ಹುಬ್ಬಳ್ಳಿ: ಇಲ್ಲಿನ ಕೆಎಲ್ಇ ಸಂಸ್ಥೆಯ ಎಸ್.ಐ.ಮುನವಳ್ಳಿ ಪಾಲಿಟೆಕ್ನಿಕ್ ಮಹಾವಿದ್ಯಾಲಯದ ಐದನೇ ಸೆಮಿಸ್ಟರ್‌ನಲ್ಲಿ ಓದುತ್ತಿರುವ ವಿದ್ಯಾರ್ಥಿಯೋರ್ವ ಪ್ರಖ್ಯಾತ ಅಮೇಜಾನ್ ಹಾಗೂ ಫ್ಲಿಪ್‌ಕಾರ್ಟ್ ಶಾಪಿಂಗ್ ಜಾಹೀರಾತು ರೂಪದರ್ಶಿಯಾಗಿ ಆಯ್ಕೆಯಾಗಿದ್ದಾರೆ.
ಇಲ್ಲಿನ ವಿದ್ಯಾನಗರ ಶಿರೂರ ಪಾರ್ಕ್ ನಿವಾಸಿ ನವೀನ ದ್ಯಾವನಗೌಡ್ರ ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್ ಶಾಂಪಿಂಗ್ ಸಂಸ್ಥೆಗಳ ಟೀ ಶರ್ಟ್ ಮಾಡೆಲ್ ಆಗಿ ಎಲ್ಲರ ಗಮನ ಸೆಳೆದಿದ್ದಾರೆ.
ಕಾಲೇಜಿನಲ್ಲಿ ನಡೆಯುವ ಫನ್ ವೀಕ್ ಕಾರ್ಯಕ್ರಮದಲ್ಲಿ ಮಾಡಲಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಂಡು ಎಲ್ಲರ ಗಮನ ಸೆಳೆದಿದ್ದೆ. ಈ ಸಂದರ್ಭದಲ್ಲಿ 32 ಜನರನ್ನು ಹಿಂದಿಕ್ಕಿ ಪ್ರಥಮ ಸ್ಥಾನ ಪಡೆದಿರುವುದು ಈ ಹಂತಕ್ಕೆ ಬರಲು ಮೂಲ ಕಾರಣ.ನನ್ನ ತಂದೆ ಹಾಗೂ ಶಿಕ್ಷಕರ ಪ್ರೋತ್ಸಾಹದಿಂದ ಮಾಡಲಿಂಗ್‌ನಲ್ಲಿ ಹೆಚ್ಚು ಒಲವು ತೋರಿಸಿದ್ದೇನೆ ಎಂದು ನವೀನ ಸ್ಮರಿಸಿದರು.
ಕರ್ನಾಟಕಸ್ ನೆಕ್ಸ್ ಟಾಪ್ ಮಾಡೆಲ್ ಸ್ಪರ್ಧೆ ಆಯೋಜಕರಾಗಿರುವ ಮಹೇಶ ಕಾಮಶೆಟ್ಟಿ ಅವರು ಆನ್‌ಲೈನ್ ಶಾಂಪಿಂಗ್ ಜಾಲತಾಣದಲ್ಲಿ ನಡೆಯುತ್ತಿರುವ ಪುರುಷ ರೂಪದರ್ಶಿಗಳ ಅವಕಾಶ ಕುರಿತು ಮಾಹಿತಿ ನೀಡಿದ್ದರು. ಇದನ್ನಾಧರಿಸಿ ಎರಡು ಟಿ ಶರ್ಟ್ ಖರೀದಿಸಿ, ಟಿ-ಶರ್ಟ್ ಧರಿಸಿದ ಫೋಟೊಗಳನ್ನು ಎರಡು ಕಂಪೆನಿಗಳಿಗೆ ಕಳುಹಿಸಿ ಕೊಟ್ಟಿದ್ದೆ. ನಂತರ ಜಾಲತಾಣದವರು ನಡೆಸಿದ ಟೀ ಶರ್ಟ್ ಜಾಹಿರಾತಿನಲ್ಲಿ ತೇರ್ಗಡೆಯಾಗಿದ್ದೇನೆ.
ಅಮೇಜಾನ್ ಜಾಲತಾಣದಲ್ಲಿ 3 ದಿನಗಳಲ್ಲಿ 5ಟೀ ಶರ್ಟ್ ಮಾರಾಟವಾಗಬೇಕು. ಆದರೆ ನಾನು ಜಾಹೀರಾತು ನೀಡಿದ ಟೀ ಶರ್ಟ್ ಕೇವಲ 10 ಗಂಟೆಯಲ್ಲಿ ಹಾಗೂ ಫ್ಲಿಪ್‌ಕಾರ್ಟ್‌ನಲ್ಲಿ 24ಗಂಟೆಯಲ್ಲಿ ಟೀ ಶರ್ಟ್ ಮಾರಾಟವಾಗಿವೆ. ತದ ನಂತರ ಅಮೇಜಾನ್ ಹಾಗೂ ಫ್ಲಿಪ್‌ಕಾರ್ಟ್ ಸಂಸ್ಥೆ ಶಾಪಿಂಗ್ ತಾಣಗಳ ರೂಪದರ್ಶಿಯಾಗಿ ಆಯ್ಕೆಯಾಗಿರುವುದನ್ನು ಖಚಿತ ಪಡಿಸಿವೆ ಎಂದು ನವೀನ ಹೇಳಿದರು.
ಮತ್ತೆರಡು ಕಡೆ ಬುಲಾವ್: ಅಮೇಜಾನ್ ಹಾಗೂ ಫ್ಲಿಪ್‌ಕಾರ್ಟ್ ಜಾಲತಾಣಗಳಲ್ಲಿ ರೂಪದರ್ಶಿಯಾಗಿ ಆಯ್ಕೆಯಾಗುತ್ತಿದ್ದಂತೆ ಸ್ಟಾರ್‌ಪ್ಲಸ್ ಹಾಗೂ ಜೀ ಟಿವಿ ಜಾಹೀರಾತು ಗಳಲ್ಲಿಯೂ ಬುಲಾವ್ ಬಂದಿದೆ. ಜುಲೈ 21ಕ್ಕೆ ದೆಹಲಿಗೆ ಆಗಮಿಸಲು ತಿಳಿಸಿದ್ದಾರೆ ಎಂದು ನವೀನ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಅಂತಿಮ ಸ್ಪರ್ಧೆ: ಕರ್ನಾಟಕಸ್ ನೆಕ್ಸ್r ಟಾಪ್ ಮಾಡೆಲ್ ಸ್ಪರ್ಧೆಯಲ್ಲಿ ಪಾಲ್ಗೊಂಡು ಅದರಲ್ಲಿ ಆಗಮಿಸಿದ್ದ 125 ಜನರಲ್ಲಿ ಅಂತಿಮ 12ರ ಸ್ಥಾನಕ್ಕೆ ಆಯ್ಕೆಗೊಂಡೆ. ನಂತರ ನಂತರ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ 600 ಜನರು ಪಾಲ್ಗೊಂಡಿದ್ದು, ಅದರಲ್ಲಿ 30 ಜನರಲ್ಲಿ ಸೆಮಿಫೈನಲ್ಗೆ ಆಯ್ಕೆಗೊಂಡಿದ್ದೇನೆ. ಇದೇ ಜುಲೈ 8ರಿಂದ 12ರವರೆಗೆ ಗೋಕುಲ ರಸ್ತೆ ಕಾಟನ್ ಕೌಂಟಿ ಕ್ಲಬ್‌ನಲ್ಲಿ ಸೆಮಿಫೈನಲ್ ಹಾಗೂ ಅಂತಿಮ ಸ್ಪರ್ಧೆ ನಡೆಯಲಿದೆ ಎಂದು ನವೀನ ತಿಳಿಸಿದರು.