ಮುಂಬೈ : ಬಾಲಿವುಡ್ ಖ್ಯಾತ ನಟ ಹೃತಿಕ್ ರೋಷನ್ ಪ್ರಪಂಚದ ಅತೀ ಸುಂದರ ವ್ಯಕ್ತಿ ಎಂಬ ಬಿರುದಿಗೆ ಭಾಜನರಾಗಿದ್ದಾರೆ.
ಹಾಲಿವುಡ್ ನಟ ಕ್ರಿಸ್ ಇವಾನ್ಸ್, ಸ್ಟಾರ್ ಪುಟ್ಬಾಲ್ ಆಟಗಾರ ಡೇವಿಡ್ ಬೆಕ್ ಹ್ಯಾಮ್ , ರಾಬರ್ಟ್ ಪಾಟಿನ್ ಸನ್ ಹಾಗೂ ಖ್ಯಾತ ಮಾಡೆಲ್ ಉಮರ್ ಬೋರ್ಖಾನ್ ಅಲ್ ಗಲಾ ಅವರನ್ನು ಹಿಂದಿಕ್ಕಿರುವ 45 ವರ್ಷದ ಹೃತಿಕ್ ರೋಷನ್ ಈ ಬಿರುದನ್ನು ಪಡೆದುಕೊಂಡಿದ್ದಾರೆ .
ಅಮೇರಿಕ ಮೂಲದ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಲ್ಲಿ ವಿವಿಧ ತಾರೆಗಳನ್ನು ಹಿಂದಿಕ್ಕುವಲ್ಲಿ ಹೃತಿಕ್ ರೋಷನ್ ಯಶಸ್ವಿಯಾಗಿದ್ದಾರೆ.
ಇತ್ತೀಚಿಗೆ ನಡೆದ ಸ್ಪರ್ಧೆಯೊಂದರಲ್ಲಿ ಕೂಡ ವಿಶ್ವದ ಟಾಪ್-5 ವ್ಯಕ್ತಿ ಪ್ರಶಸ್ತಿಯನ್ನು ಸಹ ಪಡೆದುಕೊಂಡಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಹೃತಿಕ್, ಇದನ್ನು ಸಾಧನೆ ಎಂದು ಪರಿಗಣಿಸುವುದಿಲ್ಲ. ಮುಖದ ಅಂದ ಎಂದಿಗೂ ಶಾಶ್ವತವಲ್ಲ. ಈ ಜಗತ್ತಿನಲ್ಲಿ ಹೆಚ್ಚು ಮೌಲ್ಯಯುತವಾದದ್ದು ವ್ಯಕ್ತಿತ್ವ. ಹಾಗಾಗಿ ಉತ್ತಮ ವ್ಯಕ್ತಿತ್ವ ನಮ್ಮನ್ನು ಯಾವಾಗಲೂ ಆಕರ್ಷಿತರನ್ನಾಗಿ ಮಾಡುತ್ತದೆ ಎಂದು ಆಭಿಪ್ರಾಯ ಪಟ್ಟಿದ್ದಾರೆ.