Advertisement

ಹುಬ್ಬಳ್ಳಿ: ಸರಕು ಸಾಗಣೆಯಿಂದ 2500 ಕೋಟಿ ಆದಾಯ

06:21 PM Dec 23, 2022 | Team Udayavani |

ಹುಬ್ಬಳ್ಳಿ: ನೈಋತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗ ವತಿಯಿಂದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶ್ರೀಹರ್ಷ ಖರೆ ಅಧ್ಯಕ್ಷತೆಯಲ್ಲಿ 36ನೇ ವಿಭಾಗೀಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ (ಡಿಆರ್‌ಯುಸಿಸಿ) ಸಭೆ ಗುರುವಾರ ನಗರದಲ್ಲಿ ನಡೆಯಿತು.

Advertisement

ಶ್ರೀಹರ್ಷ ಖರೆ ಮಾತನಾಡಿ, ಹುಬ್ಬಳ್ಳಿ ವಿಭಾಗವು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಇದುವರೆಗೆ ಸರಕು ಸಾಗಣೆಯಲ್ಲಿ 2500 ಕೋಟಿ ರೂ.ಗಳ ಆದಾಯ ಗಳಿಸಿದೆ. ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಪ್ರಯಾಣಿಕ ಸೌಲಭ್ಯಗಳ ಸುಧಾರಣೆಗೆ ವಿಶೇಷ ಒತ್ತು ನೀಡಲಾಗುತ್ತಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಹುಬ್ಬಳ್ಳಿ ವಿಭಾಗದಲ್ಲಿ 84 ಕಿಮೀ ಜೋಡು ಮಾರ್ಗ ಪೂರ್ಣಗೊಳಿಸಲಾಗಿದೆ. ರೈಲ್ವೆಯು ಒದಗಿಸುತ್ತಿರುವ ಸೇವೆ ಮತ್ತು ಸುಧಾರಣೆಗಳ ಬಗ್ಗೆ ರೈಲ್ವೆ ಆಡಳಿತ ಮತ್ತು ರೈಲ್ವೆ ಬಳಕೆದಾರರ ನಡುವೆ ಸಲಹೆ, ಸಮಾಲೋಚನೆಗೆ ವೇದಿಕೆ ಒದಗಿಸಲು ರೈಲ್ವೆ ವಿಭಾಗಗಳಲ್ಲಿ ಡಿಆರ್‌ಯುಸಿಗಳನ್ನು ರಚಿಸಲಾಗಿದೆ. ಸಭೆಯಲ್ಲಿ ನಡೆಯುವ ಚರ್ಚೆ ಮತ್ತಷ್ಟು ಉತ್ತಮ ಸೌಲಭ್ಯ, ಸುಧಾರಿತ ಸೇವೆ ಒದಗಿಸುವ ರೈಲ್ವೆಯ ಪ್ರಯತ್ನಕ್ಕೆ ಸಹಾಯ ಮಾಡಲಿದೆ ಎಂದರು.

ವರಿಷ್ಠ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕಿ (ಸಮನ್ವಯ) ಮತ್ತು ಡಿಆರ್‌ಯುಸಿಸಿ ಕಾರ್ಯದರ್ಶಿ ಹರೀತಾ ಎಸ್‌. ಅವರು ಹುಬ್ಬಳ್ಳಿ ವಿಭಾಗದ ಸಾಧನೆಗಳ ಕುರಿತು ಪವರ್‌ ಪಾಯಿಂಟ್‌ ಪ್ರಸ್ತುತ ಪಡಿಸಿದರು. ನಂತರ ಡಿಆರ್‌ಯುಸಿಸಿ ಸದಸ್ಯರೊಂದಿಗೆ ಮೂಲ ಸೌಕರ್ಯ ಕಾಮಗಾರಿಗಳು , ಪ್ರಯಾಣಿಕ ಸೌಲಭ್ಯಗಳು, ರೈಲುಗಳ ನಿಲುಗಡೆ, ವಿಸ್ತರಣೆ ಇತ್ಯಾದಿ ವಿಷಯಗಳ ಕುರಿತು ಚರ್ಚಿಸಲಾಯಿತು.

ಅಪರ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ವಿಶ್ವಾಸ ಕುಮಾರ, ವರಿಷ್ಠ ವಿಭಾಗೀಯ ಪರಿಚಾಲನಾ ವ್ಯವಸ್ಥಾಪಕ ಕೃಷ್ಣ ಚೈತನ್ಯ, ವರಿಷ್ಠ ವಿಭಾಗೀಯ ಎಂಜಿನಿಯರ್‌ (ಸಮನ್ವಯ) ವೆಂಕಟರಾವ್‌ ಸೇರಿದಂತೆ ಇತರೆ ರೈಲ್ವೆ ಅಧಿಕಾರಿಗಳು ಇದ್ದರು.

ಸಭೆಯಲ್ಲಿ ಡಿಆರ್‌ಯುಸಿಸಿ ಸದಸ್ಯರಾದ ಚನ್ನವೀರ ಮುಂಗರವಾಡಿ, ದಾಮೋದರದಾಸ ರಾಠಿ, ಸಂಜಯ ಜಿ. ನಾಯ್ಕ, ಚಂದ್ರಕಾಂತ ಕೃಷ್ಣಗವಸ್‌, ಶಿವಾನಂದ ಎಂ. ಗುಂಜಾಳ, ಕೃಷ್ಣಾನಂದ ವಿಠuಲ ದೇವನಹಳ್ಳಿ, ರಾಜಕಿರಣ ಮೆಣಸಿನಕಾಯಿ, ಸಂಜಯ ಪಾಟೀಲ, ಅನಿಲ ಕುಮಾರ ಜೈನ, ನಾರಾಯಣ ಮೋರೆ ಭಾಗವಹಿಸಿ ಪ್ರಯಾಣಿಕ ಸೌಲಭ್ಯಗಳು, ರೈಲು ಸೇವೆಗಳ ಕುರಿತು ಚರ್ಚಿಸಿದರು. ಸಹಾಯಕ ವಾಣಿಜ್ಯ ವ್ಯವಸ್ಥಾಪಕಿ ನಿವೇದಿತಾ ಎಸ್‌. ಬಾಲರಡ್ಡಿ ವಂದಿಸಿದರು

Advertisement
Advertisement

Udayavani is now on Telegram. Click here to join our channel and stay updated with the latest news.

Next