Advertisement
ಇಲ್ಲಿನ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಮತದಾರರು ದೇಶಕ್ಕೆ ಮಹತ್ವದ ಸಂದೇಶದೊಂದಿಗೆ ಕಾಂಗ್ರೆಸ್ ಗೆ ಅಭೂತಪೂರ್ವ ಗೆಲುವು ನೀಡಿದ್ದಾರೆ. ಭ್ರಷ್ಟಾಚಾರ, ಶೇ.40 ಕಮಿಷನ್ ಹಣದ ಮದದಿಂದ ಆಪರೇಷನ್ ಕಮಲದಿಂದ ಅಧಿಕಾರ ಅನುಭವಿಸಿದ ಬಿಜೆಪಿಯವರು, ಅದೇ ಹಣದದಿಂದ ಮತ್ತೊಮ್ಮೆ ಅಧಿಕಾರದ ಕನಸು ಕಾಣುತ್ತಿದೆ. ಅದು ಈ ಬಾರಿ ಕರ್ನಾಟಕದಲ್ಲಿ ಈಡೇರುವುದಿಲ್ಲ. ಅಷ್ಟರ ಮಟ್ಟಿಗೆ ಜನ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ನೀಡಿದ್ದಾರೆ ಎಂದರು.
Related Articles
Advertisement
ಮಣಿಪುರ ಘಟನೆ ಬಗ್ಗೆ ಪ್ರತಿಕ್ರಿಯಿಸಿ, ಮಣಿಪುರದ ಘಟನೆಗೆ ಅಲ್ಲಿನ ಮುಖ್ಯಮಂತ್ರಿ ನೇರ ಜವಾಬ್ದಾರಿ ಹೊರಬೇಕಾಗಿದೆ. ಮಣಿಪುರದಲ್ಲಿ ಕುಕ್ಕಿ, ನಾಗ ಆದಿವಾಸಿಗಳಾಗಿದ್ದಾರೆ. ಮೇಥೆಯಿ ಸಮಾಜ ಹಾಗೂ ಆದಿವಾಸಿಗಳ ನಡುವಿನ ಮೀಸಲಾತಿ ವಿವಾದ ಹಿಂಸಾಚಾರಕ್ಕೆ ಕಾರಣ ಎನ್ನಲಾಗುತ್ತಿದೆಯಾದರು, ಮಣಿಪುರದ ಸರಕಾರ ಪ್ರೋತ್ಸಾಹದಿಂದ ನಡೆಯುವ ಡ್ರಗ್ ದಂಧೆಯೇ ಮೂಲ ಕಾರಣವಾಗಿದೆ ಎಂದು ಆರೋಪಿಸಿದರು.
ಕ್ರಿಶ್ಚಿಯನ್ ಧರ್ಮ ಸ್ವೀಕರಿಸಿದ ಆದಿವಾಸಿಗಳನ್ನು ಮೀಸಲಾತಿಯಿಂದ ಹೊರಗಿಡಬೇಕೆಂದು ಆರ್ ಎಸ್ ಎಸ್, ಸಂಘ ಪರಿವಾರ ಮಣಿಪುರ ಸೇರಿದಂತೆ ಹಲವು ರಾಜ್ಯಗಳಲ್ಲಿ ಅಭಿಯಾನ ನಡೆಸುತ್ತಿದ್ದಾರೆ. ಇದೀಗ ಕಾಶ್ಮೀರ ದಲ್ಲೂ ಗಜರ್ ಮುಸ್ಲಿಂ ಆದಿವಾಸಿಗಳ ನಡುವೆ ವಿವಾದ ಸೃಷ್ಟಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ನಾಯಕ ಕಮಲನಾಥ ಅವರು, ಭಾರತ ಹಿಂದೂರಾಷ್ಟ್ರ ಎಂದು ಘೋಷಿಸಬೇಕೆಂಬ ಹೇಳಿಕೆಗೆ ಪ್ರತಿಕ್ರಿಸಿದ ಅವರು, ಕಮಲನಾಥರ ಹೇಳಿಕೆ ತಪ್ಪಾಗಿ ವ್ಯಾಖ್ಯಾನಿಸಲಾಗಿದೆ ಎಂದರು.
ಹಿಂದೂ, ಹಿಂದುತ್ವ ಎಂಬುದು ಸಾವರ್ಕರ್ ಅವರು ಸೃಷ್ಟಿಸಿದ್ದು, ಅವರೇ ಹಿಂದುತ್ವಕ್ಕೂ, ಸನಾತನ ಧರ್ಮಕ್ಕೂ ಸಂಬಂಧವಿಲ್ಲ ಎಂದಿದ್ದಾರೆ. ನಾವು ಸನಾತನ ಧರ್ಮ ಸೇರಿದಂತೆ ಎಲ್ಲ ಧರ್ಮಿಯರು ಸಮಾನವಾಗಿ ಬದುಕುವ ಹಕ್ಕು ಹೊಂದಿದ್ದಾರೆ ಎಂಬುದು ಕಾಂಗ್ರೆಸ್ ಧ್ಯೇಯವಾಗಿದೆ ಎಂದರು. ನಾವು ಮೃದು ಹಿಂದುತ್ವಕ್ಕೆ ಮುಂದಾಗಿಲ್ಲ. ಸನಾತನ ಸೇರಿ ಎಲ್ಲ ಧರ್ಮ ಗೌರವಿಸುತ್ತೇವೆ ಎಂದರು.
ಮಾಜಿ ಸಿಎಂ ಜಗದೀಶ ಶೆಟ್ಟರ, ಮಾಜಿ ಸಚಿವ ಎ.ಎಂ ಹಿಂಡಸಗೇರಿ ಇನ್ನಿತರರು ಇದ್ದರು.