Advertisement

ಸಿಕ್ಕಿಂ: ಭೂತಿಯಾ ಹಂರೋ ಸಿಕ್ಕಿಂ ಪಾರ್ಟಿ ಎಲ್ಲ ಸ್ಥಾನಗಳಿಗೆ ಸ್ಪರ್ಧೆ

06:30 AM Mar 04, 2019 | udayavani editorial |

ಗ್ಯಾಂಗ್‌ಟೋಕ್‌ : ಸಿಕ್ಕಿಂ ನಲ್ಲಿನ ಏಕೈಕ ಲೋಕಸಭಾ ಸ್ಥಾನ ಮತ್ತು ವಿಧಾನಸಭೆಯ ಎಲ್ಲ 32 ಸ್ಥಾನಗಳಿಗೆ ಬೈಚುಂಗ್‌ ಭೂತಿಯಾ ಅವರ ಹಂರೋ ಸಿಕ್ಕಿಂ ಪಾರ್ಟಿ (ಎಚ್‌ ಎಸ್‌ಪಿ) ಸ್ಪರ್ಧಿಸಲಿದೆ. 

Advertisement

ದೇಶದ ಪ್ರಸಿದ್ಧ ಮಾಜಿ ಫ‌ುಟ್ಬಾಲ್‌ ಆಟಗಾರನಾಗಿರುವ ಭೂತಿಯಾ ಅವರು ಈ ವಿಷಯವನ್ನು ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು. ಪಕ್ಷವು ‘ಹಂರೋ ಸಿಕ್ಕಿಂ, ನ್ಯೂ ಸಿಕ್ಕಿಂ’ ಎಂಬ ಚುನಾವಣಾ ಘೋಷ ವಾಕ್ಯವನ್ನು ರೂಪಿಸಿದೆ ಎಂದವರು ಹೇಳಿದರು. 

ಆಳುವ ಸಿಕ್ಕಿಂ ಡೆಮೋಕ್ರಾಟಿಕ್‌ ಫ್ರಂಟ್‌ (ಎಸ್‌ಡಿಎಫ್) ವಿರುದ್ಧದ ಹೋರಾಟಕ್ಕೆ ತಮ್ಮ ಪಕ್ಷ ಇತರ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಹೊಂದುವ ಸಾಧ್ಯತೆ ಇದೆ ಎಂಬ ಸುಳಿವನ್ನು ಭೂತಿಯಾ ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next