Advertisement

ನಟನೆಯಲ್ಲಿ ಬಾಲಿವುಡ್‌ ಮೀರಿಸುವ ರಂಗ ಕಲಾವಿದರು: ಡಾ|ಎಚ್‌.ಎಸ್‌. ಬಲ್ಲಾಳ್‌

10:54 PM Mar 06, 2021 | Team Udayavani |

ಉಡುಪಿ: ರಂಗಭೂಮಿ ಕಲಾವಿದರ ಅಭಿನಯ ಸಾಮರ್ಥ್ಯ ಬಾಲಿವುಡ್‌ ಕಲಾವಿದರಿಗಿಂತ ಉತ್ತಮವಾಗಿದೆ ಎಂದು ಮಾಹೆಯ ಸಹಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ತಿಳಿಸಿದರು.

Advertisement

ಶನಿವಾರ ಇಂದ್ರಾಳಿ ಶಿವಪ್ರಭಾ ಯಕ್ಷಗಾನ ಕೇಂದ್ರದ ಸುವರ್ಣ ಮಹೋತ್ಸವದ ಪ್ರಯುಕ್ತ ಕೇಂದ್ರದಲ್ಲಿ ಹಮ್ಮಿಕೊಳ್ಳಲಾದ ರಾಷ್ಟ್ರಮಟ್ಟದ ರಂಗಭೂಮಿ ಕಲಾವಿದರಿಗೆ‌ ಮತ್ತು ರಂಗಕರ್ಮಿಗಳಿಗೆ ಉಚಿತ ಯಕ್ಷಗಾನ ಕಮ್ಮಟ ಕಾರ್ಯಕ್ರಮ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಗಿರೀಶ್‌ ಕಾರ್ನಾಡ್‌, ಓಂಪುರಿ ಅಂತಹ ಶ್ರೇಷ್ಠ ಕಲಾವಿದರು ರಂಗಭೂಮಿಯ ಮೂಲಕ ಬೆಳೆದು ಬಂದವರು. ಸತತ ಪರಿಶ್ರಮ ಹಾಗೂ ಶ್ರದ್ಧೆಯಿಂದ ಯಾವುದೇ ಒಂದು ದೃಶ್ಯವನ್ನು ಒಂದೇ ಟೇಕ್‌ನಲ್ಲಿ ಯಾವುದೇ ಬಾರಿಗೆ ಮುಗಿಸುವ ಸಾಮರ್ಥ್ಯ ರಂಗಭೂಮಿ ಕಲಾವಿದರಿಗೆ ಇದೆ. ಇದಕ್ಕೆ ಮುಖ್ಯ ಕಾರಣ ವಿದ್ಯೆ ಹೇಳಿಕೊಟ್ಟ ಗುರುಗಳು ಎಂದು ಹೇಳಿದರು.

ಮಾಹೆ ಕುಲಸಚಿವ ಡಾ| ನಾರಾಯಣ ಸಭಾಹಿತ್‌, ಕೆಎಂಸಿ ನಿವೃತ್ತ ಡೀನ್‌ ಡಾ| ಪಿ.ಎಲ್.ಎನ್‌. ರಾವ್‌, ಜಾನಪದ ಪರಿಷತ್‌ ಜಿಲ್ಲಾಧ್ಯಕ್ಷ ಡಾ| ತಲ್ಲೂರು ಶಿವರಾಮ ಶೆಟ್ಟಿ, ವಿಜಯ ಬ್ಯಾಂಕ್‌ ನಿವೃತ್ತ ಪ್ರಬಂಧಕ ಭುವನ ಪ್ರಸಾದ್‌ ಹೆಗ್ಡೆ, ಕೇಂದ್ರದ ಪ್ರಾಂಶುಪಾಲ ಬನ್ನಂಜೆ ಸಂಜೀವ ಸುವರ್ಣ ಉಪಸ್ಥಿತರಿದ್ದರು.

ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ| ಬಿ. ಜಗದೀಶ್‌ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಮ್ಮಟದಲ್ಲಿ ದಿಲ್ಲಿ, ಮಹಾರಾಷ್ಟ್ರ, ಜೈಪುರ, ಉತ್ತರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ 18 ಕಲಾವಿದರು ಯಕ್ಷಗಾನ ಪ್ರದರ್ಶನ ನೀಡಿದರು.

Advertisement

ಯಕ್ಷಗಾನ ಕಮ್ಮಟ ಮಾ.10 ವರೆಗೆ ನಡೆಯಲಿದೆ. ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಯುವ ಕಲಾವಿದರು ಯಕ್ಷಗಾನ ಕಲೆಯ ರಾಯಭಾರಿಗಳು
ಕರಾವಳಿ ಜಿಲ್ಲೆಗೆ ಸೀಮಿತವಾಗಿರುವ ಯಕ್ಷಗಾನ ಕಲೆ ಎಲ್ಲೆಡೆ ಹರಡಬೇಕೆಂಬ ದೃಷ್ಟಿಯಿಂದ ಮಾಹೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಯಕ್ಷಗಾನ ಕಮ್ಮಟದಲ್ಲಿ ಭಾಗವಹಿಸಿದ ಯುವ ಕಲಾವಿದರು ಯಕ್ಷಗಾನ ಕಲೆಯ ರಾಯಭಾರಿಗಳು. ಇಲ್ಲಿ ಕಲಿತ ವಿದ್ಯೆಯನ್ನು ನಿಮ್ಮ ರಾಜ್ಯಕ್ಕೆ ತೆರಳಿ ಅಲ್ಲಿಯೂ ಪ್ರದರ್ಶನ ನೀಡಬೇಕು. ಜತೆಗೆ ಯಕ್ಷಗಾನ ಕಲೆ ಮಹತ್ವವನ್ನು ಜನರಿಗೆ ತಿಳಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ಮುಂದಿನ ದಿನದಲ್ಲಿ ಆಸ್ತಕರಿಗೆ ಯಕ್ಷಗಾನದಲ್ಲಿ ಹೆಚ್ಚಿನ ತರಬೇತಿಯನ್ನು ನೀಡಲಾಗುತ್ತದೆ ಎಂದು ಡಾ| ಎಚ್‌.ಎಸ್‌. ಬಲ್ಲಾಳ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next