Advertisement

HSRP ಅಳವಡಿಕೆ ಗಡುವು 3 ತಿಂಗಳು ವಿಸ್ತರಣೆ

10:39 PM Nov 16, 2023 | Team Udayavani |

ಬೆಂಗಳೂರು: ಸಾರ್ವಜನಿಕರ ಅನುಕೂಲಕ್ಕಾಗಿ ರಾಜ್ಯದ ಹಳೆಯ ವಾಹನಗಳಿಗೆ “ಅತಿ ಸುರಕ್ಷಿತ ನೋಂದಣಿ ಫ‌ಲಕ’ (ಎಚ್‌ಎಸ್‌ಆರ್‌ಪಿ) ಅಳವಡಿಕೆಗೆ ವಿಧಿಸಿದ್ದ ಗಡುವನ್ನು ಮೂರು ತಿಂಗಳು ವಿಸ್ತರಣೆ ಮಾಡಿರುವ ಸರಕಾರ, ಈ ಸಂಬಂಧ ಗುರುವಾರ ಆದೇಶ ಹೊರಡಿಸಿದೆ.

Advertisement

ಅದರಂತೆ 2019ರ ಎಪ್ರಿಲ್‌ 1ಕ್ಕೂ ಮುನ್ನ ನೋಂದಣಿಯಾದ ವಾಹನಗಳ ನೋಂದಣಿ ಫ‌ಲಕಗಳನ್ನು ಎಚ್‌ಎಸ್‌ಆರ್‌ಪಿಗೆ ಮಾರ್ಪಡಿಸಲು 2024ರ ಫೆಬ್ರವರಿ 17ರ ವರೆಗೆ ಕಾಲಾವಕಾಶ ನೀಡಲಾಗಿದೆ.

ಸಾಮಾನ್ಯ ನೋಂದಣಿ ಫ‌ಲಕಗಳನ್ನು ಬದಲಾಯಿಸಿ ಎಚ್‌ಎಸ್‌ಆರ್‌ಪಿ ಅಳವಡಿಸಿಕೊಂಡ ವಾಹನಗಳ ಸಂಖ್ಯೆ ರಾಜ್ಯದಲ್ಲಿ ಅಂದಾಜು 2ರಿಂದ 2.5 ಲಕ್ಷ. ಆದರೆ, ಇನ್ನೂ ಎರಡು ಕೋಟಿ ವಾಹನಗಳ ಫ‌ಲಕಗಳು ಎಚ್‌ಎಸ್‌ಆರ್‌ಪಿಗೆ ಪರಿವರ್ತನೆ ಆಗಬೇಕಿದೆ. ಈ ಹಿನ್ನೆಲೆಯಲ್ಲಿ ಅವಧಿ ವಿಸ್ತರಿಸಬೇಕೆಂಬ ಕೂಗು ಕೇಳಿಬಂದಿತ್ತು. ಈ ಮಧ್ಯೆ ಒಇಎಂ (ಒರಿಜಿನಲ್‌ ಮ್ಯಾನ್ಯುಫ್ಯಾಕ್ಚರರ್‌)ಗಳಿಗೆ ಮಾತ್ರ ಎಚ್‌ಎಸ್‌ಆರ್‌ಪಿ ಪೂರೈಕೆಗೆ ಅವಕಾಶ ಕಲ್ಪಿಸಿದ್ದರಿಂದ ಉಳಿದ ತಯಾರಕರನ್ನೂ ಪರಿಗಣಿಸಬೇಕು ಎಂಬ ಒತ್ತಾಯವೂ ಕೇಳಿಬಂದಿತ್ತು. ಪ್ರಕರಣವು ಕೋರ್ಟ್‌ ಮೆಟ್ಟಿಲು ಕೂಡ ಏರಿತ್ತು. ಈ ಎಲ್ಲ ಬೆಳವಣಿಗೆಗಳ ನಡುವೆ ಅಳವಡಿಕೆಗೆ ವಿಧಿಸಿದ ಗಡುವು ವಿಸ್ತರಿಸಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next