Advertisement
ಆದರೆ ಈ ವರ್ಷ ಅನುಮತಿ ನೀಡಿದ ಎಲ್ಲಾ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಿಸಲು ಶಿಕ್ಷಣಇಲಾಖೆ ಮುಂದಾಗಿದ್ದು, ಪ್ರವೇಶಾತಿಗಾಗಿ ಸರಕಾರಿಶಾಲೆಗಳಿಗೂ ಮುಗಿಬೀಳುವಂತಾಗಿದೆ.ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದ ಮಕ್ಕಳಪಾಲಕರು ಡೊನೇಶನ್, ಶುಲ್ಕ, ಸಮವಸ್ತ್ರ, ಪುಸ್ತಕ,ವಾಹನ ಹೀಗೆ ಹತ್ತಾರು ನಾನಾ ಶುಲ್ಕ ಪಾವತಿಸಿಖಾಸಗಿಶಾಲೆಯ ಶಿಕ್ಷಣ ಕೊಡಿಸುವುದು ಕಷ್ಟ.
Related Articles
Advertisement
ಹೆಚ್ಚಿದ ಬೇಡಿಕೆ: ಆಂಗ್ಲ ಮಾಧ್ಯಮ ತರಗತಿ ಆರಂಭಕ್ಕೆಕೊಠಡಿ, ಶಿಕ್ಷಕರು ಹೀಗೆ ಹಲವು ಅಂಶಗಳಮೇಲೆ ಹು-ಧಾ ವ್ಯಾಪ್ತಿಯಲ್ಲಿ 16 ಹಾಗೂ 12ಶಾಲೆಗಳನ್ನು ತಾಲೂಕುಗಳ ಗ್ರಾಮೀಣ ಶಾಲೆಗಳನ್ನುಆಯ್ಕೆ ಮಾಡಲಾಗಿತ್ತು. ಮೊದಲ ವರ್ಷವೇ28 ಶಾಲೆಗಳಲ್ಲಿ 840 ವಿದ್ಯಾರ್ಥಿಗಳು ಪ್ರವೇಶಪಡೆದಿದ್ದಾರೆ.
ಈ ವರ್ಷವೂ ಕೂಡ ಕನ್ನಡ ಮಾಧ್ಯಮಶಾಲೆಗಳಲ್ಲಿ ದಾಖಲಾತಿಗೆ ಬೇಡಿಕೆಯುಂಟಾಗಿದೆ.ಹೆಬ್ಬಳ್ಳಿ, ಉಣಕಲ್ಲ, ಎಲಿವಾಳ, ರಾಯನಾಳ,ಆನಂದನಗರ ಸೇರಿದಂತೆ ಬಹುತೇಕ ಕಡೆಗ ಎರಡುವಿಭಾಗಗಳಿಗೆ ಬೇಕಾಗುವಷ್ಟು ವಿದ್ಯಾರ್ಥಿಗಳುಪ್ರವೇಶ ಪಡೆಯುತ್ತಿದ್ದಾರೆ. ಇದರೊಂದಿಗೆ ಇತರೆಶಾಲೆಗಳಿಂದಲೂ ಬೇಡಿಕೆ ಹೆಚ್ಚಾಗುತ್ತಿದ್ದು, ಈಕುರಿತು ಶಿಕ್ಷಣ ಇಲಾಖೆಯಿಂದ ಸರಕಾರಕ್ಕೆ ಪ್ರಸ್ತಾವನೆಸಲ್ಲಿಸಲಾಗಿದೆ. ಆದರೆ ಬೇಡಿಕೆ ತಕ್ಕಂತೆ ಅನುಮತಿನೀಡುವ ಕಾರ್ಯ ಸರಕಾರದಿಂದ ಅಗುತ್ತಿಲ್ಲ.ಇತರೆಡೆಗೆ ವರ್ಗಾವಣೆ: 2019-20 ರಲ್ಲಿಆರಂಭವಾದ ಉರ್ದು ಮಾಧ್ಯಮ ಶಾಲೆಗಳಲ್ಲಿಉತ್ತಮ ಸ್ಪಂದನೆಯಿದೆ.
ಅಂತಹ ಕೆಲ ಶಾಲೆಗಳಲ್ಲಿಇನ್ನೊಂದು ವಿಭಾಗ ಆರಂಭಕ್ಕೆ ಬೇಡಿಕೆಯಿದೆ.ಆದರೆ 2020-21 ರಲ್ಲಿ ಗುರುತಿಸಿದ 18 ಶಾಲೆಗಳಲ್ಲಿಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಅಷ್ಟೊಂದು ಆಸಕ್ತಿತೋರಿದಂತೆ ಕಾಣುತ್ತಿಲ್ಲ. 6 ಶಾಲೆಯಲ್ಲಿ ಓರ್ವವಿದ್ಯಾರ್ಥಿಯೂ ಪ್ರವೇಶ ಪಡೆದಿಲ್ಲ. 2 ಶಾಲೆಗಳಲ್ಲಿಕ್ರಮವಾಗಿ 3, 4 ವಿದ್ಯಾರ್ಥಿಗಳಿದ್ದರೆ2ಶಾಲೆಗಳಲ್ಲಿ 15ವಿದ್ಯಾರ್ಥಿಗಳನ್ನು ದಾಟಿಲ್ಲ. ಹೀಗಾಗಿಈಶಾಲೆಗಳಿಗೆನೀಡಿದ ಅನುಮತಿಯನ್ನು ಅಗತ್ಯವಿರುವ ಶಾಲೆಗೆವರ್ಗಾಯಿಸಲಾಗಿದೆ.
ಸಕಾಲಕ್ಕೆ ಅನುಮತಿ ಅಗತ್ಯ: ಸರಕಾರಿ ಕನ್ನಡಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸಿ ದಾಖಲಾತಿಪ್ರಮಾಣ ಹೆಚ್ಚಿಸುವುದು, ಇದರೊಂದಿಗೆ ಪ್ರಾಥಮಿಕಹಂತದಿಂದಲೇ ಆಂಗ್ಲ ಮಾಧ್ಯಮ ಶಿಕ್ಷಣದ ಕಸರತ್ತುಜಿಲ್ಲೆಯಲ್ಲಿ ಕೈಗೂಡಿದೆ. ಸರಕಾರದ ಮೂಲ ಉದ್ದೇಶಈಡೇರಬೇಕಾದರ ಆದರೆ ಬೇಡಿಕೆಯಿರುವಶಾಲೆಗಳಿಗೆ ವಿಭಾಗಹೆಚ್ಚಿಸಲುಅನುಮತಿ,ಹೊಸದಾಗಿಶಾಲೆಗಳಿಗೆ ಅನುಮತಿ ನೀಡುವ ಕೆಲಸ ಸರಕಾರದಿಂದಸಕಾಲಕ್ಕೆ ದೊರೆಯುತ್ತಿಲ್ಲ. ಈ ವರ್ಷ 7 ಶಾಲೆಗಳಿಗೆಅನುಮತಿ ನೀಡಿದ್ದು ಆಗಸ್ಟ್ ತಿಂಗಳಲ್ಲಿ. ಮುಂದಿನವರ್ಷದಿಂದಾದರೂ ಶೈಕ್ಷಣಿಕ ವರ್ಷದ ಆರಂಭದಲ್ಲೇಅನುಮತಿ ನೀಡುವ ಕೆಲಸ ಸರಕಾರದಿಂದಆಗಬೇಕಿದೆ.
ಹೇಮರಡ್ಡಿ ಸೈದಾಪುರ