Advertisement

ರಕ್ತದಾನ ಜೀವದಾನ, ನೇತ್ರದಾನ ಜೀವನ ದಾನ­

04:01 PM Nov 22, 2021 | Team Udayavani |

ಹುಬ್ಬಳ್ಳಿ: “ಮನುಷ್ಯ ಮೃತಪಟ್ಟ ನಂತರ ಕಣ್ಣುಗಳು ಮಣ್ಣಲ್ಲಿಮಣ್ಣಾಗುವ, ಬೆಂಕಿಯಲ್ಲಿ ಸುಟ್ಟು ಭಸ್ಮವಾಗುವ ಬದಲು ಇನ್ನೊಬ್ಬರಬಾಳಿಗೆ ಬೆಳಕಾಗಬೇಕಾಗಿದೆ. ರಕ್ತದಾನ ಜೀವದಾನವಾದರೆ,ನೇತ್ರದಾನ ಜೀವನದಾನವಾಗಿದೆ. ಈ ಮಹತ್ವ ಪ್ರತಿಯೊಬ್ಬರಮನದೊಳಗೆ ಮೂಡಬೇಕಾಗಿದೆ.

Advertisement

ನೇತ್ರದಾನದ ಜಾಗೃತಿಟಿಸಿಲೊಡೆಯುತ್ತಿದೆ. ಹಲವು ತಪ್ಪು ಕಲ್ಪನೆಗಳು ಮರೆಯಾಗಿನೇತ್ರದಾನ ಸಾರ್ಥಕ ಕಾರ್ಯವೆಂಬ ಭಾವನೆ ಇನ್ನಷ್ಟುಬಲಗೊಳ್ಳಬೇಕಿದೆ.’- ಇದು ಕರ್ನಾಟಕದಲ್ಲಿಯೇ ನೇತ್ರ ಚಿಕಿತ್ಸೆಯಲ್ಲಿಹೊಸದೊಂದು ಕ್ರಾಂತಿ ಮಾಡಿದ, ಕಳೆದ ಐದುದಶಕಗಳಿಂದ ನೇತ್ರ ಸಂರಕ್ಷಣೆ ಹಾಗೂ ನೇತ್ರದಾನನಿಟ್ಟಿನಲ್ಲಿ ಮಹತ್ವದ ಯತ್ನ ಕೈಗೊಂಡಿರುವ ನೇತ್ರತಜ್ಞ ಡಾ. ಎಂ.ಎಂ.ಜೋಶಿ ಅವರ ಅನಿಸಿಕೆ. ನಟಪುನೀತ ರಾಜಕುಮಾರ ಅಕಾಲಿಕ ನಿಧನ ನಂತರಅವರು ತಮ್ಮ ನೇತ್ರಗಳನ್ನು ದಾನ ಮಾಡಿದ್ದರಿಂದ ರಾಜ್ಯದಲ್ಲಿನೇತ್ರದಾನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನೇತ್ರದಾನದ ಮಹತ್ವದಕುರಿತು ಡಾ.ಎಂ.ಎಂ.ಜೋಶಿ “ಉದಯವಾಣಿ’ಯೊಂದಿಗೆ ತಮ್ಮಮನದಾಳದ ಅನಿಸಿಕೆಗಳನ್ನು ಹಂಚಿಕೊಂಡರು.

ಕಳೆದ ಮೂರ್‍ನಾಲ್ಕು ದಶಕಗಳಿಗೆ ಹೋಲಿಸಿದರೆ ಇದೀಗನೇತ್ರದಾನ ಬಗ್ಗೆ ಜಾಗೃತಿ ಹೆಚ್ಚುತ್ತಿದೆ. ಆದರೆ, ಅಂಧತ್ವ ನಿವಾರಣೆನಿಟ್ಟಿನಲ್ಲಿ ನೇತ್ರಗಳ ಬೇಡಿಕೆ, ದೊರೆಯುತ್ತಿರುವ ನೇತ್ರದಾನಕ್ಕೆಹೋಲಿಸಿದರೆ ಇನ್ನೂ ಸಾಲದಾಗಿದೆ. ಮನುಷ್ಯ ನಿಧನ ನಂತರನೇತ್ರದಾನ ಮಾಡಿದರೆ ಇಬ್ಬರ ಬದುಕಿಗೆ ಬೆಳಕಾಗಬಹುದು. ಇದೀಗಇರುವ ತಂತ್ರಜ್ಞಾನ ಬಳಸಿ ಕೆಲವೊಂದು ಪ್ರಕರಣಗಳಲ್ಲಿ ಒಂದುನೇತ್ರವನ್ನು ಇಬ್ಬರಿಗೂ ನೀಡಬಹುದಾಗಿದೆ.

ಸ್ವಯಂ ನೇತ್ರದಾನದಮನಸ್ಸುಗಳು ಹೆಚ್ಚಬೇಕಿದೆ. ಅದಕ್ಕಿಂತಲೂ ಮುಖ್ಯವಾಗಿ ನೇತ್ರದಾನವಾಗ್ಧಾನ ಮಾಡಿದವರು ಮೃತಪಟ್ಟ ನಂತರ ಕುಟುಂಬಸ್ಥರು,ಸಂಬಂಧಿಕರು ಸಕಾಲಕ್ಕೆ ಆಸ್ಪತ್ರೆಗೆ ಮಾಹಿತಿ ನೀಡುವ, ನೇತ್ರದಾನಕ್ಕೆಸಹಕರಿಸುವ ಕಾರ್ಯ ಆಗಬೇಕಾಗಿದೆ. ಮೃತಪಟ್ಟ ನಂತರ ದೇಹಮುಕ್ಕಾಗಬಾರದು, ನೇತ್ರ ತೆಗೆಯಬಾರದು ಎಂಬಂತಹ ಹಲವುತಪ್ಪು ಕಲ್ಪನೆಗಳು ದೂರವಾಗಬೇಕಿದೆ. ಈ ನಿಟ್ಟಿನಲ್ಲಿ ಜಾಗೃತಿಗೆಧರ್ಮಗುರುಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ.

ನೇತ್ರದಾನಕ್ಕೆ ಮುನ್ನಡಿ ಬರೆದ ಹುಬ್ಬಳ್ಳಿ: ನೇತ್ರದಾನ ವಿಚಾರಕ್ಕೆ ಬಂದರೆರಾಜ್ಯದಲ್ಲಿ ನೇತ್ರದಾನಕ್ಕೆ ಹುಬ್ಬಳ್ಳಿ ಮುನ್ನುಡಿ ಬರೆದಿದೆ ಎಂಬುದುಹೆಮ್ಮೆಯ ಸಂಗತಿ. ಹುಬ್ಬಳ್ಳಿಯ ಗುಜರಾತ ಸಮಾಜದವರಾದಮಾವಜಿ ಭಾಯಿ ಠಕ್ಕರ್‌ ಅವರು ಮುಂಬೈಗೆ ಹೋಗಿದ್ದಾಗ ಅಲ್ಲಿನಗುಜರಾತ್‌ನ ಪತ್ರಿಕೆಯೊಂದರಲ್ಲಿ ನೇತ್ರದಾನ ಬಗ್ಗೆ ಮಾಹಿತಿತಿಳಿದು ತಾವೂ ನೇತ್ರದಾನ ಮಾಡಲು ನಿರ್ಧರಿಸಿದ್ದರು. ಈಬಗ್ಗೆ ತಮ್ಮ ಆಸ್ಪತ್ರೆಗೆ ಬಂದು ನೇತ್ರದಾನದ ವಾಗ್ಧಾನಮಾಡಿದ್ದರಲ್ಲದೆ, ತಮ್ಮ ಪುತ್ರರು, ಕುಟುಂಬದವರಿಗೂ ತಿಳಿಸಿದ್ದರು.

Advertisement

1975ರಲ್ಲಿ ಅವರು ನಿಧನ ನಂತರಅವರ ಪುತ್ರರು ಬಂದು ಮಾಹಿತಿ ನೀಡಿದಾಗನಾನೇ ಹೋಗಿ ನೇತ್ರ ಸಂಗ್ರಹ ಮಾಡಿಕೊಂಡುಇಬ್ಬರಿಗೆ ಅದನ್ನು ಜೋಡಿಸಿದ್ದೆ. ರಾಜ್ಯದಲ್ಲಿಮೊದಲ ನೇತ್ರದಾನ ಇದಾಗಿದ್ದು, ಇದಾದನಂತರ ಹುಬ್ಬಳ್ಳಿಯಲ್ಲಿನ ಗುಜರಾತ ಸಮಾಜದವರುನೇತ್ರದಾನಕ್ಕೆ ಮುಂದಾಗಿದ್ದರು. ವರ್ಷಕ್ಕೆ ಸುಮಾರು 8-10ಜನರು ನೇತ್ರದಾನಕ್ಕೆ ವಾಗ್ಧಾನ ಮಾಡುವುದು ಆರಂಭವಾಗಿತ್ತು.ನಿಧಾನಕ್ಕೆ ನೇತ್ರದಾನದ ಪ್ರಜ್ಞೆ ಹೆಚ್ಚತೊಡಗಿತು.

ಪುನೀತ್‌ರಿಂದ ಚಳವಳಿ ರೂಪ: ರಾಜಕುಮಾರ ಸಹ ಬೆಂಗಳೂರಿನನಾರಾಯಣ ನೇತ್ರಾಲಯಕ್ಕೆ ನೇತ್ರದಾನ ಮಾಡಿದ್ದರು. ಅಲ್ಲಿ ಅವರಹೆಸರಲ್ಲಿಯೇ ನೇತ್ರ ಬ್ಯಾಂಕ್‌ ಆರಂಭಿಸಲಾಗಿದೆ. ಇದೀಗ ಅವರಪುತ್ರ ಪುನೀತ್‌ ಅಕಾಲಿಕ ನಿಧನದಿಂದ ಅವರ ನೇತ್ರಗಳನ್ನು ದಾನಮಾಡಿದ್ದು, ಬಳಿಕ ನೇತ್ರದಾನ ಚಳವಳಿ ರೂಪ ಪಡೆದುಕೊಂಡಿದೆ.ನಮ್ಮ ಆಸ್ಪತ್ರೆಗೆ ನಿತ್ಯ 100 ಕರೆಗಳು ಬರತೊಡಗಿವೆ. ನಾವೂನೇತ್ರದಾನ ಮಾಡುತ್ತೇವೆ ಎಂದು ವಾಗ್ಧಾನ ಮಾಡುತ್ತಿದ್ದಾರೆ.ಧಾರವಾಡ ಶಾಸಕ ಅಮೃತ ದೇಸಾಯಿ ತಮ್ಮ ಜನ್ಮದಿನದಂದುತಮ್ಮ ಕುಟುಂಬ ಸಮೇತ ನೇತ್ರದಾನ ವಾಗ್ಧಾನ ಮಾಡಿದ್ದಾರೆ.ಅಂಗಡಿ ಕುಟುಂಬದವರು ವಿವಾಹ ಮಹೋತ್ಸವ ಸಂದರ್ಭದಲ್ಲಿನೇತ್ರದಾನ ವಾಗ್ಧಾನ ಮಾಡಿದ್ದಾರೆ.

48 ತಾಸಿನೊಳಗೆ ಜೋಡಣೆ ಅವಶ್ಯ: ನೇತ್ರದಾನ ವಾಗ್ಧಾನಮಾಡಿದವರು ಮೃತಪಟ್ಟ 6 ತಾಸಿನೊಳಗೆ ನೇತ್ರ ಸಂಗ್ರಹ ಕಾರ್ಯನಡೆದರೆ ಬಹಳ ಒಳ್ಳೆಯದು. ಇಲ್ಲವೇ 12 ತಾಸಿನೊಳಗೆ ನೇತ್ರ| ಪುನೀತ್‌ ನಿಧನದ ಬಳಿಕ ಹೆಚ್ಚಿದ ನೇತ್ರದಾನ | ಇನ್ನೂಮೂಡಬೇಕಿದೆ ಜಾಗೃತಿ | ಅಂಧತ್ವ ನಿವಾರಣೆಗೆ ಜೋಶಿ ಆಸ್ಪತ್ರೆ ದಿಟ್ಟ ಹೆಜ್ಜೆಉಡಾ.ಎಂ.ಎಂ.ಜೋಶಿಮನದಾಳದಮಾತುಸಂಗ್ರಹಿಸಲೇಬೇಕು. ಪಡೆದ ನೇತ್ರಗಳನ್ನು -80 ಡಿಗ್ರಿಯಲ್ಲಿಸಂಗ್ರಹಿಸಿ, 24ರಿಂದ 48 ಗಂಟೆಯೊಳಗೆ ಜೋಡಣೆಮಾಡಬೇಕು.ನೇತ್ರದಾನ ವಾಗ್ಧಾನ ಎಲ್ಲರೂ ಮಾಡಿದರೂ ಮೃತಪಟ್ಟನಂತರ ಎಲ್ಲರ ನೇತ್ರಗಳನ್ನು ಇನ್ನೊಬ್ಬರಿಗೆ ಜೋಡಣೆ ಮಾಡಲುಸಾಧ್ಯವಾಗಲ್ಲ. 85-90 ವರ್ಷ ವಯೋಮಿತಿಯವರುಮೃತಪಟ್ಟರೆ ಅಂತಹವರ ನೇತ್ರಗಳನ್ನು ಇನ್ನೊಬ್ಬರಿಗೆ ಜೋಡಣೆಮಾಡಲಾಗದು.

ಅದೇ ರೀತಿ ಹೆಪಟೆಟಿಸ್‌, ವೈರಲ್‌ ಸಮಸ್ಯೆಗಳಿಂದಮೃತಪಟ್ಟವರ ನೇತ್ರಗಳು ಸಹ ಜೋಡಣೆಗೆ ಯೋಗ್ಯವಲ್ಲ. ನೇತ್ರಸಂಗ್ರಹ ವೇಳೆ ವ್ಯಕ್ತಿಯ ರಕ್ತ ಪಡೆದು ಅದನ್ನು ಪರೀಕ್ಷೆಗೆ ಒಳಪಡಿಸಿಇಂತಹ ಯಾವುದೇ ಸಮಸ್ಯೆಗಳು ಇಲ್ಲ ಎಂದಾಗ ಮಾತ್ರನೇತ್ರಗಳನ್ನು ಇನ್ನೊಬ್ಬರಿಗೆ ಜೋಡಣೆ ಮಾಡಲಾಗುವುದು.ಮಧುಮೇಹ, ರಕ್ತದೊತ್ತಡದಂತಹ ದೀಘ್ರಕಾಲದ ವ್ಯಾದಿಇದ್ದವರು ಮೃತಪಟ್ಟರು ಅಂತಹವರ ನೇತ್ರಗಳನ್ನು ಪಡೆದುಬೇರೆಯವರಿಗೆ ಜೋಡಣೆ ಮಾಡಬಹುದು.

3,500 ನೇತ್ರಗಳ ಜೋಡಣೆ: ಉತ್ತರ ಕರ್ನಾಕಟದಲ್ಲಿ ಈ ಹಿಂದೆನೇತ್ರ ಸಮಸ್ಯೆ ಎಂದರೆ ಮುಂಬೈಗೆ ಹೋಗಬೇಕಾಗಿತ್ತು. ನಾನುಮುಂಬೈನಲ್ಲಿ ನೇತ್ರ ವೈದ್ಯಕೀಯ ಶಿಕ್ಷಣ ಮುಗಿಸಿ ಹುಬ್ಬಳ್ಳಿಯಲ್ಲಿಆಸ್ಪತ್ರೆ ಆರಂಭಿಸಿದ ನಂತರ ನೇತ್ರ ಶಸ್ತ್ರ ಚಿಕಿತ್ಸೆಗೆ ಮುಂಬೈಗೆಹೋಗುವುದು ನಿಂತಿತು. ಕರ್ನಾಟಕದಲ್ಲಿಯೇ ರೆಟಿನಾ ಶಸ್ತ್ರಚಿಕಿತ್ಸೆನಂಬರ್‌ ಒನ್‌ ಆಸ್ಪತ್ರೆ ಎಂಬ ಹೆಗ್ಗಳಿಕೆ ಪಡೆಯಿತು. 1975ರಿಂದಇಲ್ಲಿವರೆಗೆ ಸುಮಾರು 3,500 ನೇತ್ರದಾನಿಗಳಿಂದ ಪಡೆದನೇತ್ರಗಳನ್ನು ಜೋಡಣೆ ಮಾಡಲಾಗಿದೆ.

ನೇತ್ರದಾನ ಕುರಿತಾಗಿಜಾಗೃತಿ ಮೂಡಿಸುವ ಕಾರ್ಯವನ್ನು ಕಳೆದ ನಾಲ್ಕುವರೆದಶಕಗಳಿಂದ ನಿರಂತರವಾಗಿ ಮಾಡುತ್ತ ಬರಲಾಗಿದೆ.ಹುಬ್ಬಳ್ಳಿ, ಧಾರವಾಡ, ಕೊಪ್ಪಳದಲ್ಲಿನ ನಮ್ಮ ಆಸ್ಪತ್ರೆಹಾಗೂ ಧಾರವಾಡ ಜಿಲ್ಲೆ ಸೇರಿದಂತೆ ವಿವಿಧ ಕಡೆಯ 7-8ನೇತ್ರ ತಪಾಸಣೆ ಕೇಂದ್ರಗಳಲ್ಲಿಯೂ ನೇತ್ರದಾನ ಜಾಗೃತಿಮೂಡಿಸುತ್ತಿದ್ದೇವೆ. ನೇತ್ರ ತಪಾಸಣೆ ಶಿಬಿರಗಳಲ್ಲಿಯೂ ಜಾಗೃತಿಕಾರ್ಯ ಮಾಡಲಾಗುತ್ತದೆ. ನೇತ್ರದಾನದ ಜಾಗೃತಿ ಹೆಚ್ಚುತ್ತಿದೆಎಂಬ ಸಂತಸ ಇದೆಯಾದರೂ, ಇದು ನಿರಂತರವಾಗಬೇಕು,ಇನ್ನಷ್ಟು ಹೆಚ್ಚಬೇಕಾಗಿದೆ.

ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next