ ದೇವಸ್ಥಾನದಲ್ಲಿ ತಂಗಿದ್ದ 50ಕ್ಕೂ ಹೆಚ್ಚು ಫಂಡರಾಪುರ ಭಕ್ತರನ್ನು ರಕ್ಷಿಸಲಾಗಿದೆ.

ಧಾರವಾಡ ಜಿಲ್ಲೆಯ ತುಪ್ಪರಿಹಳ್ಳ, ಬೆಣ್ಣೆ ಹಳ್ಳ ಅಪಾಯದ ಮಟ್ಟ ತಲುಪಿವೆ. ಬೈಪಾಸ್‌ ರಸ್ತೆಯಲ್ಲಿ ಟ್ರಾಫಿಕ್‌ ಜಾಮ್‌ನಿಂದ
ಚಾಲಕರು ಪರದಾಡಿದರು. ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಭೂಕುಸಿತ ಉಂಟಾಗಿದೆ. ಗುಳೇದಗುಡ್ಡದಿಂದ ನಂದಿಕೇಶ್ವರಕ್ಕೆ
ತೆರಳುವ ರಸ್ತೆ ಮೇಲೆ ಎರಡು ಬೃಹತ್‌ ಬಂಡೆಗಳು ಕುಸಿದು ಬಿದ್ದಿವೆ.ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಸುಮಾರು 2 ಸಾವಿರ
ಎಕರೆ ದ್ರಾಕ್ಷಿ ಬೆಳೆ ಹಾನಿಯಾಗಿದೆ.

Advertisement

ಮಹಾರಾಷ್ಟ್ರದ ಚಂದಗಢದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ರಕ್ಕಸಕೊಪ್ಪ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದು, ಒಂದು ಗೇಟ್‌ ತೆರೆದು ಮಾರ್ಕಂಡೇಯ ನದಿಗೆ ನೀರು ಬಿಡಲಾಗುತ್ತಿದೆ. ಮೈಸೂರಿನಲ್ಲಿ ಸಂಜೆ ವಸ್ತು ಪ್ರದರ್ಶನ ಬಳಿ ಮರವೊಂದು ಬಿದ್ದು ಸಂಚಾರಕ್ಕೆ ಅಡಚಣೆಯಾಯಿತು. ಹಾಸನ ಜಿಲ್ಲೆಯಲ್ಲಿ ಸೋಮವಾರ ಸಂಜೆ ಧಾರಾಕಾರ ಮಳೆಯೊಂದಿಗೆ ಸಿಡಿಲಿನ ಅಬ್ಬರಕ್ಕೆ ಹಾಸನ ನಗರ ತತ್ತರಿಸಿತು. ತುಮಕೂರು ನಗರ ಸೇರಿ ಜಿಲ್ಲಾದ್ಯಂತ ಸೋಮವಾರ ಬಿಟ್ಟು ಬಿಟ್ಟು ವರುಣ
ಅಬ್ಬರಿಸಿದ್ದರಿಂದ ಜನ ಜೀವನವೂ ಅಸ್ತವ್ಯಸ್ತವಾಗಿತು.

ಮತ್ತೆ ಕೆಆರ್‌ಎಸ್‌ ಗರಿಷ್ಠ
ಮಂಡ್ಯ: ಕಾವೇರಿ ನದಿ ಜಲಾನಯನ ಪ್ರದೇಶದಲ್ಲಿ ಹಿಂಗಾರು ಮಳೆ ಉತ್ತಮವಾಗಿರುವುದರಿಂದ ಕೃಷ್ಣರಾಜಸಾಗರ ಜಲಾಶಯಕ್ಕೆ ಒಳಹರಿವು ಬರುತ್ತಿದ್ದು ಜಲಾಶಯದ ಗರಿಷ್ಠ ಮಟ್ಟ ಮುಂದುವರಿದಿದೆ. ಪ್ರಸ್ತುತ ಜಲಾಶಯಕ್ಕೆ 7087 ಕ್ಯುಸೆಕ್‌ ಒಳಹರಿವು ಇದೆ. ನದಿಗೆ ಹಾಗೂ ಜಿಲ್ಲೆಯ ನಾಲೆಗಳಿಗೆ ಸೇರಿ ಒಟ್ಟು ಹೊರಹರಿವು 8287 ಕ್ಯುಸೆಕ್‌ ಹರಿಸಲಾಗುತ್ತಿದೆ. ಪ್ರಸ್ತುತ ಜಲಾಶಯದ ಗರಿಷ್ಠ ನೀರಿನ ಮಟ್ಟ 124.80 ಅಡಿ ಮುಂದುವರಿದಿದೆ. ಕಳೆದ ಅ.14ರಿಂದಲೂ ಮೂರನೇ ಬಾರಿಗೆ ಗರಿಷ್ಠ ಮಟ್ಟ ತಲುಪಿತ್ತು. ಅದು ಮುಂದುವರಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next