Advertisement

Hubballi; ವಿಮಾನ ನಿಲ್ದಾಣಕ್ಕೆ ಇ-ಮೇಲ್ ಮೂಲಕ ಬೆದರಿಕೆ ಸಂದೇಶ

01:22 PM Jun 26, 2024 | Team Udayavani |

ಹುಬ್ಬಳ್ಳಿ: ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕರ ಕಚೇರಿಗೆ ವ್ಯಕ್ತಿಯೊಬ್ಬ ಇ-ಮೇಲ್ ಮೂಲಕ ಜೀವ ಬೆದರಿಕೆ ಸಂದೇಶ ಕಳುಹಿಸಿದ ಕುರಿತು ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ನಿರ್ದೇಶಕ ರೂಪೇಶಕುಮಾರ ಶ್ರೀಪಾದ ಅವರ ಕಚೇರಿ ಮೇಲ್ ಐಡಿಗೆ ಜೂನ್ 24ರಂದು ಬೆಳಗ್ಗೆ 6:57 ಗಂಟೆ ಸುಮಾರಿಗೆ ಅನಾಮಧೇಯ ಇ-ಮೇಲ್ ನಿಂದ ಬೆದರಿಕೆ ಸಂದೇಶ ಬಂದಿದೆ. ಅದರಲ್ಲಿ ಕಬ್ಬಿಣವು ನಮ್ಮ ಹೃದಯದಲ್ಲಿದೆ ಮತ್ತು ನಾವು ಅದನ್ನು ಗಾಳಿಯ ಮೂಲಕ ಕಳುಹಿಸುತ್ತೇವೆ ಮತ್ತು ನಿಮ್ಮ ದೇಹಗಳನ್ನು ನಾಶಪಡಿಸುತ್ತೇವೆ ಎಂಬಿತ್ಯಾದಿ ಬರಹಗಳ ಸಂದೇಶ ಕಳುಹಿಸಲಾಗಿದೆ.

ರೂಪೇಶಕುಮಾರ ಅವರು ಸಿಎಎಸ್‌ಒ, ಐಬಿ, ಬಿಡಿಡಿಎಸ್‌ ಮತ್ತು ಬಾಂಬ್ ನಿಷ್ಕ್ರಿಯ ದಳಕ್ಕೆ ಮಾಹಿತಿ ರವಾನಿಸಿದ್ದು, ವಾಯುಯಾನ ಭದ್ರತಾ ನಿಯಮದ ಪ್ರಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ. ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಮಾನ ನಿಲ್ದಾಣದ ನಿರ್ದೇಶಕರ ಕಚೇರಿ ಬೆದರಿಕೆ ಸಂದೇಶ ಯಾರು ಕಳುಹಿಸಿದ್ದು, ಎಲ್ಲಿಂದ ಬಂದಿದೆ ಸೇರಿದಂತೆ ಸಮಗ್ರ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ರೀತಿಯ ಜೀವ ಬೆದರಿಕೆಯ ಮೇಲ್ ಸಂದೇಶಗಳನ್ನು ಅಪರಿಚಿತರು ದೇಶಾದ್ಯಂತ 113 ಕಡೆಯ ವಿಮಾನ ನಿಲ್ದಾಣಗಳಿಗೆ ಸಾಮೂಹಿಕವಾಗಿ ಕಳುಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.

Advertisement

ಮುನ್ನೆಚ್ಚರಿಕೆಯ ಕ್ರಮ ತೆಗೆದುಕೊಳ್ಳಲಾಗಿದೆ

ವಿಮಾನ ನಿಲ್ದಾಣ ನಿರ್ದೇಶಕರಿಗೆ ಬೆದರಿಕೆಯ ಮೇಲ್ ಇಲ್ಲಿಗೆ ಮಾತ್ರವಲ್ಲ ಇತರೆಡೆಯ ವಿಮಾನ ನಿಲ್ದಾಣಗಳಿಗೂ ಬಂದಂತೆ ನಮಗೂ ಬಂದಿದೆ. ಶೌಚಾಲಯದಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಮೇಲ್ ಬಂದಿತ್ತು ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ರೂಪೇಶಕುಮಾರ ಶ್ರೀಪಾದ ಹೇಳಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಲ್ ಸಂದೇಶದ ಬಗ್ಗೆ‌ ವಿಮಾನ ನಿಲ್ದಾಣ ಪ್ರಾಧಿಕಾರದ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಹು-ಧಾ. ಪೊಲೀಸ್ ಆಯುಕ್ತರ ಗಮನಕ್ಕೂ ತರಲಾಗಿದೆ. ವಿಮಾನ ನಿಲ್ದಾಣದ ಎಲ್ಲ ಕಡೆ ತಪಾಸಣೆ ಮಾಡಲಾಗಿದೆ. ಅದು ಹುಸಿ ಮೇಲ್ ಅಂತ ತಿಳಿದು ಬಂದಿದೆ. ಈ ಸಂಬಂಧ ಗೋಕುಲ್ ರೋಡ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ವಿಮಾನ ನಿಲ್ದಾಣದಲ್ಲಿ ಎಲ್ಲಾ ಮುನ್ನೆಚ್ಚರಿಕೆಯ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next