Advertisement

ಸಕಲರ ಆರೋಗ್ಯಕ್ಕೆ ಅಗ್ಗದ ಡಯಾಲಿಸಿಸ್  

01:11 PM Feb 12, 2021 | Team Udayavani |

ಹುಬ್ಬಳ್ಳಿ: ಸಾಮಾಜಿಕ ಕಾಳಜಿ ಹಾಗೂ ನಿಸ್ವಾರ್ಥ ಸೇವಾ ಕಾರ್ಯದಲ್ಲಿ ತೊಡಗಿರುವ ರೋಟರಿ ಹುಬ್ಬಳ್ಳಿ ಸೌಥ್‌ ಕ್ಲಬ್‌ ಬಡ ರೋಗಿಗಳ ನೆರವಿಗೆ ಧಾವಿಸಿದ್ದು, ನಗರದ ಆಸ್ಪತ್ರೆಯೊಂದರಲ್ಲಿ ಆರು ಡಯಾಲಿಸಿಸ್‌ ಯಂತ್ರ ಸೇರಿದಂತೆ ಪೂರಕ ವ್ಯವಸ್ಥೆ ಕಲ್ಪಿಸಿದೆ.

Advertisement

ಈ ಹಿಂದೆ ರೋಟರಿ ಕ್ಲಬ್‌ನ ಇನ್ನೊಂದು ತಂಡ ಕಿಮ್ಸ್‌ಗೆ ಡಯಾಲಿಸಿಸ್‌ ಯಂತ್ರಗಳನ್ನು ನೀಡಿ ಬಡ ರೋಗಿಗಳ ಸಂಕಷ್ಟಕ್ಕೆ ನೆರವಾಗಿತ್ತು. ಇದೀಗ ರೋಟರಿ ಹುಬ್ಬಳ್ಳಿ ಸೌಥ್‌ ಕ್ಲಬ್‌ ತಾವು ನೀಡುವ ಸೇವೆ ಸದ್ಬಳಕೆಯಾಗಬೇಕು ಎನ್ನುವ ಕಾರಣದಿಂದ ಇಲ್ಲಿನ ಗೋಕುಲ ರಸ್ತೆಯ ಭಾಣಜೀ ಡಿ ಖೀಮಿj ಲೈಫ್‌ ಲೈನ್‌ ಆಸ್ಪತ್ರೆಯಲ್ಲಿ ಆರು ಡಯಾಲಿಸಿಸ್‌ ಯಂತ್ರಗಳನ್ನು ಅಳವಡಿಸಿ ಲೋಕಾರ್ಪಣೆ ಮಾಡಿದೆ.

ಗ್ಲೋಬಲ್‌ ಗ್ರ್ಯಾಂಟ್‌ ಯೋಜನೆಯಡಿ 52 ಲಕ್ಷ ವೆಚ್ಚದಲ್ಲಿ ಆರು ಡಯಾಲಿಸಿಸ್‌ ಯಂತ್ರ, ಎಸಿ, ಬೆಡ್‌, ಇನ್ವರ್ಟರ್‌ ಸೇರಿದಂತೆ ಇನ್ನಿತರ ಪರಿಕರಗಳನ್ನು ನೀಡಿದೆ. ಬಡ ರೋಗಿಗಳಿಗೆ ಇದರ ಸೇವೆ ದೊರೆಯಬೇಕು ಎನ್ನುವ ಕಾರಣಕ್ಕೆ ಕೇವಲ 850 ರೂ. ನಿಗದಿ ಮಾಡಲಾಗಿದೆ.

ಆರು ಯಂತ್ರಗಳ ಪೈಕಿ ಒಂದನ್ನು ಇತರೆ ಯಾವುದಾದರೂ ಸೋಂಕಿನಿಂದ ಬಳಲುತ್ತಿರುವ ಡಯಾಲಿಸಿಸ್‌ ರೋಗಿಗಳಿಗೆ ಮೀಸಲಿರಿಸಿದ್ದು, ಐದು ಯಂತ್ರಗಳು ಕಾರ್ಯ ನಿರ್ವಹಿಸುತ್ತಿವೆ. ಒಂದು ಯಂತ್ರದಿಂದ ನಿತ್ಯ  ಮೂರು ಜನರಿಗೆ ಡಯಾಲಿಸ್‌ ಮಾಡಬಹುದಾಗಿರುವುದರಿಂದ ನಿತ್ಯ 15 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ :ಕಡಬ: ಅರಣ್ಯ ಇಲಾಖೆಯ ಯಶಸ್ವಿ ಕಾರ್ಯಚರಣೆ, ಮರವೇರಿ ಕುಳಿತ ಚಿರತೆ ಸೆರೆ

Advertisement

ಪ್ರಮುಖವಾಗಿ ಬಡ ರೋಗಿಗಳಿಗೆ ಅನುಕೂಲವಾಗಬೇಕು ಎನ್ನುವ ಕಾರಣದಿಂದ ನಿರ್ವಹಣೆಗೆ ತಗಲುವ ವೆಚ್ಚವನ್ನು ಮಾತ್ರ ಶುಲ್ಕದ ರೂಪದಲ್ಲಿ ಪಡೆಯಲಾಗುತ್ತಿದೆ. ಇತರೆ ಖಾಸಗಿ ಆಸ್ಪತ್ರೆಗಳಲ್ಲಿ ಇದರ ದರ 1500-2500 ರೂ. ಇದೆ. ಇಲ್ಲಿನ ಸೇವೆ ಪಡೆಯಲು ಯಾವುದೇ ನಿಯಮಗಳ ನಿರ್ಬಂಧವಿರುವುದಿಲ್ಲ. ಮಹಾನಗರ ಸೇರಿದಂತೆ ಜಿಲ್ಲೆಯ ಯಾವ ಭಾಗದಿಂದಾದರೂ ಬಂದು ಸೇವೆ ಪಡೆಯಬಹುದಾಗಿದೆ. ಈಗಿನ ಶುಲ್ಕವನ್ನೂ ಪಾವತಿ ಮಾಡದ ಪರಿಸ್ಥಿತಿ ಇದ್ದರೆ ಆ ರೋಗಿಗಳ ಪೂರ್ವಾಪರ ಮಾಹಿತಿ ಸಂಗ್ರಹಿಸಿ ಅಂತಹವರಿಗೆ ಉಚಿತವಾಗಿ ಸೇವೆ ನೀಡುವ ಸೌಲಭ್ಯವನ್ನು ರೋಟರಿ ಹುಬ್ಬಳ್ಳಿ ಸೌಥ್‌ ಕ್ಲಬ್‌ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next