ಅಲ್ಟ್ರಾ ವೈಡ್ ಆ್ಯಂಗಲ್ ಲೆನ್ಸ್ ಸ್ಯಾಮ್‌ಸಂಗ್ ನಂತರ ಜಗತ್ತಿನಲ್ಲಿ ಅತಿ ಹೆಚ್ಚು ಮಾರಾಟಗೊಳ್ಳುವ ಮೊಬೈಲ್ ಬ್ರ್ಯಾಂಡ್ ಹುವಾವೇ. ಹುವಾವೇ ಕಂಪೆನಿ “ಹುವಾವೇ’ ಮತ್ತು “ಆನರ್’ ಎರಡೂ ಹೆಸರುಗಳಲ್ಲಿ ಮೊಬೈಲ್‌ಫೋನ್‌ಗಳನ್ನು ಹೊರ ತರುತ್ತಿದೆ. ಹುವಾವೇ ಬ್ರಾಂಡಿನಡಿ ಪ್ರೀಮಿಯಂ ಮಾದರಿಗಳಿಗೆ ಆದ್ಯತೆ ನೀಡಿದರೆ, ಆನರ್ ಬ್ರ್ಯಾಂಡಿನಲ್ಲಿ ಆರಂಭಿಕ, ಮಧ್ಯಮ ದರ್ಜೆಯ ಹಾಗೂ ಮಿತವ್ಯಯಕಾರಿ ಫ್ಲಾಗ್‌ಶಿಪ್ ಫೋನ್‌ಗಳನ್ನು ಬಿಡುಗಡೆ ಮಾಡುತ್ತದೆ. ಹುವಾವೇ ಬ್ರಾಂಡಿನಡಿ ಬಿಡುಗಡೆಯಾದ ಫೋನ್‌ಗಳಲ್ಲಿ ಕೆಲವನ್ನು ಆನರ್ ಬ್ರಾಂಡಿನಲ್ಲೂ ಹೊರತಂದ ಉದಾಹರಣೆಯೂ ಇದೆ. ಯೂರೋಪ್ ದೇಶಗಳಲ್ಲಿ “ಹುವಾವೇ’ ಬ್ರ್ಯಾಂಡ್‌ಗಳಿಗೆ ಹೆಚ್ಚಿನ ಆದ್ಯತೆ ನೀಡಿದರೆ, ಏಷ್ಯಾ ದೇಶಗಳಲ್ಲಿ “ಆನರ್’ ಬ್ರ್ಯಾಂಡ್ ಗೆ ಸಂಸ್ಥೆ ಒತ್ತು ನೀಡಿದೆ. ಈ ಕಾರಣಕ್ಕೆ ಭಾರತದಲ್ಲಿ ಹುವಾವೇ ಫೋನುಗಳಿಗಿಂತ ಆನರ್ ಬ್ರ್ಯಾಂಡಿನ ಫೋನುಗಳು ಹೆಚ್ಚು ಜನಪ್ರಿಯತೆ ಪಡೆದಿವೆ.
ಹೀಗೆ ಹುವಾವೇ ಇತ್ತೀಚಿಗೆ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಆನರ್ 20ಐ ಬಗ್ಗೆ ಈ ಸಂಚಿಕೆಯಲ್ಲಿ ಪರಿಚಯ ಮಾಡಿಕೊಳ್ಳೋಣ. ಆನರ್ 20 ಮಿತವ್ಯಯದ ದರದ ಉನ್ನತ ದರ್ಜೆಯ ಫೋನ್ ಆದರೆ, ಆನರ್ 20ಐ ಮಧ್ಯಮ ದರ್ಜೆಯ ಫೋನ್ ಆಗಿದೆ. ಇದರ ದರ 14 ಸಾವಿರ ರೂ.ಕ್ಯಾಮೆರಾಗೆ ಹೆಚ್ಚಿನ ಫೋಕಸ್‌ಆನರ್ ಐ ಸೀರೀಸ್‌ನ ಫೋನ್‌ನಲ್ಲಿ ಕ್ಯಾಮರಾಕ್ಕೆ ಒತ್ತು ನೀಡಲಾಗಿದೆ. ಹಾಗಾಗಿ 14 ಸಾವಿರ ರೂ.ನ ಕಡಿಮೆ ಬೆಲೆಯ ಫೋನ್‌ನಲ್ಲೂ ಕೂಡ ಮೂರು ಲೆನ್ಸ್ ಕ್ಯಾಮರಾ ಈ ಫೋನ್‌ನ ವಿಶೇಷ. ಹಿಂಬದಿ ಕ್ಯಾಮರಾದಲ್ಲಿ 24 ಮೆ.ಪಿ. ಮುಖ್ಯ ಲೆನ್ಸ್, 8 ಮೆ.ಪಿ. ಅತಿ ಹೆಚ್ಚು ವಿಶಾಲ ಕೋನದ ಲೆನ್ಸ್ (ಅಲ್ಟ್ರಾ ವೈಡ್, 120 ಡಿಗ್ರಿ ಆ್ಯಂಗಲ್) 2 ಮೆ.ಪಿ. ಡೆಪ್ತ್ ಸೆನ್ಸರ್ ಇದೆ. ಈ ದರದಲ್ಲಿ ಅಲ್ಟ್ರಾ ವೈಡ್ ಆ್ಯಂಗಲ್ ಅಪರೂಪ. ಅಂದರೆ, ಗ್ರೂಪ್ ಫೋಟೋ ತೆಗೆಯುವ ಸಂದರ್ಭದಲ್ಲಿ ತುಂಬಾ ಹಿಂದಕ್ಕೆ ಹೋಗುವ ಅಗತ್ಯವಿರುವುದಿಲ್ಲ. ಸಣ್ಣ ಕೋಣೆಯಲ್ಲಿ ಫೋಟೋ ತೆಗೆಯುವಾಗ ಅಥವಾ ಹಿಂದಕ್ಕೆ ಹೋಗಲು ಜಾಗವಿಲ್ಲದೆ ಇದ್ದ ಸಂದರ್ಭಗಳಲ್ಲಿ ಸಹಾಯಕ್ಕೆ ಬರುವುದು. ಕಟ್ಟಡದ ಫೋಟೋವನ್ನು ಹತ್ತಿರದಲ್ಲೇ ನಿಂತು ತೆಗೆಯಲು ಕೂಡಾ ವೈಡ್ ಆ್ಯಂಗಲ್ ಸಹಾಯಕ. ಇದೆಲ್ಲದರ ಜೊತೆಗೆ ಕ್ಯಾಮರಾ ಎಐ (ಆರ್ಟಿಫಿಷಿಯಲ್ ಇಂಟಲಿಜೆನ್ಸ್) ಹೊಂದಿದೆ.
ಅಂದರೆ, ಸನ್ನಿವೇಶಕ್ಕೆ ತಕ್ಕಂತೆ ತಾನೇ ನೆರಳು ಬೆಳಕು ಸೇರಿದಂತೆ ಸೆಟಿಂಗ್‌ಗಳನ್ನು ತನ್ನಷ್ಟಕ್ಕೆ ಸಂಯೋಜಿಸಿಕೊಳ್ಳುತ್ತದೆ.ಇನ್ನು, ಸೆಲ್ಫಿà ಕ್ಯಾಮರಾ ವಿಷಯಕ್ಕೆ ಬಂದರೆ ಇದರಲ್ಲಿ 32 ಮೆ.ಪಿ. ಮುಂಬದಿ ಕ್ಯಾಮರಾ ಇದೆ. ಈಗೆಲ್ಲ ಸೆಲ್ಫಿ ಕ್ಯಾಮರಾ ಅನೇಕ ಸಂದರ್ಭಗಳಲ್ಲಿ ಬಳಸುವುದರಿಂದ 32 ಮೆ.ಪಿ. ಸೆಲ್ಫಿàಯಲ್ಲಿ ಉತ್ತಮ ಗುಣಮಟ್ಟದ ಫೋಟೋ ತೆಗೆಯಬಹುದು.ಈ ಫೋನ್‌ನಲ್ಲಿ 4 ಜಿಬಿ ರ್ಯಾಮ್ ಮತ್ತು 128 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯವಿದೆ. ಈ ದರಕ್ಕೆ ಕಂಪೆನಿಗಳು ಸಾಮಾನ್ಯವಾಗಿ 64 ಜಿಬಿ ಆಂತರಿಕ ಸಂಗ್ರಹ ನೀಡುತ್ತವೆ. ಇದರಲ್ಲಿ 128 ಜಿಬಿ ಇರುವುದರಿಂದ ಹೆಚ್ಚಿನ ಫೋಟೋಗಳು ವಿಡಿಯೋಗಳು ಆಡಿಯೋ ಫೈಲ್‌ಗಳನ್ನು ಸಂಗ್ರಹಿಸಬಹುದು. ಮಧ್ಯಮ ದರ್ಜೆಯ ಫೋನ್‌ಗಳಲ್ಲಿ 4 ಜಿಬಿ ರ್ಯಾಮ್ ಸಾಮರ್ಥ್ಯ ಬಹಳವೇ ಸಾಕು.3400 ಎಂಎಎಚ್ ಬ್ಯಾಟರಿ ನೀಡಲಾಗಿದೆ. ಶೇ. 30ರಷ್ಟು ಕಡಿಮೆ ಬ್ಯಾಟರಿ ಬಳಸುವಂತೆ ವಿನ್ಯಾಸಗೊಳಿಸುವುದರಿಂದ ಸಂಪೂರ್ಣ ಒಂದು ದಿನದ ಬ್ಯಾಟರಿ ಬಾಳಿಕೆಗೆ ಅಡ್ಡಿಯಿಲ್ಲ. ಬ್ಯಾಟರಿ ಚಾರ್ಜ್‌ಗೆ ಮೈಕ್ರೋ ಯುಎಸ್‌ಬಿ ಕಿಂಡಿ, ಆಡಿಯೊ ಕೇಳಲು 3.5 ಎಂಎಂ ಆಡಿಯೋ ಜಾಕ್ ನೀಡಲಾಗಿದೆ.
ಈ ಮೊಬೈಲ್ ಕಡು ಕಪ್ಪು, ನೀಲಿ ಮತ್ತು ಕೆಂಪು ಬಣ್ಣದಲ್ಲಿ ದೊರಕುತ್ತದೆ. ಗೇಮಿಂಗಿಗೂ ಸೈಇದು ಹುವಾವೆಯವರದೇ ತಯಾರಿಕೆಯಾದ ಹೈಸಿಲಿಕಾನ್ ಕಿರಿನ್ 710 ಪ್ರೊಸೆಸರ್ ಹೊಂದಿದೆ. ಎಂಟು ಕೋರ್‌ಗಳ ಈ ಪ್ರೊಸೆಸರ್ 2.2 ಗಿ.ಹ ವೇಗದ ಸಾಮರ್ಥ್ಯ ಹೊಂದಿದೆ. ಸ್ನಾಪ್‌ಡ್ರಾಗನ್‌ನ 700 ಸೀರೀಸ್‌ನಷ್ಟೇ ಸಮರ್ಥವಾಗಿ ಕೆಲಸ ಮಾಡುತ್ತದೆ. ಇದಕ್ಕೆ ಜಿಪಿಯು 2.0 ಟಬೋì ಗ್ರಾಫಿಕ್ ಪ್ರೊಸೆಸಿಂಗ್ ತಂತ್ರಜ್ಞಾನ ನೀಡಲಾಗಿದ್ದು, ಇದರ ಅನುಕೂಲವೆಂದರೆ ದೊಡ್ಡ ಗೇಮ್‌ಗಳನ್ನು ಸರಾಗವಾಗಿ ಆಡಬಹುದು.ಕಣ್ಣಿಗೆ ಹಬ್ಬಮೊಬೈಲ್‌ನ ಪರದೆ 6.21 ಇಂಚಿನದಾಗಿದ್ದು, 2340×1080 ಪಿಕ್ಸಲ್ ಅಂದರೆ, ಫುಲ್ ಎಚ್‌ಡಿ ಪ್ಲಸ್ ಆಗಿದೆ. 415 ಪಿಪಿಐ ಹೊಂದಿದೆ. ಪರದೆಯ ಮೇಲು¤ದಿಯ ಮಧ್ಯದಲ್ಲಿ ನೀರಿನ ಹನಿ ಬೀಳುವಂಥ ನಾಚ್ ಹೊಂದಿದೆ.
ಎಲ್‌ಟಿಪಿಎಸ್ ಡಿಸ್‌ಪ್ಲೇ ಹೊಂದಿದೆ. ನೆನಪಿರಲಿ: ಎಲ್‌ಟಿಪಿಎಸ್ ಡಿಸ್‌ಪ್ಲೇಯಲ್ಲಿ ಮಾಮೂಲಿ ಐಪಿಎಸ್ ಡಿಸ್‌ಪ್ಲೇಗಿಂತ ದೃಶ್ಯಗಳು ಚೆನ್ನಾಗಿ ಕಾಣುತ್ತವೆ. ಶೇ. 90ರಷ್ಟು ಪರದೆ ಮತ್ತು ದೇಹದ ಅನುಪಾತ ಹೊಂದಿದೆ. ಇದರಲ್ಲಿರುವುದು ಅಂಡ್ರಾಯ್ಡ 9.0 ಪೀ ಕಾರ್ಯಾಚರಣೆ ವ್ಯವಸ್ಥೆ. ಇದಕ್ಕೆ ಹುವಾವೇಯದೇ ಆದ ಇಎಂಯುಐ 9.0 ಕಾರ್ಯಾಚರಣೆ ವ್ಯವಸ್ಥೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.
-ತ್ರಿವಳಿ ಕ್ಯಾಮೆರಾ
-32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ
-4 ಜಿಬಿ ರ್ಯಾಮ್
– 128 ಜಿ.ಬಿ ಇಂಟರ್ನಲ್ ಮೆಮೊರಿ
– ಫುಲ್ ಎಚ್‌ಡಿ ಪ್ಲಸ್ ಪರದೆ
-ಕೆ.ಎಸ್. ಬನಶಂಕರ ಆರಾಧ್ಯ