Advertisement

ಎರಡನೇ ಮದುವೆಯಾಗಲಿದ್ದಾರೆಯೇ ನಟ ಹೃತಿಕ್ ರೋಷನ್ ?

05:31 PM Mar 03, 2023 | Team Udayavani |

ಮುಂಬಯಿ : ಬಾಲಿವುಡ್ ನಟ ಹೃತಿಕ್ ರೋಷನ್ ಮತ್ತು ಸಬಾ ಆಜಾದ್ ಜೋಡಿ ತಮ್ಮ ಪ್ರಣಯದಿಂದ ಸುದ್ದಿಯಾಗುತ್ತಿದ್ದು ಈಗ ವದಂತಿಗಳು ಅವರ ಮದುವೆಯ ವರದಿಗಳೊಂದಿಗೆ ಇನ್ನಷ್ಟು ಸುದ್ದಿಯಾಗುತ್ತಿದೆ.

Advertisement

ತೀರಾ ಇತ್ತೀಚೆಗೆ ಹೃತಿಕ್ ಮತ್ತು ಸಬಾ ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು ಇಳಿಯುವ ಮೊದಲು ಅವರು ಕಾರಿನಲ್ಲಿ ಸಿಹಿ ಮುತ್ತು ಹಂಚಿಕೊಂಡ ಬಳಿಕ ಸುದ್ದಿಯಾಗಿದ್ದರು. ಈಗ ವೈರಲ್ ಆಗುತ್ತಿರುವ ಟ್ವೀಟ್! ನಲ್ಲಿ ”ಇಬ್ಬರು ನವೆಂಬರ್ 2023 ರಲ್ಲಿ ಮದುವೆಯಾಗಲಿದ್ದಾರೆ!” ಎಂದು ಬರೆಯಲಾಗಿದೆ. ಬಾಲಿವುಡ್ ಕಿ ನ್ಯೂಸ್ ಖಾತೆಯಿಂದ ಮಾಡಿರುವ ಟ್ವೀಟ್ ವೈರಲ್ ಆಗುತ್ತಿದೆ.

ಹೃತಿಕ್ ಮತ್ತು ಸಬಾ ಇಬ್ಬರೂ ತಮ್ಮ ಸಂಬಂಧದ ಬಗ್ಗೆ ತುಂಬಾ ಮುಕ್ತವಾಗಿದ್ದಾರೆ ಮತ್ತು ಆಗಾಗ್ಗೆ ಒಟ್ಟಿಗೆ ತಿರುಗಾಡುವುದನ್ನು ಕಾಣಬಹುದಾಗಿದೆ.ಈ ಹಿಂದೆ ವಿವಾಹದ ಕುರಿತವರದಿಯನ್ನು ಹೃತಿಕ್ ರೋಷನ್ ತಳ್ಳಿಹಾಕಿದ್ದರು.ಇದರಲ್ಲಿ ಯಾವುದೇ ಸತ್ಯವಿಲ್ಲ. ಸಾರ್ವಜನಿಕ ವ್ಯಕ್ತಿಯಾಗಿ, ನಾನು ಕುತೂಹಲದ ಮಸೂರದಲ್ಲಿ ಇರುತ್ತೇನೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ ಎಂದು ಹೇಳಿದ್ದರು.

ಸದ್ಯ ಹೃತಿಕ್ ಅವರು ಫೈಟರ್ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಈ ಚಿತ್ರದಲ್ಲಿ ಅವರು ಮೊದಲ ಬಾರಿಗೆ ದೀಪಿಕಾ ಪಡುಕೋಣೆ ಅವರೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಹೃತಿಕ್ ಮತ್ತು ದೀಪಿಕಾ ಇತ್ತೀಚೆಗೆ ಕಾಶ್ಮೀರದಲ್ಲಿ ಶೂಟಿಂಗ್ ಮಾಡಿದ್ದಾರೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಚಿತ್ರವು ಅದ್ಧೂರಿಯಾಗಿ ಮೂಡಿಬರಲಿದೆ ಎನ್ನಲಾಗಿದೆ. ಚಿತ್ರವು 2024 ಜನವರಿ 25 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.ಹೃತಿಕ್‌ ಅವರು ವಾರ್ 2 ಚಿತ್ರದಲ್ಲಿ ಕೂಡ ನಟಿಸಲಿದ್ದಾರೆ.

ಹೃತಿಕ್ ರೋಷನ್ 2000 ನೇ ಇಸವಿಯಲ್ಲಿ ಬೆಂಗಳೂರಿನಲ್ಲಿ ಖಾಸಗಿ ಸಮಾರಂಭದಲ್ಲಿ ಸುಸೇನ್ ಖಾನ್ ಅವರನ್ನು ವಿವಾಹವಾಗಿದ್ದರು. ಅವರು ಡಿಸೆಂಬರ್ 2013 ರಲ್ಲಿ ದೂರವಾಗಿದ್ದರು.ವಿಚ್ಛೇದನವನ್ನು ನವೆಂಬರ್ 2014 ರಲ್ಲಿ ಅಂತಿಮಗೊಳಿಸಲಾಗಿತ್ತು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next