ರಬಕವಿ ಬನಹಟ್ಟಿ: ಕಳೆದ ಕೆಲವು ದಿನಗಳಿಂದ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಜಿಟಿ ಜಿಟಿ ಮಳೆ ಹಾಗೂ ಮಹಾರಾಷ್ಟ್ರದ ವಿವಿಧ ಜಲಾಶಯಗಳಿಂದ ನೀರು ಬಿಡುತ್ತಿರುವುದರಿಂದ ತಾಲೂಕಿನ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ.
ರಬಕವಿ-ಬನಹಟ್ಟಿ ತಾಲ್ಲೂಕಿನ ಹಿಪ್ಪರಗಿ ಜಲಾಶಯದಲ್ಲಿ ಮಂಗಳವಾರ ಒಳ ಹರಿವು 62 ಸಾವಿರ ಕ್ಯೂಸೆಕ್ ಇದ್ದು, 61 ಸಾವಿರ ಕ್ಯೂಸೆಕ್ ಹೊರ ಹರಿವು ಇದೆ.
ಆರು ಟಿಎಂಸಿ ಸಾಮರ್ಥ್ಯವಿರುವ ಜಲಾಶಯದಲ್ಲಿ ಸದ್ಯ 4.57 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದ ನೀರಿನ ಮಟ್ಟ 524. 87 ರಷ್ಟು ಇದೆ ಎಂದು ಜಲಾಶಯದ ಸಹಾಯಕ ಎಂಜಿನಿಯರ್ ವಿಠ್ಠಲ ನಾಯಕ ಪತ್ರಿಕೆಗೆ ತಿಳಿಸಿದರು.
ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ರಬಕವಿ ಬನಹಟ್ಟಿ ಸಮೀಪದಲ್ಲಿ ನದಿಯ ಹಿನ್ನೀರಿನ ಪ್ರಮಾಣ ಕೂಡಾ ಹೆಚ್ಚಾಗುತ್ತಿದೆ. ಇದರಿಂದಾಗಿ ನದಿ ತೀರದ ಸುತ್ತ ಮುತ್ತಲಿನ ಬೆಳೆಗಳು ಹಿನ್ನೀರಿನಿಂದ ತೊಂದರೆಯಾಗಿದೆ.
ಇದನ್ನೂ ಓದಿ :ಬಿಜೆಪಿ ಮುಕ್ತ ಬಬಲೇಶ್ವರಕ್ಕೆ ನಾಂದಿ: ಶಾಸಕ ಎಂ.ಬಿ. ಪಾಟೀಲ