ಬೆಂಗಳೂರು: ಹುವಾವೇ ಕಂಪೆನಿಯು ಮೂನ್ ಫೇಸ್ ಕಲೆಕ್ಷನ್‍ನ ಲ್ಲಿ ಹುವಾವೇ ವಾಚ್‌ಜಿಟಿ 2 ಪ್ರೊ ಹೆಸರಿನ ಹೊಸ ಸ್ಮಾರ್ಟ್ ವಾಚನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.
ಅನೇಕ ವೈಯಕ್ತೀಕೃತ ಆಯ್ಕೆಗಳೊಂದಿಗೆ ಟೈಟಾನಿಯಮ್ ಫ್ರೇಮ್ ಹಾಗೂ 200ಕ್ಕಿಂತ ಹೆಚ್ಚಿನ ವಾಚ್ ಫೇಸ್‍ಗಳೊಂದಿಗೆ ಚರ್ಮಸ್ನೇಹಿ ಸಾಫೈರ್ ಡಯಲ್ ಹೊಂದಿದೆ.
ಹುವಾವೈ ವಾಚ್‌ಜಿಟಿ 2 ಪ್ರೊ ಒಂದು ಚಾರ್ಜ್‌ನಲ್ಲಿ 14 ದಿನಗಳ ಬ್ಯಾಟರಿ ಹೊಂದಿದ್ದು, ವೈರ್‌ಲೆಸ್ ಚಾರ್ಜಿಂಗ್ ಹಾಗು ರಿವರ್ಸ್ ವೈರ್ ಲೆಸ್ ಚಾರ್ಜಿಂಗ್ ಎರಡನ್ನೂ ಬೆಂಬಲಿಸುತ್ತದೆ.
ಈ ಸ್ಮಾರ್ಟ್‌ವಾಚ್, ವೈಯಕ್ತಿಕ ಗೋಲ್‌ಕೋಚ್ ಒಳಗೊಂಡಂತೆ ಅನೇಕ ಸ್ಪೋರ್ಟ್ಸ್ ಮೋಡ್‌ಗಳು ಹಾಗು ಟೆನ್ನಿಸ್, ವರ್ಕೌಟ್, 5 ಎಟಿಎಮ್‌ವರೆಗೆ ಜಲನಿರೋಧಕತೆಯ ಸಾಮರ್ಥ್ಯವಿರುವ ಈಜುವಿಕೆ ಒಳಗೊಂಡಂತೆ 100ಕ್ಕಿಂತ ಹೆಚ್ಚಿನ ವರ್ಕೌಟ್ ಮೋಡ್‌ಗಳನ್ನು ಹೊಂದಿದೆ.
ಹೃದಯ ಮತ್ತು ಶ್ವಾಸಕೋಶ ಸ್ವಾಸ್ಥ್ಯ, ಗಾಳಿಯ ಒತ್ತಡದಲ್ಲಿನ ಬದಲಾವಣೆಯನ್ನು ಪತ್ತೆಹಚ್ಚಲು ಆಲ್ಟಿಟ್ಯೂಡ್ ಬ್ಯಾರೋಮೀಟರ್, 24 ಘಂಟೆಗಳ ರಕ್ತದಲ್ಲಿನ ಆಮ್ಲಜನಕ ಮಟ್ಟ ಮತ್ತು ಹೃದಯ ಬಡಿತ ಸೂಚಕ, ವೈಜ್ಞಾನಿಕ ನಿದ್ರಾ ಮಾನಿಟರ್, ಒತ್ತಡ ಮಾನಿಟರ್ ಹೊಂದಿದೆ.
ಪ್ರೀಮಿಯಮ್ ಸಾಫೈರ್‌ಗ್ಲಾಸ್, ಟೈಟಾನಿಯಮ್ ಬಾಡಿ, ಮತ್ತು ಸಿರಾಮಿಕ್ ರೇರ್ ಕೇಸ್ ನಂತಹ ಅತ್ಯಂತ ಬಾಳಿಕೆ ಬರುವ ವಸ್ತುಗಳನ್ನು ಇದರಲ್ಲಿ ಉಪಯೋಗಿಸಲಾಗಿದೆ. ಈ ಸ್ಮಾರ್ಟ್ ವಾಚ್, ಚಟುವಟಿಕೆಗಳನ್ನು ಟ್ರ್ಯಾಕ್ ಮಾಡಿ, ಡಾಟಾವನ್ನು ವಿಭಜಿಸಿ, ಮುಂದೆ ನೀವು ಯಾವಾಗ ವರ್ಕೌಟ್ ಮಾಡಬೇಕು ಎಂದು ಸಲಹೆ ನೀಡುತ್ತದೆ.
ಮೂನ್ ಫೇಸ್: ಇದರ ಮೂನ್ ಫೇಸ್ ಕಾರ್ಯಾಚರಣೆಯ ಅತ್ಯಾಧುನಿಕ ವಿನ್ಯಾಸವು, ಚಂದ್ರನು ಬದಲಾವಣೆಗೊಳಗಾಗುವ ವಿವಿಧ ಹಂತಗಳನ್ನು(ಫೇಸ್) ಗಮನಿಸಬಹುದಾದ ವಿಶಿಷ್ಟ ಚಂದ್ರನ ಮುಖಗಳನ್ನು ಗ್ರಾಹಕರಿಗೆ ತೋರಿಸುತ್ತದೆ. ಇದು, ಅಮಾವಾಸ್ಯೆ, ಹುಣ್ಣಿಮೆ, ಬಿದಿಗೆ ಚಂದ್ರ ಮುಂತಾದ ಚಂದ್ರನ ಎಂಟು ಹಂತಗಳನ್ನು ಒಳಗೊಂಡಿದೆ.
1.39 ಅಂಗುಲದ ಅಮೊಲೆಡ್ ಪರದೆ ಹೊಂದಿದ್ದು, ವೈರ್‌ಲೆಸ್ ಚಾರ್ಜಿಂಗ್ ಬೆಂಬಲದಿಂದಾಗಿ, ಈ ಸ್ಮಾರ್ಟ್‌ವಾಚನ್ನು, ಯಾವುದೇ ಮುಖ್ಯವಾಹಿನಿ ಸ್ಮಾರ್ಟ್‌ಫೋನ್ ವೈರ್‌ಲೆಸ್ ಚಾರ್ಜಿಂಗ್ ಅಥವಾ ವೈರ್‌ಲೆಸ್ ಪವರ್ ಬ್ಯಾಂಕ್‌ನಿಂದ ಚಾರ್ಜ್ ಮಾಡಿಕೊಳ್ಳಬಹುದು. ಐದು ನಿಮಿಷಗಳ ಚಾರ್ಜಿಂಗ್‌ನಲ್ಲಿ ಸ್ಮಾರ್ಟ್‌ವಾಚ್ ಅನ್ನು 10 ಗಂಟೆಗಳವರೆಗೆ ಬಳಸಬಹುದು.
ಈ ವಾಚ್ ಫ್ಲಿಪ್‌ಕಾರ್ಟ್‌ನಲ್ಲಿ ಸ್ಪೋರ್ಟ್ಸ್ ಮತ್ತು ಕ್ಲಾಸಿಕ್ ಆವೃತ್ತಿಗಳಲ್ಲಿ ಲಭ್ಯವಿದೆ. ಇವುಗಳ ಬೆಲೆ ಕ್ರಮವಾಗಿ ರೂ.22,990/- ಮತ್ತು ರೂ.24,990/- ಆಗಿದೆ.