Advertisement
ವರದಿ ಫಲಶ್ರುತಿತಂತಿ ತೀರಾ ತಗ್ಗಲಿದ್ದು, ಅಪಾಯಕಾರಿ ಸ್ಥಿತಿಯಲ್ಲಿದೆ ಎಂದು ಮೇ 1ರಂದು ಉದಯವಾಣಿ ಪತ್ರಿಕೆ ಸಚಿತ್ರ ವರದಿ ಪ್ರಕಟಿಸಿ, ಸಂಭವಿಸಬಹುದಾದ ಅಪಾಯ ಕುರಿತು ಎಚ್ಚರಿಸಿತ್ತು. ಗುತ್ತಿಗೆದಾರರು, ಲೋಕೋ ಪಯೋಗಿ ಇಲಾಖೆ, ಮೆಸ್ಕಾಂ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಆಗ್ರಹಿ ಸಿತ್ತು. ಸಮಸ್ಯೆಯ ಗಂಭೀರತೆ ಯನ್ನು ಮನಗಂಡ ಮೆಸ್ಕಾಂನ ಕಾರ್ಯನಿರ್ವಾಹಕ ಎಂಜಿನಿಯರ್ ನಾರಾಯಣ ನಾಯ್ಕ ಅವರು ರಸ್ತೆ ಕಾಮಗಾರಿ ನಡೆಸುತ್ತಿದ್ದ ಗುತ್ತಿಗೆದಾರರಿಗೆ ವಿದ್ಯುತ್ ತಂತಿ ಏರಿಸುವಂತೆ ಸೂಚಿಸಿದ್ದರು. ಅಂದೇ ಗುತ್ತಿಗೆದಾರರು ಕಂಬ ಸ್ಥಳಾಂತರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುವುದು ಸ್ಥಳೀಯರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.