Advertisement

ಎಐಸಿಸಿ ಅಧ್ಯಕ್ಷ ಖರ್ಗೆ ಭೇಟಿಯಾಗಿ ಕೈ ಟಿಕೆಟ್ ಕುರಿತು ಚರ್ಚೆ ನಡೆಸಿದ ಎಚ್.ಆರ್.ಶ್ರೀನಾಥ

11:46 AM Jan 03, 2023 | Team Udayavani |

ಗಂಗಾವತಿ: ಮುಂಬರುವ 2023 ರ  ವಿಧಾನಸಭಾ ಚುನಾವಣೆಯಲ್ಲಿ ಗಂಗಾವತಿ ಕ್ಷೇತ್ರ ಮಹತ್ವ ಪಡೆದಿದ್ದು ಕಿಷ್ಕಿಂಧಾ ಅಂಜನಾದ್ರಿ ಪವಿತ್ರ ಕ್ಷೇತ್ರ ಇರುವುದರಿಂದ ಈ ಭಾರಿ ಕಾಂಗ್ರೆಸ್ ಟಿಕೇಟ್ ನೀಡುವ ಸಂದರ್ಭದಲ್ಲಿ  ಧಾರ್ಮಿಕ ವಿಷಯವನ್ನು ಪರಿಗಣಿಸಿ ಬಿಜೆಪಿಗೆ ಪ್ರಬಲ ಪೈಪೋಟಿ ನೀಡ ಬಲ್ಲ ಬಹುಸಂಖ್ಯಾತರಿಗೆ ಕಾಂಗ್ರೆಸ್ ಪಕ್ಷ ಬೀಫಾರಂ ನೀಡುವಂತೆ ಮನವಿ ಮಾಡಿರುವುದಾಗಿ ವಿಧಾನಪರಿಷತ್ ಮಾಜಿ ಸದಸ್ಯ ಎಚ್.ಆರ್.ಶ್ರೀ ನಾಥ  ತಿಳಿಸಿದ್ದಾರೆ.

Advertisement

ಅವರು ಉದಯವಾಣಿ ಜತೆ ಮಾತನಾಡಿ, ಬಿಜೆಪಿಯ ಬ್ರಹ್ಮಾಂಡ ಭ್ರಷ್ಟಾಚಾರ ಹಾಗೂ ಜಾತಿ ಧರ್ಮ  ಒಡೆಯುವ ಕುತಂತ್ರಕ್ಕೆ ರಾಜ್ಯದ ಜನತೆ ಬೇಸತ್ತಿದ್ದು 2023 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಗಳಿಸಲಿದೆ. ಬಿಜೆಪಿಯವರು ದೇವರ ಧರ್ಮವನ್ನು ಬಳಸಿಕೊಂಡು ರಾಜಕೀಯ ಅಧಿಕಾರ ಹಿಡಿಯುತ್ತಿದ್ದು ಕಿಷ್ಕಿಂಧಾ ಅಂಜನಾದ್ರಿ ಹೆಸರು ಹೇಳಿಕೊಂಡು ಯುವಜನರನ್ನು ದಾರಿ ತಪ್ಪಿಸಿ ತಮ್ಮ ಹಿಡೆನ್ ಅಜೆಂಡಾ ಹೇರುವ ಹುನ್ನಾರ ನಡೆಸಿದ್ದಾರೆ.

ಕಿಷ್ಕಿಂಧಾ ಅಂಜನಾದ್ರಿ ಹೆಸರು ಪದೇಪದೇ ಹೇಳುವ ಬಿಜೆಪಿ ಸಂಘಪರಿವಾರದವರು ಇಲ್ಲಿನ ಅಭಿವೃದ್ಧಿ ಕಾರ್ಯಕ್ಕೆ ಒಂದು ರೂ. ಗಳನ್ನು ಬಿಡುಗಡೆ ಮಾಡಿಲ್ಲ. ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ ಅಂಜನಾದ್ರಿಯಲ್ಲಿ ಒಂದು ರೂ ನೀಡದೇ ಭೂಮಿ ಪೂಜೆ ಮಾಡಿದ್ದು ಫೆ.15 ಕ್ಕೆ ದೇಶದ ಪ್ರಧಾನಿ ಯವರನ್ನು ಪುನಹ ಭೂಮಿ ಪೂಜೆ ಮಾಡಲು ಆಹ್ವಾನಿಸಲಾಗಿದೆ. ಮುಂದಿನ 2023ರ ವಿಧಾನಸಭಾ ಚುನಾವಣೆಯಲ್ಲಿ ಕಿಷ್ಕಿಂಧಾ ಅಂಜನಾದ್ರಿಯನ್ನು  ಬಿಜೆಪಿ ಸಂಘಪರಿವಾರದವರು ಚುನಾವಣಾ ವಿಷಯಾಗಿ ಮಾಡುವ ಷಡ್ಯಂತ್ರ ಮಾಡಿದ್ದು ಕಾಂಗ್ರೆಸ್ ಪಕ್ಷದ ಸದಸ್ಯ ಸರಕಾರವಿದ್ದಾಗ   ಕಿಷ್ಕಿಂಧಾ ಅಂಜನಾದ್ರಿಗೆ ಕೋಟ್ಯಾಂತರ ರೂ.ಅನುದಾನ ನೀಡಿದೆ.

ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸಹ ಬಹುಸಂಖ್ಯಾತ ಸಮುದಾಯದ ಅಭ್ಯರ್ಥಿ ಪಕ್ಷ ಟಿಕೇಟ್ ವಿತರಣೆ ಮಾಡುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ,ಸುರ್ಜೆವಾಲ್, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ, ಬಿ.ಕೆ.ಹರಿಪ್ರಸಾದ ಇವರಲ್ಲಿ ಮನವಿ ಮಾಡಲಾಗಿದೆ ಎಂದು ಶ್ರೀನಾಥ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next